Wednesday, May 8, 2024
Homeರಾಷ್ಟ್ರೀಯಲೋಕಸಭೆ ಚುನಾವಣೆಗೆ ಪೂರ್ವ ಸಿದ್ದತೆ ಮಾಡಿಕೊಳ್ಳುವಂತೆ ಸಚಿವರಿಗೆ ಪ್ರಧಾನಿ ಮೋದಿ ನಿರ್ದೇಶನ

ಲೋಕಸಭೆ ಚುನಾವಣೆಗೆ ಪೂರ್ವ ಸಿದ್ದತೆ ಮಾಡಿಕೊಳ್ಳುವಂತೆ ಸಚಿವರಿಗೆ ಪ್ರಧಾನಿ ಮೋದಿ ನಿರ್ದೇಶನ

ನವದೆಹಲಿ,ನ.29- ಮುಂಬರುವ 2024ರ ಲೋಕಸಭೆ ಚುನಾವಣೆಗೆ ಇಂದಿನಿಂದಲೇ ಅಗತ್ಯ ಪೂರ್ವ ಸಿದ್ದತೆಗಳನ್ನು ಕೈಗೊಳ್ಳುವಂತೆ ಸಂಪುಟದ ಎಲ್ಲ ಸಚಿವರಿಗೆ ಪ್ರಧಾನಿ ನರೇಂದ್ರಮೋದಿ ಅವರು ನಿರ್ದೇಶನ ನೀಡಿದ್ದಾರೆ. ಕಳೆದ ರಾತ್ರಿ ತಮ್ಮ ನಿವಾಸದಲ್ಲಿ ಸಂಪುಟದ ಕೆಲವು ಹಿರಿಯ ಸಚಿವರ ಜೊತೆ ಸಭೆ ನಡೆಸಿರುವ ಮೋದಿ ಅವರು ಈ ಬಾರಿಯ 2024ರ ಲೋಕಸಭೆ ಚುನಾವಣೆ ಪಕ್ಷಕ್ಕೆ ಮಾಡು ಇಲ್ಲವೇ ಮಡಿ ಎಂಬಂತಿದೆ. ಹೀಗಾಗಿ ಚುನಾವಣೆಗೆ ಬೇಕಾದ ಸಿದ್ದತೆಗಳನ್ನು ಇಂದಿನಿಂದಲೇ ಆರಂಭಿಸಿ ಎಂದು ಸೂಚನೆ ಕೊಟ್ಟಿದ್ದಾರೆ.

ಇದೇ ತಿಂಗಳಿನಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ಸಲುಪಿಸುವ ಭಾರತ ಸಂಕಲ್ಪ ಯಾತ್ರೆ ದೇಶಾದ್ಯಂತ ಸಂಚರಿಸಲಿದ್ದು, ಇದನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರು ಇದರಲ್ಲಿ ತೊಡಗಿಸಿಕೊಳ್ಳಬೇಕು. ಮತದಾರರ ಜೊತೆ ಕೆಳಹಂತದ ಕಾರ್ಯಕರ್ತರನ್ನು ತಲುಪಲು ಇದು ಅನುಕೂಲವಾಗಲಿದೆ ಎಂದಿದ್ದಾರೆ.

ಯಾತ್ರೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ಇದರಲ್ಲಿ ಯಾರೊಬ್ಬರು ಗಣ್ಯವ್ಯಕ್ತಿಗಳಾಗುವುದಿಲ್ಲ. ಪ್ರತಿಯೊಬ್ಬರು ಸಂಘಟನೆ ಹಿನ್ನಲೆಯಿಂದ ಬಂದವರು. ಕೇಂದ್ರ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಿವೆ ಎಂಬುದನ್ನು ಖುದ್ದು ವೀಕ್ಷಿಸಲು ಇದೊಂದು ಸುವರ್ಣಾವಕಾಶ. ಹಾಗಾಗಿ ಇದನ್ನು ಯಶಸ್ವಿಗೊಳಿಸಲು ಅಗತ್ಯ ಪೂರ್ವ ಸಿದ್ದತೆಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ಮಾಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಮುಂದುವರಿಕೆ..?

ನಾವು ಜನತೆಗೆ ಯಾವೆಲ್ಲ ಭರವಸೆಗಳನ್ನು ಕೊಟ್ಟಿದ್ದೇವೆ, ಅದು ಎಷ್ಟರಮಟ್ಟಿಗೆ ಫಲಾನುಭವಿಗಳನ್ನು ತಲುಪಿದೆ, ಇದರಿಂದ ಜನರಿಗೆ ಅನುಕೂಲವಾಗಿದೆಯೇ? ಇಲ್ಲವೇ ಯೋಜನೆ ಅನುಷ್ಠಾನದಲ್ಲಿ ಲೋಪವಾಗಿದೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲು ಭಾರತ್ ಸಂಪರ್ಕ ಯಾತ್ರೆ ಒಂದು ವೇದಿಕೆಯಾಗಲಿದೆ ಎಂದಿದ್ದಾರೆ.

ಮೂಲಗಳ ಪ್ರಕಾರ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ನಂತರ ಹಾಗೂ ಚಳಿಗಾಲದ ಅವೇಶನ ಮುಗಿದ ಬಳಿಕ ಲೋಕಸಭೆ ಚುನಾವಣೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಮೋದಿಯವರೇ ಪಕ್ಷದ ಪ್ರಮುಖರ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ, ಸಂಘಟನಾ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಆಯಾ ರಾಜ್ಯ ಘಟಕದ ಅಧ್ಯಕ್ಷರು ಸೇರಿದಂತೆ ಹಲವರ ಜೊತೆ ಸಭೆ ನಡೆಸಿ ಚುನಾವಣೆ ಗೆಲ್ಲಲು ಕಾರ್ಯತಂತ್ರವನ್ನು ರೂಪಿಸಲಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿ ದೇಶಾದ್ಯಂತ ಪ್ರತಿಯೊಬ್ಬರಿಗೂ ಸಮಾನ ಕಾನೂನು ನೀಡುವ ಏಕರೂಪ ನಾಗರಿಕ ಸಂಹಿತೆ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಬಿಜೆಪಿಯೊಳಗೆ ಒತ್ತಡ ಹೆಚ್ಚಾಗಿದೆ. ಈ ಕಾಯ್ದೆ ಜಾರಿಯಾದರೆ ಹಿಂದೂ ಮತಗಳ ಕ್ರೌಢೀಕರಣವಾಗಲಿದ್ದು, ಚುನಾವಣೆಗೆ ಇದು ಅನುಕೂಲವಾಗಲಿದೆ ಎಂಬುದು ಪ್ರಮುಖರ ಒತ್ತಾಸೆ. ಆದರೆ ಈ ಅವೇಶನದಲ್ಲಿ ಮೂರು ಐಪಿಸಿ ಸೆಕ್ಷನ್ ಕಾಯ್ದೆಗಳನ್ನು ತಿದ್ದುಪಡಿ ಮಾಡಿರುವ ಕಾಯ್ದೆ ಮಂಡನೆಯಾಗಲಿದೆ. ನಂತರವಷ್ಟೇ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಮಂಡನೆ ಮಾಡುವ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ ಎಂದು ಗೊತ್ತಾಗಿದೆ.

RELATED ARTICLES

Latest News