Friday, June 14, 2024
Homeರಾಜಕೀಯಹಾವು-ಮುಂಗಸಿಗಳಂತೆ ಪರಸ್ಪರ ಕಚ್ಚಾಡುವ ನಾಯಕರು ಮುಖಾಮುಖಿಯಾದಾಗ..

ಹಾವು-ಮುಂಗಸಿಗಳಂತೆ ಪರಸ್ಪರ ಕಚ್ಚಾಡುವ ನಾಯಕರು ಮುಖಾಮುಖಿಯಾದಾಗ..

ಬೆಂಗಳೂರು, ಜೂ.3- ಲೋಕಸಭಾ ಚುನಾವಣೆಯಿಂದಲೂ ಹಾವು ಮುಂಗಸಿಗಳಂತೆ ಪರಸ್ಪರ ಆರೋಪ-ಪ್ರತ್ಯಾರೋಪಗಳ ಮೂಲಕ ಕೆಂಡಕಾರುತ್ತಿರುವ ಕಾಂಗ್ರೆಸ್‌‍ ಮತ್ತು ಜೆಡಿಎಸ್‌‍ನ ವರಿಷ್ಠ ನಾಯಕರು ಪರಸ್ಪರ ಎದುರಾದಾಗ ನಾನಾ ರೀತಿಯ ಸ್ವಾರಸ್ಯಕರ ಪ್ರಸಂಗಗಳು ನಡೆದವು.

ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಚುನಾವಣೆ ನಡೆಯುವ 11 ಕ್ಷೇತ್ರಗಳ ಚುನಾವಣಾ ಪ್ರಕ್ರಿಯೆಯಲ್ಲಿ ನಾಮಪತ್ರ ಸಲ್ಲಿಕೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರಸ್ಪರ ಎದುರಾಗಿದ್ದಾರೆ. ವಿಧಾನಸಭೆಯ ಕಾರ್ಯದರ್ಶಿಯವರ ಕಚೇರಿಗೆ ಮೊದಲು ಭೇಟಿ ನೀಡಿದ್ದ ಕುಮಾರಸ್ವಾಮಿ ತಮ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಬಳಿಕ ಹೊರಬಂದರು.

ಆ ವೇಳೆಗೆ ಸರಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್‌.ಕೆ.ಪಾಟೀಲ್‌, ಎಚ್‌.ಸಿ.ಮಹದೇವಪ್ಪ, ಕೆ.ವೆಂಕಟೇಶ್‌ ಅವರೊಂದಿಗೆ ತಮ ಸರದಿಗಾಗಿ ಕಾಯುತ್ತಾ ನಿಂತಿದ್ದರು. ಕುಮಾರಸ್ವಾಮಿ ಹೊರಬರುವುದನ್ನು ಕಂಡ ಸಿದ್ದರಾಮಯ್ಯನವರು ಕೈ ಎತ್ತಿ ಹಾರೈಸಿದರು. ಅದಕ್ಕೆ ಕುಮಾರಸ್ವಾಮಿ ಪ್ರತಿಯಾಗಿ ವಂದಿಸಿ ಮುಂದೆ ಹೆಜ್ಜೆ ಹಾಕಿದರು.

ಅವರ ಹಿಂದೆ ಬಂದ ಜೆಡಿಎಸ್‌‍ನ ವಿಧಾನಪರಿಷತ್‌ ಸದಸ್ಯ ಶರವಣ ಅವರು ಮುಖ್ಯಮಂತ್ರಿ ಹಾಗೂ ಎಚ್‌.ಕೆ.ಪಾಟೀಲರಿಗೆ ನಮಸ್ಕಾರ ಹೇಳಿದರು. ಜಿ.ಟಿ.ದೇವೇಗೌಡ ಸೇರಿದಂತೆ ಹಲವು ನಾಯಕರು ಮುಖ್ಯಮಂತ್ರಿಯವರ ಬಳಿ ಬಂದು ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿಕೊಂಡು ಹೋದರು.

ಮುಂದೆ ಹೆಜ್ಜೆ ಹಾಕಿದ ಕುಮಾರಸ್ವಾಮಿಯವರು ಸಚಿವ ಎಚ್‌.ಸಿ.ಮಹದೇವಪ್ಪ ಅವರಿಗೆ ಹಸ್ತಲಾಘವ ನೀಡಿ ತೆರಳಿದರು. ಕುಮಾರಸ್ವಾಮಿ ಮುಂದೆ ಸಾಗುತ್ತಿದ್ದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಿಧಾನಕ್ಕೆ ಬಂದರು. ಇಬ್ಬರೂ ಪರಸ್ಪರ ಮುಖವನ್ನೂ ನೋಡದೇ ಹಾದಿ ಸವೆಸಿದ್ದು ಗಮನಾರ್ಹವಾಗಿತ್ತು.ಅನಂತರ ಕಾಂಗ್ರೆಸ್‌‍ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಭಾಗಿಯಾಗಿದ್ದರು.

RELATED ARTICLES

Latest News