ಬೆಂಗಳೂರು, ಅ.16-ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಎರಡು ದಿನಗಳ ಕಾಲ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ನೈರುತ್ಯ ಮುಂಗಾರು ಮುಕ್ತಾಯದ ಅವಧಿಯಾಗಿರುವುದರಿಂದ ಸಹಜವಾಗಿ ಉತ್ತಮ ಮಳೆಯಾಗಬೇಕು. ಆದರೆ, ಚದುರಿದಂತೆ ಸಾಧಾರಣ ಮಳೆಯಾಗುತ್ತಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಆದರೆ, ಈಶಾನ್ಯ ಹಿಂಗಾರು ಮಳೆ ಪ್ರಾರಂಭವಾಗುವ ಸ್ಪಷ್ಟ ಲಕ್ಷಣಗಳು ಈತನಕ ಗೋಚರಿಸುತ್ತಿಲ್ಲ. ಮುಂಗಾರು ಅವ ಮುಗಿಯುತ್ತಿದ್ದಂತೆ ಹಿಂಗಾರು ಆರಂಭಗೊಳ್ಳುವುದು ವಾಡಿಕೆ. ಈ ಬಾರಿ ಅಂತಹ ಯಾವ ಸುಳಿವು ಇದುವರೆಗೆ ಕಂಡುಬಂದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಕಾಂಗ್ರೆಸ್ ಕೇವಲ ‘ಲೂಟಿ ಗ್ಯಾರಂಟಿ’ ಮಾತ್ರ ನೀಡಬಲ್ಲದು : ನಡ್ಡಾ
ಅರಬ್ಬೀ ಸಮುದ್ರದ ಲಕ್ಷ ದ್ವೀಪದ ಬಳಿ ವಾಯುಭಾರ ಕುಸಿತವಾಗಿದ್ದು, ಅದರಿಂದ ರಾಜ್ಯದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಚದುರಿದಂತೆ ಹಗರದಿಂದ ಸಾಧಾರಣ ಮಳೆ ನಿರೀಕ್ಷಿಸಬಹುದಾಗಿದೆ.
ಇನ್ನೆರಡು ದಿನ ಕರಾವಳಿ ಹಾಗೂ ಒಳನಾಡಿನಲ್ಲಿ ಮಳೆ ಮುಂದುವರೆಯಲಿದೆ. ಕಳೆದ ಎರಡು ವಾರದಲ್ಲೂ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ಬಹಳಷ್ಟು ಕಡೆಗಳಲ್ಲಿ ಒಣಹವೆ ಮುಂದುವರೆದಿದ್ದು, ತೇವಾಂಶ ಕೊರತೆಯಿಂದ ಬೆಳೆಗಳು ಒಣಗುತ್ತಿವೆ.
ಮುಂಗಾರು ಮಳೆಯ ಮರಳುವಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಇನ್ನೆರಡು ದಿನಗಳಲ್ಲಿ ಮುಗಿಯುವ ಸಾಧ್ಯತೆಗಳಿವೆ. ಮುಂಗಾರು ಮುಗಿಯುತ್ತಿದ್ದಂತೆ ಹಿಂಗಾರು ಮಳೆ ಆರಂಭವಾಗಬೇಕು. ಆದರೆ, ಅಂತಹ ಯಾವ ಸುಳಿವು ಈಗ ಕಂಡುಬರುತ್ತಿಲ್ಲ. ಹಿಂಗಾರು ಮಳೆ ಆರಂಭಗ್ಳೊಳ್ಳುವ ಮುನ್ನ ತಂಪಾದ ಮೇಲ್ಮೈ ಗಾಳಿ ಬೀಸಬೇಕು. ಇದರ ಬಲಿಗೆ ಒಣ ಹವೆ ಇದ್ದು, ಕೆಲವೆಡೆ ಪ್ರಖರ ಬಿಸಿಲಿರುವುದು ಕಂಡುಬರುತ್ತಿದೆ.
ಇಸ್ಲಾಮಿಕ್ ರಾಷ್ಟ್ರಗಳ ವಿರುದ್ಧ ಹರಿಹಾಯ್ದ ನಿಕ್ಕಿ ಹ್ಯಾಲೆ
ಇದರಿಂದ ಹಿಂಗಾರು ಪ್ರಾರಂಭವೂ ವಿಳಂಬವಾಗುವುದನ್ನು ಅಲ್ಲಗಳೆಯಲಾಗದು ಎನ್ನುತ್ತಾರೆ ಹವಾಮಾನ ತಜ್ಞರು. ಮುಂಗಾರು ಮಳೆಯ ಆರಂಭವೂ ವಿಳಂಬವಾಗಿತ್ತು. ಜುಲೈ ತಿಂಗಳನ್ನು ಹೊರತುಪಡಿಸಿದರೆ, ಜೂನ್, ಆಗಸ್ಟ್, ಸೆಪ್ಟೆಂಬರ್‍ನಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಅಕ್ಟೋಬರ್‍ನಲ್ಲೂ ಅದೇ ಪರಿಸ್ಥಿತಿ ಮುಂದುವರೆಯುತ್ತಿದೆ. ಹೀಗಾಗಿ ರೈತರು ಮಳೆಗಾಗಿ ಆಕಾಶದತ್ತ ಮುಖಮಾಡುವಂತಾಗಿದೆ.