Friday, April 4, 2025
Homeಜಿಲ್ಲಾ ಸುದ್ದಿಗಳು | District Newsಜಗಳ ಬಿಡಿಸಲು ಹೋದ ಸಂಬಂಧಿಗೆ ದೋಸೆ ತವಾದಿಂದ ಹೊಡೆದು ಕೊಲೆ

ಜಗಳ ಬಿಡಿಸಲು ಹೋದ ಸಂಬಂಧಿಗೆ ದೋಸೆ ತವಾದಿಂದ ಹೊಡೆದು ಕೊಲೆ

ಹಾಸನ,ಮಾ.13- ಜಗಳ ಬಿಡಿಸಲು ಹೋದ ಸಂಬಂಧಿಗೆ ದೋಸೆ ತವಾದಿಂದ ಹೊಡೆದು ಕೊಲೆ ಮಾಡಿರುವ ಘಟನೆ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದಲ್ಲಿ ನಡೆದಿದೆ.ಶಿವಮ್ಮ (38) ಕೊಲೆಯಾದ ಮಹಿಳೆ.ಕೂಲಿ ಕೆಲಸ ಮಾಡಿಕೊಂಡು ಶಿವಮ್ಮ, ಪತಿ ಅಮಾಸೆ ನಾಯ್ಕ ಹಾಗೂ ಪುತ್ರ ಜಗದೀಶ ಜೀವನ ಸಾಗಿಸುತ್ತಿದ್ದರು. ಇವರ ಪಕ್ಕದ ಮನೆಯಲ್ಲಿ ಸಂಬಂಗಳಾದ ಜಯಮ್ಮ ಹಾಗೂ ಪುತ್ರ ಕುಮಾರ ವಾಸವಾಗಿದ್ದರು.

ಕ್ಷುಲ್ಲಕ ಕಾರಣಕ್ಕೆ ಜಯಮ್ಮ ಹಾಗೂ ಕುಮಾರ ಜಗಳವಾಡುತ್ತಿದ್ದು, ಇದನ್ನು ಗಮನಿಸಿದ ಶಿವಮ್ಮ ಜಗಳ ಬಿಡಿಸಲು ಸಂಬಂಯ ಮನೆ ಬಳಿ ಹೋಗಿ ಕುಮಾರನಿಗೆ ಬುದ್ಧಿವಾದ ಹೇಳಿದ್ದಾರೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೋಸೆ ತವಾದಿಂದ ಶಿವಮ್ಮನ ಮೇಲೆ ಹಲ್ಲೆ ನಡೆಸಿದ್ದಾನೆ.

ಈ ವೇಳೆ ತೀವ್ರವಾಗಿ ಗಾಯಗೊಂಡು ಕುಸಿದು ಬಿದ್ದ ಶಿವಮ್ಮನನ್ನು ಕೊಣನೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದ ಕಾರಣ ಈಕೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕೊಣನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News