Thursday, December 5, 2024
Homeರಾಷ್ಟ್ರೀಯ | Nationalಚುನಾವಣಾ ಕರ್ತವ್ಯಯದಲ್ಲಿದ್ದ ಕಾನ್‌ ಸ್ಟೇಬಲ್‌ ಹೃದಯಾಘಾತದಿಂದ ಸಾವು

ಚುನಾವಣಾ ಕರ್ತವ್ಯಯದಲ್ಲಿದ್ದ ಕಾನ್‌ ಸ್ಟೇಬಲ್‌ ಹೃದಯಾಘಾತದಿಂದ ಸಾವು

ಮುಂಬೈ, ಮೇ 8-ಮಧ್ಯ ಮುಂಬೈನ ದಾದರ್‌ನಲ್ಲಿ ಚುನಾವಣಾ ಕರ್ತವ್ಯಯದಲ್ಲಿದ್ದ ಪೊಲೀಸ್‌‍ ಪೇದೆಯೊಬ್ಬರು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 7.40ಕ್ಕೆ ಈ ಘಟನೆ ಸಂಭವಿಸಿದ್ದು, ನೆರೆಯ ಥಾಣೆ ಜಿಲ್ಲೆಯ ಡೊಂಬಿವಿಲಿ ನಿವಾಸಿ ವಿಲಾಸ್‌‍ ಯಾದವ್‌(38)ಸಾವನ್ನಪ್ಪಿದ ಪೇದೆ ಎಂದು ಗುರುತಿಸಲಾಗಿದೆ.

ಸೆಂಟ್ರಲ್‌ ಮುಂಬೈನ ಶಿವಾಜಿ ಪಾರ್ಕ್‌ ಪೊಲೀಸ್‌‍ ಠಾಣೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯಾದವ್‌ ಅವರನ್ನು ಕಳೆದೆರಡು ದಿನಗಳಿಂದ ಸ್ಟ್ರಾಂಗ್‌ ರೂಮ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಅವರು ಡಿಸಿಲ್ವಾ ಹೈಸ್ಕೂಲ್‌ ಸ್ಟ್ರಾಂಗ್‌ ರೂಂಗೆ ಕರ್ತವ್ಯಕ್ಕೆ ಹೋಗಿದ್ದರು, ಅಲ್ಲಿ ಅವರು ಫ್ಲೈಯಿಂಗ್‌ ಸ್ಕ್ವಾಡ್‌ನ ಭಾಗವಾಗಿದ್ದರು. ಆದರೆ ಸ್ಥಳವನ್ನು ತಲುಪಿದ ನಂತರ ಅವರು ಅಸ್ವಸ್ಥಗೊಂಡರು.

ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ವೈದ್ಯಕೀಯ ಸೌಲಭ್ಯಕ್ಕೆ ತಲುಪಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿವಾಜಿ ಪಾರ್ಕ್‌ ಪೊಲೀಸ್‌‍ ಠಾಣೆಯಲ್ಲಿ ಆಕಸಿಕ ಸಾವಿನ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದರು.

RELATED ARTICLES

Latest News