Friday, November 22, 2024
Homeರಾಜ್ಯಮೋದಿ ಅವರ ಅಪ್ಪನ ಮನೆಯ ಆಸ್ತಿಯೇ : ಈಶ್ವರಪ್ಪ

ಮೋದಿ ಅವರ ಅಪ್ಪನ ಮನೆಯ ಆಸ್ತಿಯೇ : ಈಶ್ವರಪ್ಪ

ಶಿವಮೊಗ್ಗ,ಏ.7- ಪ್ರಧಾನಿ ನರೇಂದ್ರಮೋದಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರ ಅಪ್ಪನ ಮನೆಯ ಆಸ್ತಿ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರಚಾರಕ್ಕೆ ಮೋದಿಯವರ ಫೋಟೋ ಬಳಸಬಾರದು ಎನ್ನಲು ನರೇಂದ್ರಮೋದಿ ಅಶೋಕ್ ಅವರ ಅಪ್ಪನ ಮನೆಯ ಆಸ್ತಿಯೇ ಎಂದು ಪ್ರಶ್ನೆ ಮಾಡಿದರು.

ಮೋದಿಯವರು ಈ ದೇಶದ ಪ್ರಧಾನಿ. ನನಗೆ ನನ್ನ ಫೋಟೋ ಬಳಸಬಾರದೆಂದು ಮೋದಿ ಹೇಳಿದರೆ ಅದನ್ನು ಕೇಳುತ್ತೇನೆ. ಅದನ್ನು ಬಿಟ್ಟು ಅಶೋಕ್ ಸೇರಿದಂತೆ ಬೇರೆ ಯಾರೇ ಹೇಳಿದರೂ ನಾನು ತಲೆ ಕೆಡಸಿಕೊಳ್ಳುವುದಿಲ್ಲ. ಅಷ್ಟಕ್ಕೂ ಮೋದಿ ಬಿಜೆಪಿ ಆಸ್ತಿಯೇ ಹೊರತು ಅಶೋಕ್ ಅಥವಾ ಇನ್ಯಾರದೋ ಮನೆಯ ಆಸ್ತಿಯಲ್ಲ ಎಂದು ತಿರುಗೇಟು ನೀಡಿದರು.

ನನಗೆ ನಾಮಪತ್ರ ಹಿಂಪಡೆಯಲು ಅನೇಕರಿಂದ ಒತ್ತಡ ಬರುತ್ತಿದೆ. ಆದರೆ ನನ್ನ ಸಾವಿರಾರು ಹಿತೈಷಿಗಳು ನಾಮಪತ್ರ ಹಿಂಪಡೆಯಬಾರದೆಂದು ನನಗೆ ಒತ್ತಡ ಹಾಕುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈಗಾಗಲೇ ನಾನು ಸಾಕಷ್ಟು ದೂರ ಸಾಗಿದ್ದೇನೆ. ನನ್ನನ್ನು ಮನವೊಲಿಸುವ ಪ್ರಯತ್ನಗಳು ಈಡೇರುವುದಿಲ್ಲ. ನನ್ನ ನಿರ್ಧಾರ ಈಗಲೂ ಅಚಲ ಎಂದು ಹೇಳಿದರು.

ದೆಹಲಿಗೆ ಬರುವಂತೆ ಗೃಹಸಚಿವ ಅಮಿತ್ ಷಾ ಅವರು ನನಗೆ ಸೂಚಿಸಿದರು. ಅವರ ಮಾತಿಗೆ ಬೆಲೆ ಕೊಟ್ಟು ನಾನು ಹೋಗಿದ್ದೆ. ಕೊನೆ ಕ್ಷಣದಲ್ಲಿ ಬೇರೆ ಕಾರ್ಯಕ್ರಮಗಳ ಒತ್ತಡದಿಂದಾಗಿ ನನ್ನನ್ನು ಭೇಟಿಯಾಗಲು ಸಾಧ್ಯವಿಲ್ಲ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದೂ ಇಲ್ಲ. ನನ್ನ ಸ್ಪರ್ಧೆಗೆ ಹಿರಿಯರ ಸಮ್ಮತಿ ಇದೆ ಎಂದು ಭಾವಿಸುತ್ತೇನೆ ಎಂದರು.

ಶಿವಮೊಗ್ಗದಲ್ಲಿ ಈ ಬಾರಿ ಅಚ್ಚರಿ ಫಲಿತಾಂಶ ಬರಲಿದೆ. ನಾನು ಗೆದ್ದು ಪ್ರಧಾನಿ ನರೇಂದ್ರಮೋದಿಯವರ ಕೈ ಬಲಪಡಿಸುತ್ತೇನೆ. ಯಾರು ಏನೇ ಮಾತನಾಡಿಕೊಳ್ಳಲಿ ಅದಕ್ಕೆ ಸೊಪ್ಪು ಹಾಕುವುದಿಲ್ಲ. ಈಶ್ವರಪ್ಪ ಎಂದಿಗೂ ಯಾರಿಗೂ ಜಗ್ಗುವ ಮನುಷ್ಯನಲ್ಲ. ನನ್ನ ತೀರ್ಮಾನ ಪಕ್ಷದ ಉಳಿವಿಗಾಗಿ ಎಂದು ಈಶ್ವರಪ್ಪ ಹೇಳಿದರು.

RELATED ARTICLES

Latest News