Friday, May 24, 2024
Homeಅಂತಾರಾಷ್ಟ್ರೀಯಅಮೆರಿಕ ಅಧ್ಯಕ್ಷೀಯ ಚುನಾವಣೆ : ಬಿಡೆನ್-ಟ್ರಂಪ್ ನಡುವೆ ನೇರ ಸ್ಪರ್ಧೆ

ಅಮೆರಿಕ ಅಧ್ಯಕ್ಷೀಯ ಚುನಾವಣೆ : ಬಿಡೆನ್-ಟ್ರಂಪ್ ನಡುವೆ ನೇರ ಸ್ಪರ್ಧೆ

ವಾಷಿಂಗ್ಟನ್, ಮಾರ್ಚ್ 13 (ಪಿಟಿಐ)-ಅಮೆರಿಕದ ಹಾಲಿ ಅಧ್ಯಕ್ಷ ಬಿಡೆನ್ ಮತ್ತು ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಈಗ ನೇರ ಸ್ಪರ್ಧೆ ನಡೆಯಲಿದೆ.ಅಧ್ಯಕ್ಷೀಯ ಚುನಾವಣೆ ನಡೆದ ನಾಮನಿರ್ದೇಶನವನ್ನು ಇಬ್ಬರು ಪಕ್ಷದಲ್ಲಿ ಗೆದ್ದಿದ್ದಾರೆ ಇದರಿಂದಾಗಿ ಮುಂದಿನ ನವೆಂಬರ್ ನಡೆಯು ರಾಷ್ಟ್ರೀಯ ಚುನಾವಣೆಯ ವೇದಿಕೆಯನ್ನು ಸಿದ್ಧವಾಗಿದೆ..

ಜಾರ್ಜಿಯಾದಲ್ಲಿ ಅಧ್ಯಕ್ಷೀಯ ಪ್ರಾಥಮಿಕಗಳನ್ನು ಸುಲಭವಾಗಿ ಗೆದ್ದ ನಂತರ 81 ವರ್ಷದ ಬಿಡೆನ್ ಇಂದು ಡೆಮಾಕ್ರಟಿಕ್ ಪಕ್ಷದಿಂದ ಅಭ್ಯರ್ಥಿಯಾಗಿ ನಾಮನಿರ್ದೇಶಗೊಂಡಿದಾರೆ.ನಾಮನಿರ್ದೇಶನವನ್ನು ಗೆಲ್ಲಲು ಒಟ್ಟು 3,933ರಲ್ಲಿ 1,968 ಪ್ರತಿನಿ„ಗಳ ಅಗತ್ಯವಿತ್ತು ಆದರೆ ಬಿಡೆನ್ 2000ಕ್ಕೂ ಹೆಚ್ಚು ಮತ ಸಿಕ್ಕಿದೆ.ಡೆಮಾಕ್ರಟಿಕ್ ಪಕ್ಷದಿಂದ ಮುಂದಿನ ಆಗಸ್ಟ್‍ನಲ್ಲಿ ಚಿಕಾಗೋದಲ್ಲಿ ನಡೆಯಲಿರುವ ಡೆಮಾಕ್ರಟಿಕ್ ನ್ಯಾಶನಲ್ ಕನ್ವೆನ್ಶನ್‍ನಲ್ಲಿ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನ ಔಪಚಾರಿಕವಾಗಿ ಘೋಷಿಸಲಾಗುವುದು.

ಇದೇ ವೇಳೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಟ್ರಂಪ್ ಸಾಕಷ್ಟು ಹೋರಾಟ ನಡೆಸಿ ನಾಮನಿರ್ದೇಶನಗೊಂಡಿದ್ದಾರೆ.ಜುಲೈನಲ್ಲಿ ಮಿಲ್ವಾಕಿಯಲ್ಲಿ ನಡೆಯಲಿರುವ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಟ್ರಂಪ್ ಅ„ಕೃತವಾಗಿ ನಾಮನಿರ್ದೇಶನಗೊಳ್ಳಲಿದ್ದಾರೆ. ಸತತ ಮೂರನೇ ಭರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವನ್ನು ಮುನ್ನಡೆಸಲಿದ್ದಾರೆ.ಟ್ರಂಪ್ ಅವರು ಕಳೆದ ವರ್ಷ ಮಾರ್ಚ್ 25 ರಂದು ನ್ಯೂಯಾರ್ಕ್‍ನಲ್ಲಿ ಕ್ರಿಮಿನಲ್ ಪ್ರಕರಣದಲ್ಲಿ ವಿಚಾರಣೆಗೆ ಒಳಪಡುವ ಮೊದಲ ಅಮೆರಿಕದ ಅಧ್ಯಕ್ಷರಾಗಲು ಚುನಾವಣೆಗೆ ಸ್ಪರ್ದಿಸುವುದಾಗಿ ಘೋಷಿಸಿದ್ದರು.

ಪ್ರಸ್ತುತ ಇದು 1956 ರ ನಂತರ ಮೊದಲ ಅಧ್ಯಕ್ಷೀಯ ಮರುಪಂದ್ಯವಾಗಿದೆ.ಕೊನೆಯ ಅಧ್ಯಕ್ಷೀಯ ಮರುಪಂದ್ಯವು 1956 ರಲ್ಲಿ ರಿಪಬ್ಲಿಕನ್ ಅಧ್ಯಕ್ಷ ಡ್ವೈಟ್ ಡಿ ಐಸೆನ್‍ಹೋವರ್ ಅವರು ನಾಲ್ಕು ವರ್ಷಗಳ ಹಿಂದೆ ಡೆಮಾಕ್ರಟಿಕ್ ಎದುರಾಳಿ ಅಡ್ಲೈ ಸ್ಟೀವನ್‍ಸನ್ ಅವರನ್ನು ಸೋಲಿಸಿದರು.

2020 ರ ನವೆಂಬರ್ ಚುನಾವಣೆಗಳಲ್ಲಿ ಬಿಡೆನ್ ಟ್ರಂಪ್ ಅವರನ್ನು ಸೋಲಿಸಿದರು, ಈ ಫಲಿತಾಂಶವನ್ನು ರಿಪಬ್ಲಿಕನ್ ನಾಯಕ ಇನ್ನೂ ಸವಾಲು ಮಾಡಿದ್ದಾರೆ. ಬಿಡೆನ್ ಡೆಮಾಕ್ರಟಿಕ್ ಅಭ್ಯರ್ಥಿಯಾಗಲು ಕೇವಲ ನಾಮಮಾತ್ರದ ವಿರೋಧವನ್ನು ಎದುರಿಸಿದ್ದಾರೆ.

ಭಾರತೀಯ ಮೂಲದ ಮಾಜಿ ಯುಎನ್ ರಾಯಭಾರಿ ನಿಕ್ಕಿ ಹ್ಯಾಲೆ ಮತ್ತು -ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಸೇರಿದಂತೆ ಹಲವಾರು ರಿಪಬ್ಲಿಕನ್ನರನ್ನು ಟ್ರಂಪ್ ಪ್ರಾಥಮಿಕ ಚುನಾವಣೆಗಳಲ್ಲಿ ಸೋಲಿಸಿದ್ದಾರೆ. ಟ್ರಂಪ್ ಅವರ ಮಾಜಿ ಉಪಾಧ್ಯಕ್ಷ ಮೈಕ್ ಪೆನ್ಸ್ ಸೇರಿದಂತೆ ಇತರ ಅಭ್ಯರ್ಥಿಗಳು ಮತದಾರರ ಬೆಂಬಲದ ಕೊರತೆಯಿಂದಾಗಿ ತಿಂಗಳ ಹಿಂದೆ ಕೈಬಿಟ್ಟರು.

RELATED ARTICLES

Latest News