Friday, November 22, 2024
Homeಬೆಂಗಳೂರುಪಿಜಿ-ಹಾಸ್ಪೆಲ್‍ಗಳಿಗೆ ನುಗ್ಗಿ ಲ್ಯಾಪ್‍ಟಾಪ್, ಮೊಬೈಲ್ ಕದ್ದಿದ್ದ ಮೂವರು ಬಲೆಗೆ

ಪಿಜಿ-ಹಾಸ್ಪೆಲ್‍ಗಳಿಗೆ ನುಗ್ಗಿ ಲ್ಯಾಪ್‍ಟಾಪ್, ಮೊಬೈಲ್ ಕದ್ದಿದ್ದ ಮೂವರು ಬಲೆಗೆ

ಬೆಂಗಳೂರು, ಡಿ.19- ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ವಾಸವಾಗಿರುವ ಪ್ರದೇಶಗಳಲ್ಲಿ ಸುತ್ತಾಡಿ, ಪಿಜಿ ಮತ್ತು ಹಾಸ್ಟೆಲ್‍ಗಳನ್ನು ಗುರುತಿಸಿಕೊಂಡು ವಾಯುವಿಹಾರ ಹಾಗೂ ಇತರೆ ಸ್ಥಳಗಳಿಗೆ ಹೋಗುವ ಸಮಯ ಗಮನಿಸಿ ಅವರ ಕೊಠಡಿಗೆ ನುಗ್ಗಿ ಮೊಬೈಲ್ ಫೋನ್ ಮತ್ತು ಲ್ಯಾಪ್‍ಟಾಪ್‍ಗಳನ್ನು ಕಳವು ಮಾಡಿದ್ದ ಮೂವರು ಅಂತಾರಾಜ್ಯ ಆರೋಪಿಗಳನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿ 15.90 ಲಕ್ಷ ರೂ. ಮೌಲ್ಯದ 50 ಲ್ಯಾಪ್‍ಟಾಪ್ ಹಾಗೂ 7 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಲತಃ ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯದವರಾದ ಯುವರಾಜ್(19), ಪ್ರಭು(25) ಮತ್ತು ಸೆಲ್ವರಾಜು(42) ಬಂಧಿತ ಅಂತಾರಾಜ್ಯ ಕಳ್ಳರು. ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಪಿಜಿ, ಹಾಸ್ಟೆಲ್ ಹಾಗೂ ಲಾಡ್ಜ್‍ಗಳಲ್ಲಿ ಮೊಬೈಲ್ ಫೋನ್ ಮತ್ತು ಲ್ಯಾಪ್‍ಟಾಪ್‍ಗಳು ಕಳುವಾಗಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗಿತ್ತು.

ಈ ಸಂಬಂಧ ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ಅಪರಾಧ ವಿಭಾಗದ ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡಿದ್ದಾಗ ಸಂಜೆ ವೇಳೆ ಮತ್ತಿಕೆರೆ, ರಾಮಯ್ಯ ಕಾಲೇಜ್ ಬಳಿ ಗಸ್ತಿನಲ್ಲಿದ್ದರು. ಈ ವೇಳೆ ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರನ್ನು ಗಮನಿಸಿ ಓಡಲಾರಂಭಿಸಿದಾಗ ಸಿಬ್ಬಂದಿ ಬೆನ್ನಟ್ಟಿ ಹಿಡಿದು ಪರಿಶೀಲನೆಗೊಳಪಡಿಸಿದಾಗ ಅವರ ಬಳಿ ಏಳು ಮೊಬೈಲ್‍ಫೋಗಳು ಪತ್ತೆಯಾಗಿವೆ. ಮಾಲು ಸಮೇತ ಠಾಣೆಗೆ ಕರೆತಂದು ವರದಿಯನ್ನು ಯಶವಂತಪುರ ಪೊಲೀಸ್ ಠಾಣೆಗೆ ನೀಡಿದ್ದು, ಪ್ರಕರಣ ದಾಖಲಾಗಿರುತ್ತದೆ.

ಭಾರತ ಸದೃಢವಾಗಿ ಬೆಳೆಯುತ್ತಿದೆ ; ಐಎಂಎಫ್

ಈ ಮೂವರು ಆರೋಪಿಗಳ ಬಳಿಯಿದ್ದ ಮೊಬೈಲ್‍ಫೋನ್‍ಗಳು ಕಳವು ಮಾಡಿದ್ದು, ಅವುಗಳನ್ನು ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ ಮೇರೆಗೆ ಈ ಪ್ರಕರಣದಲ್ಲಿ ತನಿಖೆಯನ್ನು ಮುಂದುವರೆಸಿ ಅವರು ನೀಡಿದ ಮಾಹಿತಿ ಮೇರೆಗೆ 15.90 ಲಕ್ಷ ರೂ. ಬೆಲೆಬಾಳುವ ಡೆಲ್ ಕಂಪೆನಿಯ 17, ಎಚ್‍ಪಿ 15, ಲೆನೊವಾ 10, ತೋಶಿಬಾ ಎರಡು, ಅವಿತಾ 2, ಸೋನಿ, ಗೇಟ್‍ವೇ, ಏಸರ್, ತಿಂಕ್ ಪ್ಯಾಡ್ ಕಂಪೆನಿಯ ತಲಾ ಒಂದು ಮೊಬೈಲ್‍ಗಳು ಸೇರಿದಂತೆ ಒಟ್ಟು 50 ಲ್ಯಾಪ್‍ಟಾಪ್‍ಗಳು ಹಾಗೂ 7 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ತೆಲಂಗಾಣದ BRS ನಾಯಕರಿಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಆರೋಪಿಗಳ ಬಂಧನದಿಂದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 25 ಲ್ಯಾಪ್‍ಟಾಪ್ ಪ್ರಕರಣಗಳು ಪತ್ತೆಯಾಗಿವೆ. ಉಳಿದ ಲ್ಯಾಪ್‍ಟಾಪ್ ಮತ್ತು ಮೊಬೈಲ್ ಫೋನ್‍ಗಳ ಕಳವು ಪ್ರಕರಣ ಮಾಹಿತಿ ಪಡೆಯಲಾಗುತ್ತಿವೆ. ಈ ಪ್ರಕರಣದಲ್ಲಿ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯಪ್ರಗತಿಯಲ್ಲಿದೆ. ಈ ಕಾರ್ಯಾಚರಣೆಯನ್ನು ಯಶವಂತಪುರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿ ಕೈಗೊಂಡಿದ್ದರು.

RELATED ARTICLES

Latest News