Saturday, April 27, 2024
Homeರಾಷ್ಟ್ರೀಯಬಿಎಂಡಬ್ಲ್ಯೂ ಕಾರು, ಚಿನ್ನಾಭರಣ ನೀಡದಕ್ಕೆ ಮದುವೆ ರದ್ದು : ವೈದೈ ಆತ್ಮಹತ್ಯೆ

ಬಿಎಂಡಬ್ಲ್ಯೂ ಕಾರು, ಚಿನ್ನಾಭರಣ ನೀಡದಕ್ಕೆ ಮದುವೆ ರದ್ದು : ವೈದೈ ಆತ್ಮಹತ್ಯೆ

ತಿರುವನಂತಪುರಂ,ಡಿ.7- ವಿದ್ಯಾವಂತರ ವರದಕ್ಷಿಣೆ ಮೋಹ ಇನ್ನು ನಿಂತಿಲ್ಲ. ವಿದ್ಯಾವಂತನೊಬ್ಬನ ಕುಟುಂಬದವರ ಡೌರಿ ಆಸೆಗೆ ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೇರಳದ ತಿರುವನಂತಪುರಂನಲ್ಲಿ 26ರ ಹರೆಯದ ಡಾ.ಶಹಾನಾ ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ವರದಕ್ಷಿಣೆ ಬೇಡಿಕೆಗಳನ್ನು ತನ್ನ ಕುಟುಂಬವು ಪೂರೈಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಆಕೆಯ ಪ್ರಿಯಕರ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ಡಾ.ಶಹಾನಾ ಸಾವಿನ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ಉತ್ತರಭಾರತ-ನೇಪಾಳದಲ್ಲಿ ಭೂಕಂಪನಗಳು ಸಾಮಾನ್ಯವಂತೆ

ಆತ್ಮಹತ್ಯೆಗೆ ಪ್ರಚೋದನೆ ಹಾಗೂ ವರದಕ್ಷಿಣೆ ತಡೆ ಕಾಯ್ದೆಯಡಿ ಪೊಲೀಸರು ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಾ ಶಹಾನಾ ತನ್ನ ತಾಯಿ ಮತ್ತು ಇಬ್ಬರು ಒಡಹುಟ್ಟಿದವರ ಜೊತೆ ವಾಸಿಸುತ್ತಿದ್ದರು. ಗಲ್‍ನಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ತಂದೆ ಎರಡು ವರ್ಷಗಳ ಹಿಂದೆ ನಿಧನರಾದರು. ಅವರು ಡಾ ಇಎ ರುವೈಸ್ ಅವರೊಂದಿಗೆ ಸ್ನೇಹ ಹೊಂದಿದ್ದರು ಮತ್ತು ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.

ಡಾ.ರುವಾಯಿಸ್ ಅವರ ಕುಟುಂಬ ವರದಕ್ಷಿಣೆಯಾಗಿ 150 ಗ್ರಾಂ ಚಿನ್ನಾಭರಣ, 15 ಎಕರೆ ಜಮೀನು ಮತ್ತು ಬಿಎಂಡಬ್ಲ್ಯು ಕಾರಿಗೆ ಬೇಡಿಕೆ ಇಟ್ಟಿದೆ ಎಂದು ಡಾ.ಶಹಾನಾ ಕುಟುಂಬ ಆರೋಪಿಸಿದೆ. ಶಹಾನಾ ಅವರ ಕುಟುಂಬವು ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ಹೇಳಿದಾಗ, ಆಕೆಯ ಗೆಳೆಯನ ಕುಟುಂಬವು ಮದುವೆಯನ್ನು ರದ್ದುಗೊಳಿಸಿತು ಎಂದು ತಿಳಿದುಬಂದಿದೆ.

ಇದರಿಂದ ಮನನೊಂದ ಯುವ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆಕೆಯ ಅಪಾರ್ಟ್‍ಮೆಂಟ್‍ನಲ್ಲಿ ಸಿಕ್ಕ ಸೂಸೈಡ್ ನೋಟ್‍ನಲ್ಲಿ ಎಲ್ಲರಿಗೂ ಹಣ ಮಾತ್ರ ಬೇಕು ಎಂದು ಬರೆಯಲಾಗಿದೆ ಎಂದು ತಿಳಿದುಬಂದಿದೆ.

ವರದಕ್ಷಿಣೆ ಬೇಡಿಕೆಯ ಆರೋಪದ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

RELATED ARTICLES

Latest News