Wednesday, September 11, 2024
Homeರಾಷ್ಟ್ರೀಯ | Nationalಯೂ ಟರ್ನ್ ಹೊಡೆದ ಕೋಲ್ಕತ್ತಾ ವೈದ್ಯೆಯ ಹತ್ಯಾಚಾರಿ ಆರೋಪಿ

ಯೂ ಟರ್ನ್ ಹೊಡೆದ ಕೋಲ್ಕತ್ತಾ ವೈದ್ಯೆಯ ಹತ್ಯಾಚಾರಿ ಆರೋಪಿ

Kolkata Lie Detector Test - What Accused Sanjay Roy Told CBI

ಕೋಲ್ಕತ್ತಾ,ಆ.26- ಆರಂಭದಲ್ಲಿ ಅತ್ಯಾಚಾರ ಮತ್ತು ಕೊಲೆ ಮಾಡಿದ್ದು ನಾನೇ ಎಂದು ಹೇಳಿಕೆ ನೀಡಿದ್ದ ವೈದ್ಯೆ ವಿದ್ಯಾರ್ಥಿನಿ ಕೊಲೆ ಆರೋಪಿ ಸಂಜಯ್ ರಾಯ್ ಯೂ ಟರ್ನ್ ಹೊಡೆದಿದ್ದಾನೆ. ನಾನು ಆರ್ಜಿಕರ್ ಆಸ್ಪತ್ರೆಯ ಸೆಮಿನಾರ್ ಹಾಲ್ ಪ್ರವೇಶಿಸುವ ವೇಳೆಗೆ ವೈದ್ಯೆ ಮೃತಪಟ್ಟಿದ್ದರು ಎಂದು ಅತ್ಯಾಚಾರಿ ಆರೋಪಿ ಸಂಜಯ್ ರಾಯ್ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಹೇಳಿಕೆ ನೀಡಿದ್ದಾನೆ.

ಅತ್ಯಾಚಾರ ಮತ್ತು ಕೊಲೆ ಮಾಡಿದ್ದು ನಾನೇ ಎಂದು ಈಗಾಗಲೇ ಒಪ್ಪಿಕೊಂಡಿರುವ ಸಂಜಯ್ ರಾಯ್ ಇದೀಗ ಯೂಟರ್ನ್ ಹೊಡೆದಿದ್ದು, ಆತನ ಮಾನಸಿಕ ಸ್ಥಿತಿ ಬಗ್ಗೆ ಅನುಮಾನ ಹುಟ್ಟಿದೆ. ಅಂದು ನಾನು ಸೆಮಿನಾರ್ ಹಾಲ್ಗೆ ಹೋಗುವ ಮೊದಲು ಆಕೆ ಸಾವನ್ನಪ್ಪಿದ್ದಳು, ನಾನು ನಿರಪರಾಧಿ ಎಂದು ಆತ ಹೇಳುತ್ತಿದ್ದಾನೆ.

ಕೋಲ್ಕತ್ತಾದ ಪ್ರೆಸಿಡೆನ್ಸಿ ಜೈಲಿನಲ್ಲಿ ಸಿಬಿಐ ಅಧಿಕಾರಿಗಳು ಆರೋಪಿ ಸಂಜಯ್ ರಾಯ್ ಅವರ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸಿದ್ದರು. ಸುಳ್ಳು ಪತ್ತೆ ಪರೀಕ್ಷೆ ವೇಳೆ ಸುಳ್ಳು ಹಾಗೂ ಅನುಮಾನಾಸ್ಪದ ಉತ್ತರಗಳನ್ನು ಗುರುತಿಸಲಾಗಿದೆ. ಸಂಜಯ್ ರಾಯ್ ಆ ವೇಳೆ ಆತಂಕಗೊಂಡಿದ್ದ, ಸಿಬಿಐ ಹಲವು ಸಾಕ್ಷ್ಯಗಳನ್ನು ಮುಂದಿಟ್ಟರೂ ಆತ ಸಮರ್ಥನೆ ನೀಡುತ್ತಲೇ ಇದ್ದ ಎಂದು ತಿಳಿದುಬಂದಿದೆ.

ಸೆಮಿನಾರ್ ಹಾಲ್ನಲ್ಲಿ ಮಹಿಳಾ ವೈದ್ಯರನ್ನು ನೋಡಿದಾಗ ಆಕೆ ಆಗಲೇ ಮತಪಟ್ಟಿದ್ದಾಳೆ ಎಂದು ಆರೋಪಿ ಸಂಜಯ್ ರಾಯ್ ಹೇಳಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ. ಅತ್ಯಾಚಾರ ಮತ್ತು ಕೊಲೆಯ ಘಟನೆಯ ಬಗ್ಗೆ ತನಗೆ ಏನೂ ತಿಳಿದಿಲ್ಲ ಎಂದು ಸಂಜಯ್ ರಾಯ್ ಜೈಲು ಸಿಬ್ಬಂದಿಗೆ ಹೇಳಿದ್ದ.ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಪಾಲಿಗ್ರಾಫ್ ಪರೀಕ್ಷೆಗೆ ಒಪ್ಪಿಕೊಂಡೆ ಎಂದು ಆರೋಪಿ ಹೇಳಿದ್ದ.

ಆರೋಪಿ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸುತ್ತಿದ್ದಾನೆ, ಆರೋಪಿಯು ತನ್ನ ಮುಖದ ಮೇಲೆ ಉಂಟಾದ ಗಾಯಗಳು ಮತ್ತು ಅಪರಾಧದ ಸಮಯದಲ್ಲಿ ಕಟ್ಟಡದಲ್ಲಿ ಇದ್ದ ಬಗ್ಗೆ ಯಾವುದೇ ತಪ್ತಿಕರ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿರುವುದು ದಢಪಟ್ಟಿದೆ. ಅವರ ದೇಹದ ಮೇಲೆ 25 ಗಾಯದ ಗುರುತುಗಳಿದ್ದವು. ಮಹಿಳಾ ವೈದ್ಯೆ ರಾತ್ರಿ ಪಾಳಿ ಮುಗಿಸಿ ವಿಶ್ರಾಂತಿ ಪಡೆಯಲು ಸೆಮಿನಾರ್ ಹಾಲ್ಗೆ ತೆರಳಿದ್ದರು ಎನ್ನಲಾಗಿದೆ. ಆಕೆಯ ಶವದ ಬಳಿ ಸಂಜಯ್ನ ಬ್ಲೂಟೂತ್ ಪತ್ತೆಯಾಗಿತ್ತು.

RELATED ARTICLES

Latest News