Sunday, May 5, 2024
Homeರಾಜ್ಯಡಿಸಿಎಂ ಡಿಕೆಶಿ ಉಪಹಾರ ಕೂಟದಲ್ಲಿ ಬಿಜೆಪಿ ಶಾಸಕ ಕೆ.ಪಿ.ನಂಜುಂಡಿ

ಡಿಸಿಎಂ ಡಿಕೆಶಿ ಉಪಹಾರ ಕೂಟದಲ್ಲಿ ಬಿಜೆಪಿ ಶಾಸಕ ಕೆ.ಪಿ.ನಂಜುಂಡಿ

ಬೆಂಗಳೂರು,ಏ.7- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಅವರೊಂದಿಗೆ ಉಪಹಾರ ಕೂಟದಲ್ಲಿ ಭಾಗವಹಿಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಲೋಕಸಭಾ ಚುನಾವಣಾ ನಿಟ್ಟಿನಲ್ಲಿ ನಾನಾರೀತಿಯ ರಾಜಕೀಯ ತಂತ್ರಗಾರಿಕೆಯನ್ನು ಅನುಸರಿಸುತ್ತಿರುವ ಡಿ.ಕೆ.ಶಿವಕುಮಾರ್‍ರವರು ಪಕ್ಷದ ಸಂಘಟನಾತ್ಮಕ ಬಲವನ್ನು ಸದೃಢಗೊಳಿಸಲು ಯತ್ನಿಸುತ್ತಿದ್ದಾರೆ. ವಿಶ್ವಕರ್ಮ ಸಮುದಾಯದ ಪ್ರಭಾವಿ ನಾಯಕರೂ ಆಗಿರುವ ಕೆ.ಪಿ.ನಂಜುಂಡಿ, ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿದ್ದರು.

ವಿಧಾನಪರಿಷತ್ ಸದಸ್ಯ ಸ್ಥಾನ, ವಿಧಾನಸಭೆಯಲ್ಲಿ ಸ್ರ್ಪಧಿಸುವ ಅವಕಾಶ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರಾದರೂ ಕಾಂಗ್ರೆಸ್‍ನಲ್ಲಿ ಮನ್ನಣೆ ಸಿಗಲಿಲ್ಲ. ಹೀಗಾಗಿ ಬಿಜೆಪಿಗೆ ವಲಸೆ ಹೋಗಿದ್ದರು. ಅಲ್ಲಿ ಯಡಿಯೂರಪ್ಪ ಅವರು ಕೆ.ಪಿ.ನಂಜುಂಡಿ ಅವರನ್ನು ವಿಧಾನಪರಿಷತ್‍ನ ಸದಸ್ಯರನ್ನಾಗಿ ಮಾಡಿತ್ತು. ಮುಂದಿನ ಜೂನ್ ವೇಳೆಗೆ ಅವರ ಅಧಿಕಾರವಾಧಿ ಪೂರ್ಣಗೊಳ್ಳಲಿದೆ. ಈ ನಡುವೆ ಕಾಂಗ್ರೆಸ್ ಅಧ್ಯಕ್ಷರ ಜೊತೆ ನಂಜುಂಡಿ ಅವರು ಉಪಹಾರ ಕೂಟ ನಡೆಸಿರುವುದು ಕುತೂಹಲ ಕೆರಳಿಸಿದೆ.

ಇದೊಂದು ಸೌಜನ್ಯದ ಭೇಟಿ ಎಂದು ಹೇಳಲಾಗಿದೆಯಾದರೂ ನಾನಾ ರೀತಿಯ ರಾಜಕೀಯ ತಂತ್ರಗಾರಿಕೆಗಳು ಭೇಟಿಯ ಹಿಂದೆ ನಡೆದಿವೆ. ನಂಜುಂಡಿ ಅವರನ್ನು ಮರಳಿ ಕಾಂಗ್ರೆಸ್ ಪಕ್ಷಕ್ಕೆ ತರಲು ಗಾಳ ಹಾಕಲಾಗಿದೆ. ವಿಶ್ವಕರ್ಮ ಸಮುದಾಯದ ರಾಜ್ಯಾಧ್ಯಕ್ಷರೂ ಆಗಿರುವ ಕೆ.ಪಿ.ನಂಜುಂಡಿ ಅವರು ಕಾಂಗ್ರೆಸ್‍ಗೆ ಮರಳಿದ್ದೇ ಆದರೆ ಹಲವು ಕ್ಷೇತ್ರಗಳಲ್ಲಿ ರಾಜಕೀಯವಾಗಿ ಲಾಭವಾಗಲಿದೆ ಎಂಬ ವಿಶ್ಲೇಷಣೆಗಳಿವೆ.

RELATED ARTICLES

Latest News