Wednesday, February 28, 2024
Homeರಾಜ್ಯಈ ಕ್ಷಣವೇ ರಾಜೀನಾಮೆ ನೀಡಲು ಸಿದ್ಧ : ಬಸವರಾಜ ಹೊರಟ್ಟಿ

ಈ ಕ್ಷಣವೇ ರಾಜೀನಾಮೆ ನೀಡಲು ಸಿದ್ಧ : ಬಸವರಾಜ ಹೊರಟ್ಟಿ

ಬೆಳಗಾವಿ, ಡಿ.8- ನಾನು ಈ ಕುರ್ಚಿಗೆ ಅಂಟಿಕೊಂಡು ಕುಳಿತಿಲ್ಲ. ಈ ಕ್ಷಣವೇ ಬೇಕಾದರೂ ರಾಜೀನಾಮೆ ನೀಡುವೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಮಾರ್ಮಿಕವಾಗಿ ಮೇಲ್ಮನೆಯಲ್ಲಿ ನುಡಿದರು.

ವಿಧಾನಪರಿಷತ್ತಿನ ಕಲಾಪದಲ್ಲಿಂದು ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ವಿಚಾರಕ್ಕೆ ಮೇಲ್ಮನೆಯಲ್ಲಿ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ, ಪೀಠದಿಂದ ಎದ್ದು ನಿಂತ ಅವರು, ಇದೇ ರೀತಿ ಪದ್ಧತಿ ಮುಂದುವರೆಸಿದರೆ ಸುಗಮ ಕಲಾಪ, ಸದನ ನಡೆಸುವುದು ಬೇಡ ಅನಿಸುತ್ತಿದೆ ಎಂದರು.

ಇಂದಿರಾ ಕ್ಯಾಂಟಿನ್‍ನಲ್ಲಿ ಚಪಾತಿ, ಮುದ್ದೆ, ಬಸ್ಸಾರು ಭಾಗ್ಯ

ಪ್ರಶ್ನೋತ್ತರ ವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡಲು ಸಾಧ್ಯವೇ ಇಲ್ಲ. ಆದರೂ, ಈ ವಿಷಯದ ಗಂಭೀರವನ್ನು ಅರೆತು ಸೋಮವಾರ ಅರ್ಧ ಗಂಟೆ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ಧರಣಿ ಕೈಬಿಟ್ಟು ಹೊರಬಣ್ಣಿ ಎಂದು ರೂಲಿಂಗ್ ನೀಡಿದರು. ಆದರೂ, ವಿಪಕ್ಷ ಸದಸ್ಯರು ಸದನದ ಬಾವಿಯಲ್ಲಿಯೇ ಇದ್ದ ಕಾರಣಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಸ್ಥಾನದಲ್ಲಿ ನನಗೂ ಸಾಕಾಗಿದೆ. ನಾನು ಈ ಕುರ್ಚಿಗಾಗಿ ಅಂಟಿಕೊಂಡಿಲ್ಲ, ಈ ಕ್ಷಣವೇ ರಾಜೀನಾಮೆ ನೀಡಿ ಮನೆಗೆ ಹೋಗುವೇ ಎಂದರು ತಿಳಿಸಿದರು.

RELATED ARTICLES

Latest News