Saturday, September 14, 2024
Homeರಾಷ್ಟ್ರೀಯ | National70 ವರ್ಷದ ವೃದ್ದೆಯ ಮೇಲೆ 29 ವರ್ಷದ ವ್ಯಕ್ತಿಯಿಂದ ಅತ್ಯಾಚಾರ

70 ವರ್ಷದ ವೃದ್ದೆಯ ಮೇಲೆ 29 ವರ್ಷದ ವ್ಯಕ್ತಿಯಿಂದ ಅತ್ಯಾಚಾರ

Kerala: 70-year-old woman raped during robbery bid, accused threw chilly powder at her

ಅಲಪ್ಪುಳ,ಆ.26– ಎಪ್ಪತ್ತು ವರ್ಷದ ವೃದ್ದೆ ಮೇಲೆ 29 ವರ್ಷದ ವ್ಯಕ್ತಿ ಅತ್ಯಾಚಾರ ನಡೆಸಿರುವ ಘಟನೆ ಕೇರಳದ ಅಲಪ್ಪುಳ ಬಳಿಯ ಕಯಂಕುಕಂನಲ್ಲಿ ನಡೆದಿದೆ.ವೃದ್ಧೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಕನಕಕುನ್ನು ನಿವಾಸಿ ಧನೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವೃದ್ಧೆ ವಾಸಿಸುತ್ತಿದ್ದ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಆಕೆಯ ಮೇಲೆ ಮೆಣಸಿನ ಪುಡಿ ಎರಚಿ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯಿಂದ ಸುಮಾರು ಏಳು ಪವನ್ ಚಿನ್ನಾಭರಣಗಳನ್ನು ಕ್ದೊಯ್ದಿದ್ದು, ಆಭರಣಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊರಗಿನಿಂದ ಬಾಗಿಲನ್ನು ಲಾಕ್ ಮಾಡಿ ಹೋಗುವಾಗ ಆರೋಪಿ ವೃದ್ದೆಯ ಮೊಬೈಲ್ ಫೋನ್ ಅನ್ನು ಸಹ ತೆಗೆದುಕೊಂಡನು. ಹೀಗಾಗಿ ಆಕೆ ತಕ್ಷಣ ಯಾರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

ನೆರೆಹೊರೆಯವರು ಬೆಳಿಗ್ಗೆ ಆಕೆಯನ್ನು ಕಂಡು ಆಸ್ಪತ್ರೆಗೆ ಕರೆದೊಯ್ದು ನಮಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.ಮಹಿಳೆ ಒಂಟಿಯಾಗಿದ್ದಾಳೆ ಎಂದು ತಿಳಿದ ನಂತರ ಆತ ಆಕೆಯನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News