Sunday, September 15, 2024
Homeರಾಷ್ಟ್ರೀಯ | Nationalಕೋಲ್ಕತ್ತಾದಲ್ಲಿ ವೈದ್ಯೆಯನ್ನುಅತ್ಯಾಚಾರವೆಸಗಿ ಕೊಂದ ಸಂಜಯ್‌ ಕಲ್ಲು ಹೃದಯದ ವಿಕೃತ ಕಾಮಿ

ಕೋಲ್ಕತ್ತಾದಲ್ಲಿ ವೈದ್ಯೆಯನ್ನುಅತ್ಯಾಚಾರವೆಸಗಿ ಕೊಂದ ಸಂಜಯ್‌ ಕಲ್ಲು ಹೃದಯದ ವಿಕೃತ ಕಾಮಿ

Kolkata Rape-Murder Accused Sanjay Roy A 'Sexual Pervert', Has Shown No Remorse

ಕೋಲ್ಕತ್ತಾ, ಆ.23- ಇಲ್ಲಿನ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಆರೋಪಿ ಸಂಜಯ್‌ ರಾಯ್‌‍ನದ್ದು ಕ್ರೂರ ಪ್ರಾಣಿಯ ಮನಸ್ಥಿತಿಯಂತೆ.

ಇಡಿ ದೇಶವೇ ವೈದ್ಯ ವಿದ್ಯಾರ್ಥಿನಿ ಸಾವಿಗಾಗಿ ಮರುಗುತ್ತ ಆರೋಪಿಯನ್ನು ಗಲ್ಲಿಗೇರಿಸಿ ಎಂದು ಆಗ್ರಹಿಸುತ್ತಿದ್ದರೂ ಆತನಿಗೆ ಮಾತ್ರ ಯಾವುದೇ ಪಶ್ಚಾತಾಪವೂ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಆತ ನಿತ್ಯವೂ ತನ್ನ ಮೊಬೈಲ್‌‍ನಲ್ಲಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಣೆ ಮಾಡುತ್ತಿರುತ್ತಿದ್ದ, ಪ್ರಾಣಿಯ ಪ್ರವತ್ತಿಯನ್ನು ಹೊಂದಿದ್ದ, ಆತನಿಗೆ ತಾನು ಮಾಡಿರುವ ಕತ್ಯದ ಬಗ್ಗೆ ಪಶ್ಚಾತಾಪವೂ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಸಿಬಿಐ ಆ,18ರಂದು ಸಂಜಯ್‌ ರಾಯ್‌ ಮನಸ್ಥಿತಿಯನ್ನು ತಿಳಿದುಕೊಳ್ಳಲು ಸಿಎಫ್‌ಎಸ್‌‍ಎಲ್‌ ತಜ್ಞರಿಗೆ ಹೇಳಿದ್ದರು. ಆ. 9 ರಂದು ಸರ್ಕಾರಿ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯರ ಶವ ಪತ್ತೆಯಾದ ಮರುದಿನ ಬಂಧಿಸಲಾಗಿತ್ತು.

ಆ ವ್ಯಕ್ತಿಗೆ ಯಾವುದೇ ಅಪರಾಧ ಪ್ರಜ್ಞೆ ಇಲ್ಲ, ಅಲ್ಲಿ ಏನಾಗಿದೆ ಎಂಬುದನ್ನು ತಡವರಿಸದೆ ಪ್ರತಿ ಪ್ರತಿ ನಿಮಿಷದ ಘಟನೆಯನ್ನು ವಿವರಿಸಿದ್ದಾನೆ. ಅವನಿಗೆ ಪಶ್ಚಾತಾಪವಾದಂತೆ ತೋರುತ್ತಿಲ್ಲ ಎಂದಿದ್ದಾರೆ. ಕೋಲ್ಕತ್ತಾ ಹೈಕೋರ್ಟ್‌ನಿಂದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವ ಮೊದಲು, ಸ್ಥಳೀಯ ಪೊಲೀಸರು ರಾಯ್‌ ಅವರಿಂದ ವಶಪಡಿಸಿಕೊಂಡ ಮೊಬೈಲ್‌ ಫೋನ್‌ನಲ್ಲಿ ಅಶ್ಲೀಲ ವಿಡಿಯೋಗಳಿರುವ ಬಗ್ಗೆ ಮಾಹಿತಿ ನೀಡಿದ್ದರು.

ಆಸ್ಪತ್ರೆಯಲ್ಲಿ ಸಂಗ್ರಹಿಸಲಾದ ಸಿಸಿಟಿವಿ ದಶ್ಯಾವಳಿಗಳ ಆಧಾರದ ಮೇಲೆ, ಆ.8 ರಂದು ಬೆಳಗ್ಗೆ 11 ಗಂಟೆಗೆ ಕಾಣಿಸಿಕೊಂಡಿದ್ದ ಮಾತ್ರವಲ್ಲ, ಆತ ಮಧ್ಯರಾತ್ರಿ ಉತ್ತರ ಕೋಲ್ಕತ್ತಾದಲ್ಲಿರುವ ರೆಡ್‌ ಲೈಟ್‌ ಏರಿಯಾಗೆ ಕೂಡ ಹೋಗಿದ್ದ ಎಂದು ಮೂಲಗಳು ತಿಳಿಸಿವೆ.

ಆ. 9ರಂದು ಬೆಳಗಿನ ಜಾವ 4ಗಂಟೆ ವೇಳೆಗೆ ಆತ ಮತ್ತೆ ಅದೇ ಕಟ್ಟಡವನ್ನು ಪ್ರವೇಶಿಸುತ್ತಿರುವುದನ್ನು ದಶ್ಯಾವಳಿಗಳು ತೋರಿಸಿವೆ. ಕೆಲವು ತಾಂತ್ರಿಕ ಮತ್ತು ವೈಜ್ಞಾನಿಕ ಪುರಾವೆಗಳು ಅದನ್ನು ದಢಪಡಿಸಿವೆ. ರಾಯ್‌ ಅವರ ಡಿಎನ್‌ಎ ಪರೀಕ್ಷೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಅಥವಾ ಸಾಮೂಹಿಕ ಅತ್ಯಾಚಾರದ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಲು ಅಧಿಕಾರಿ ನಿರಾಕರಿಸಿದ್ದಾರೆ.

RELATED ARTICLES

Latest News