Thursday, December 5, 2024
Homeರಾಜ್ಯಕೆಎಂಎಫ್‌ನಿಂದ ಒಂದು ಕೋಟಿ ಲೀಟರ್ ಹಾಲು ಸಂಗ್ರಹ ದಾಖಲೆ

ಕೆಎಂಎಫ್‌ನಿಂದ ಒಂದು ಕೋಟಿ ಲೀಟರ್ ಹಾಲು ಸಂಗ್ರಹ ದಾಖಲೆ

KMF sets record of one crore litres of milk collection

ಬೆಂಗಳೂರು,ನ.28- ರಾಜ್ಯದಲ್ಲಿ ಕರ್ನಾಟಕ ಹಾಲು ಮಹಾಮಂಡಳವು ವಿಶ್ವ ಬ್ಯಾಂಕ್‌ ಯೋಜನೆ ಮೂಲಕ 1974 ರಲ್ಲಿ ಪ್ರಾರಂಭವಾಗಿದ್ದು, ಹಾಲು ಉತ್ಪಾದನೆಗಾಗಿ ಡೇರಿ ಅಭಿವೃದ್ದಿ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್‌ ತಿಳಿಸಿದ್ದಾರೆ.

ಕರ್ನಾಟಕ ಹಾಲು ಮಹಾಮಂಡಳವು ರಾಜ್ಯದ ಗ್ರಾಮೀಣ ಭಾಗದ ಹಾಲು ಉತ್ಪಾದಕರಿಗೆ ಪ್ರತಿಫಲದಾಯಕ ದರ ಮತ್ತು ನಿರಂತರ ಮಾರುಕಟ್ಟೆಯನ್ನು ನೀಡುವ ಹಾಗೂ ಗ್ರಾಹಕರಿಗೆ ವಿಶ್ವ ವ್ಯಾಪಾರ ಒಪ್ಪಂದದ ನಂತರ ಜಾಗತಿಕ ಮಾರುಕಟ್ಟೆ ಬೇಡಿಕೆಯನ್ವಯ ಸಕಾಲದಲ್ಲಿ ಶುದ್ಧ ಹಾಲು ಹಾಗೂ ಉತ್ಕೃಷ್ಟ ಹಾಲಿನ ಉತ್ಪನ್ನಗಳನ್ನು ಪೂರೈಸುವ ಜವಾಬ್ಧಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿದೆ.

ಪ್ರಸ್ತುತ ಕರ್ನಾಟಕ ಹಾಲು ಮಹಾಮಂಡಳ ವ್ಯಾಪ್ತಿಯಲ್ಲಿನ 16 ಜಿಲ್ಲಾ ಹಾಲು ಒಕ್ಕೂಟಗಳಲ್ಲಿ 24,356 ಗ್ರಾಮಗಳನ್ನೊಳಗೊಂಡಂತೆ 15,840 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ 26.89 ಲಕ್ಷ ಗ್ರಾಮೀಣ ರೈತರು ಈ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನೋಂದಾಯಿತ ಸದಸ್ಯರಿದ್ದು, ಇದರಲ್ಲಿ 10.17 ಲಕ್ಷ ಮಹಿಳಾ ಸದಸ್ಯರುಗಳಿರುತ್ತಾರೆ.

4,644 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳು ಒಳಗೊಂಡಂತೆ ಒಟ್ಟು 27 ಲಕ್ಷ ಹಾಲು ಉತ್ಪಾದಕ ಸದಸ್ಯರು ನೋಂದಣಿಯಾಗಿದ್ದು, 90 ಲಕ್ಷ ಉತ್ಪಾದಕರಿಂದ ದಿನವಹಿ 90 ಲಕ್ಷ ಲೀಟರ್‌ ಹಾಲನ್ನು ಸಂಗ್ರಹಿಸಿ ಪ್ರತಿ ದಿನ 29 ಕೋಟಿ ರೂ.ಗಳ ಮೊತ್ತವನ್ನುಉತ್ಪಾದಕರಿಗೆ ಬಟವಾಡೆ ಮೂಲಕ ಬ್ಯಾಂಕ್‌ ಮುಖಾಂತರ ನೇರವಾಗಿ ಪಾವತಿಸಲಾಗುತ್ತಿದ್ದು, ಕಹಾಮ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚಿನ ಹಾಲು ಮತ್ತು ಹಾಲಿನ ಉತ್ಪನ್ನಗಳು ಮತ್ತು 50 ಲಕ್ಷ ಲೀ. ಸಂಸ್ಕರಿಸಿದ ಹಾಲನ್ನು ಬೇಡಿಕೆ ಅನುಸಾರ ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಕಳೆದ ಜೂ.28ರಂದು ದಾಖಲೆಯ 1 ಕೋಟಿ ಲೀಟರ್‌ ಹಾಲನ್ನು ಸಂಗ್ರಹಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿರುತ್ತದೆ. ದಿನವಹಿ ಸರಾಸರಿ 80 ಲೀ.ಗಿಂತ ಹೆಚ್ಚಿಗೆ ಹಾಲು ಉತ್ಪಾದಿಸುತ್ತಿರುವ 1,377 ಪ್ರಗತಿ ಪರ ಹೈನುಗಾರರನ್ನು ಗುರುತಿಸಿದ್ದು, ಅವರಿಗೆಇತ್ತೀಚಿನಆಧುನಿಕ ಹೈನುಗಾರಿಕೆ, ತಂತ್ರಜ್ಞಾನ, ಕಡಿಮೆ ವೆಚ್ಚದಲ್ಲಿರಾಸು ನಿರ್ವಹಣೆ, ವಿವಿಧರೀತಿಯ ಪಶು ಆಹಾರ ಮತ್ತು ಹಸಿರು ಮೇವಿನ ಬಳಕೆ ಇತ್ಯಾದಿಗಳ ಕುರಿತಂತೆ ತಾಂತ್ರಿಕ ವಿಚಾರಗೋಷ್ಠಿಯನ್ನು ನಿನ್ನೆ ಜಿ.ಕೆ.ವಿ.ಕೆ.ಯಲ್ಲಿ ಆಯೋಜಿಸಲಾಗಿತ್ತು.

ಅಲ್ಲದೆ, ದೇಶದ ಹೈನುಗಾರಿಕೆಯ ಪಿತಾಮಹರಾದ ಡಾ.ವರ್ಗೀಸ್‌‍ ಕುರಿಯನ್‌ರವರ 103ನೇ ಜನ ದಿನಾಚರಣೆ ಪ್ರಯುಕ್ತ ಸದರಿ ಸಮೇಳನದಲ್ಲಿ ಪಾಲ್ಗೊಳ್ಳುವ ಹೈನುಗಾರರಿಗೆ ನುರಿತ ವಿಷಯತಜ್ಞರಿಂದ ಬ್ರೀಡಿಂಗ್‌, ಮ್ಯಾನೇಜ್‌ಮೆಂಟ್‌ ಡಿಸೀಸ್‌‍ ಕಂಟ್ರೋಲ್‌, ಫೀಡ್‌ ಫಾಡರ್‌ ಸೈಲೇಜ್‌ ಮೇಕಿಂಗ್‌ ಮತ್ತು ಪಾರಂಪರಿಕ ಔಷಧಿ ಪದ್ಧತಿಗಳು ಮುಂತಾದ ವಿಷಯಗಳ ಕುರಿತು ವಿಚಾರಗೋಷ್ಠಿಯಜೊತೆಗೆಹೈನುಗಾರರಿಗೆ ಬ್ಯಾಂಕ್‌ ಮುಖೇನ ದೊರೆಯುವ ಸಾಲ ಸೌಲಭ್ಯದಬಗ್ಗೆ ಮಾಹಿತಿ ನೀಡಲು ಹಾಗೂ ಇನ್ನಿತರೇ ವಿಷಯಕುರಿತು ವಿಷಯತಜ್ಞರಿಂದ ವಿಚಾರಗೋಷ್ಠಿಯನ್ನು ಸಹಏರ್ಪಡಿಸಲಾಯಿತು.

ವೇದಿಕೆಯಲ್ಲಿ ಪ್ರತಿನಿತ್ಯಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿರುವಂತಹ ಜ್ಯೋತಿಉಮೇಶ್‌, (ಮೈಸೂರು ಹಾಲು ಒಕ್ಕೂಟ, ದಿನವಹಿ ಸರಾಸರಿ 1323 ಲೀ ಹಾಲು) ಪ್ರಕಾಶ್‌ದೇಸಾಯಿ (ವಿಜಯಪುರ ಹಾಲು ಒಕ್ಕೂಟ, ದಿನವಹಿ ಸರಾಸರಿ 821 ಲೀ) ಡಾ.ಮಂಜುನಾಥ್‌.ಎಸ್‌‍, (ಬೆಂಗಳೂರು ಹಾಲು ಒಕ್ಕೂಟ, ದಿನವಹಿ ಸರಾಸರಿ 761 ಲೀ), ಶಾಂತಮ.ಜೆ, (ಬೆಂಗಳೂರು ಹಾಲು ಒಕ್ಕೂಟ, ದಿನವಹಿ ಸರಾಸರಿ674 ಲೀ) ಸಂತೋಷ್‌ಕುಮಾರ್‌.ಆರ್‌ (ಮಂಡ್ಯಹಾಲು ಒಕ್ಕೂಟ, ದಿನವಹಿ ಸರಾಸರಿ 661 ಲೀ)ರವರುಗಳನ್ನು ಸನಾನಿಸುವುದರಜೊತೆಗೆಜಿಲ್ಲಾ ಹಾಲು ಒಕ್ಕೂಟಗಳ ಅತಿ ಹೆಚ್ಚು ಹಾಲು ಸರಬರಾಜು ಮಾಡಿರುವಂತಹ ಹಾಲು ಉತ್ಪಾರಕರನ್ನೂ ಸಹ ಪಶು ಸಂಗೋಪನಾ ಸಚಿವರಾದ ಕೆ.ವೆಂಕಟೇಶ್‌ರವರು ಸನಾನಿಸಿದರು.

ವೇದಿಕೆಯಲ್ಲಿ ಕಹಾಮದ ಆಡಳಿತ ಮಂಡಳಿಯ ಸದಸ್ಯರುಗಳು, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು, ಕಹಾಮದ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ ಜಗದೀಶ್‌ ಹಾಗೂ ಕಹಾಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News