Monday, September 16, 2024
Homeರಾಜ್ಯರಾಜ್ಯದೆಲ್ಲೆಡೆ ಜನಾಷ್ಟಮಿ ಸಂಭ್ರಮ : ಮನೆ-ಮನಗಳಲ್ಲಿ ಕೃಷ್ಣನಾಮ ಜಪ

ರಾಜ್ಯದೆಲ್ಲೆಡೆ ಜನಾಷ್ಟಮಿ ಸಂಭ್ರಮ : ಮನೆ-ಮನಗಳಲ್ಲಿ ಕೃಷ್ಣನಾಮ ಜಪ

krishna janmashtami celebration

ಬೆಂಗಳೂರು,ಆ.26- ಶ್ರೀ ಕೃಷ್ಣ ಜನಾಷ್ಟಮಿ ಅಂಗವಾಗಿ ರಾಷ್ಟ್ರದೆಲ್ಲೆಡೆ ಇಂದು ಹರೇ ರಾಮ ಹರೇ ಕೃಷ್ಣ ಕೃಷ್ಣ ಹರೇ ರಾಮ ಎಂದು ಭಜಿಸಿ ಪರಮಾತನ ನಾಮಸರಣೆ ಘೋಷ ಎಲ್ಲೆಡೆ ಮೊಳಗಿತು. ಭಾರತದಲ್ಲಿ ಶ್ರೀಕೃಷ್ಣ ಜನಾಷ್ಟಮಿ ತನ್ನದೇ ಆದ ವಿಶೇಷತೆಗಳನ್ನು ಹೊಂದಿದ್ದು, ಮನೆಮನೆಗಳಲ್ಲಿ ಪುಟ್ಟ ಪುಟ್ಟ ಕಂದಮಗಳು ಕೃಷ್ಣ-ರಾಧೆಯರ ವೇಷಭೂಷಣ ತೊಟ್ಟು ಸಂಭ್ರಮಿಸುತ್ತಾರೆ. ಇನ್ನೂ ಕೆಲವೆಡೆ ಮಡಿಕೆ ಕಟ್ಟಿ ಹೊಡೆದು, ಬೆಣ್ಣೆ ಕದ್ದು ತಿನ್ನುವ ಸಂದರ್ಭವನ್ನು ಸರಿಸಿದ್ದಾರೆ.

ದೇವಸ್ಥಾನಗಳಲ್ಲಂತೂ ಇಂದು ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಅದರಲ್ಲೂ ಭಗವಾನ್‌ ಶ್ರೀ ಕೃಷ್ಣ ಜನಸ್ಥಳವಾದ ಮಥುರಾದಲ್ಲಿ ಶ್ರೀಕೃಷ್ಣನ ಜನಾಷ್ಟಮಿ ಸಂಭ್ರಮ ಜೋರಾಗಿತ್ತು.ರಾಜಧಾನಿ ಬೆಂಗಳೂರಿನ ಇಸ್ಕಾನ್‌ ದೇವಾಲಯದಲ್ಲಂತೂ ಸ್ವರ್ಗವೇ ಭೂಲೋಕಕ್ಕೆ ಬಂದಂತೆ ಭಾಸವಾಗುತ್ತಿತ್ತು. ಇಡೀ ದೇವಾಲಯ ಹೂವಿನ ಅಲಂಕಾರದಿಂದ ಅಲಂಕೃತಗೊಂಡಿತ್ತು.

ನಗರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ತಾಲ್ಲೂಕು ಯಾದವ ಸಂಘದ ವತಿಯಿಂದ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಶ್ರೀಕೃಷ್ಣ ಜನಾಷ್ಟಮಿ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿತ್ತು.

ಶ್ರೀ ವೇಣುಗೋಪಾಲ ಸ್ವಾಮಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಅಲಂಕರಿಸಿ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.ಶಾಲೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ ಮಕ್ಕಳಿಗೆ ರಾಧ-ಕೃಷ್ಣ ವೇಷಗಳನ್ನು ಹಾಕಿಸಿ ಪೋಷಕರು ಸಂಭ್ರಮಿಸಿದರು.

RELATED ARTICLES

Latest News