Friday, May 3, 2024
Homeಆರೋಗ್ಯ / ಜೀವನಶೈಲಿಮದ್ಯಪಾನ ಮತ್ತು ಬೊಜ್ಜು ಮೈ ಹೊಂದಿರುವ ಜನರಲ್ಲಿ ಪಿತ್ತಜನಕಾಂಗದ ರೋಗ ಬೇಗನೆ ಪತ್ತೆಯಾಗಬಹುದು

ಮದ್ಯಪಾನ ಮತ್ತು ಬೊಜ್ಜು ಮೈ ಹೊಂದಿರುವ ಜನರಲ್ಲಿ ಪಿತ್ತಜನಕಾಂಗದ ರೋಗ ಬೇಗನೆ ಪತ್ತೆಯಾಗಬಹುದು

ಸರಳವಾದ ಜೀವನಶೈಲಿಯ ಬದಲಾವಣೆ ಮತ್ತು ರೋಗ ತಡೆಯುವ ಕ್ರಮಗಳ ಮೂಲಕ ಶೇ.90ರಷ್ಟು ಪಿತ್ತಜನಕಾಂಗ ಸಂಬoಧಿತ ರೋಗ ಪ್ರಕರಣಗಳನ್ನು ತಡೆಯಬಹುದು ಎಂಬುದನ್ನು ನಮ್ಮಲ್ಲಿ ಅನೇಕರಿಗೆ ಜಾಗೃತಿ ಇರುವುದಿಲ್ಲ. ಪ್ರತಿ ವರ್ಷ ಜಾಗತಿಕವಾಗಿ ಪಿತ್ತಜನಕಾಂಗ ರೋಗದಿಂದಾಗಿ ಸುಮಾರು ಎರಡು ದಶಲಕ್ಷ ಸಾವುಗಳು ಸಂಭವಿಸಿದರೆ, ಜಾಗತಿಕವಾಗಿ 1.5 ಶತಕೋಟಿ ಜನರು ಈ ತೊಂದರೆಯಿoದ ಪೀಡಿತರಾಗಿರುತ್ತಾರೆ ಎಂದು ಪ್ರಸ್ತುತ ಇರುವ ಅಂಕಿಅoಶಗಳು ತಿಳಿಸುತ್ತವೆ. ಜಗತ್ತಿನ ಎಲ್ಲೆಡೆ ಸಂಭವಿಸುವ 25 ಸಾವುಗಳಲ್ಲಿ ಒಂದು ಪಿತ್ತಜನಕಾಂಗಕ್ಕೆ ಸಂಬoಧಿತವಾಗಿರುತ್ತದೆ. ಎಲ್ಲ ಪಿತ್ತಜನಕಾಂಗ ಸಂಬoಧಿತ ಸಾವುಗಳಲ್ಲಿ ಸುಮಾರು ಮೂರನೇ ಎರಡರಷ್ಟು ಸಾವುಗಳು ಪುರುಷರದ್ದಾಗಿರುತ್ತದೆ.

2023ರಲ್ಲಿ ಭಾರತದಲ್ಲಿ 2,68.580 ಪಿತ್ತಜನಕಾಂಗಕ್ಕೆ ಸಂಬoಧಿಸಿದ ಸಾವುಗಳು ಸಂಭವಿಸಿದ್ದವು. ದೇಶದಲ್ಲಿ ಎಲ್ಲ ಸಾವುಗಳ ಪೈಕಿ ಇವು ಶೇ.3.17ರಷ್ಟು ಭಾಗ ಹೊಂದಿದ್ದವು. ಸಿರಾಸಿಸ್‌ನಂತಹ ಪಿತ್ತಜನಕಾಂಗ ರೋಗಗಳ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗಿದ್ದು, ಪ್ರಸ್ತುತ ಸುಮಾರು 10.6 ದಶಲಕ್ಷ ತೀವ್ರ ಹಾನಿಗೊಳಗಾಗಿರುವ ಪಿತ್ತಜನಕಾಂಗ ಹೊಂದಿರುವ ಸಿರಾಸಿಸ್ ಪ್ರಕರಣಗಳು ಇವೆ ಎನ್ನಲಾಗಿದೆ.

ಆಲ್ಕೋಹಾಲ್ ಸಹಯೋಗದ ಪಿತ್ತಜನಕಾಂಗ ರೋಗ(ಎಎಲ್‌ಡಿ), ಆಲ್ಕೋಹಾಲ್‌ಯೇತರ ಫ್ಯಾಟಿ ಲಿವರ್ ರೋಗ(ಎನ್‌ಎಎಫ್‌ಎಲ್‌ಡಿ) ಮತ್ತು ಹೆಪಟೈಟಿಸ್ ಬಿ ಮತ್ತು ಸಿಗಳು ಪಿತ್ತಜನಕಾಂಗಕ್ಕೆ ಸಂಬoಧಿಸಿದ ಸಾವುಗಳಿಗೆ ಪ್ರಮುಖವಾಗಿ ಚಾಲನೆ ನೀಡುವ ಅಂಶಗಳಾಗಿವೆ. ಭಾರತದಲ್ಲಿ ಬೊಜ್ಜು ಮೈ ಅಥವಾ ಸ್ಥೂಲಕಾಯ ಪ್ರಕರಣಗಳು ಹಾಗೂ ಟೈಪ್ 2 ಡಯಾಬಿಟಿಸ್ ಮೆಲಿಟಸ್ ಪ್ರಕರಣಗಳು ಹೆಚ್ಚುತ್ತಿರುವಂತೆ ಎನ್‌ಎಎಫ್‌ಎಲ್‌ಡಿಯ ಅತಿಯಾದ ಹೊರೆ ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

ಪಿತ್ತಜನಕಾಂಗ ಅಥವಾ ಯಕೃತ್ ಮಾನವ ದೇಹದಲ್ಲಿ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ಹಲವಾರು ಕಾರ್ಯಗಳನ್ನು ಕೈಗೊಳ್ಳುತ್ತದೆ. ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕುವುದು, ಪ್ರೊಟಿನ್ ಸಂಶ್ಲೇಷಣೆ ಮತ್ತು ಪಚನಕ್ರಿಯೆಗೆ ನೆರವು ನೀಡುವುದು ಮುಂತಾದ ಕಾರ್ಯಗಳನ್ನು ಅದು ಕೈಗೊಳ್ಳುತ್ತದೆ.

ಹಣ್ಣುಗಳು, ತರಕಾರಿಗಳು, ಕಾಳುಗಳು, ಬೀಜಗಳು, ಸಂಪೂರ್ಣ ಧಾನ್ಯಗಳು ಮುಂತಾದವುಗಳನ್ನು ಒಳಗೊಂಡ ಆಹಾರಕ್ರಮಕ್ಕೆ ಬದಲಾಗುವಂತಹ ಸರಳ ಕ್ರಮಗಳಿಂದ ಪಿತ್ತಜನಕಾಂಗವನ್ನು ಸಂರಕ್ಷಿಸಲು ಸಹಾಯವಾಗುತ್ತದೆ. ಸಕ್ಕರೆ ತುಂಬಿರುವ ಪೇಯಗಳು ಮತ್ತು ಸಂಸ್ಕರಿಸಿದ ಮಾಂಸದ ಬಳಕೆಯನ್ನು ಕಡಿಮೆ ಮಾಡುವುದು ಮುಖ್ಯವಾಗಿರುತ್ತದೆ. ನಿಗದಿತ ವ್ಯಾಯಾಮದ ಮೂಲಕ ತೂಕ ನಿರ್ವಹಣೆಯು ಪಿತ್ತಜನಕಾಂಗ ರೋಗದ ಅಪಾಯವನ್ನು ಕಡಿಮೆ ಮಾಡುವಲ್ಲಿ ನೆರವು ನೀಡುವುದು.

ನಿಮ್ಮ ಪಿತ್ತಜನಕಾಂಗದ ಆರೋಗ್ಯ ಸಂರಕ್ಷಿಸಲು ಆಲ್ಕೋಹಾಲ್‌ನಿಂದ ಉಂಟಾಗುವ ಅಪಾಯ ಕುರಿತು ಜಾಗೃತಿ ಮುಖ್ಯವಾಗಿರುತ್ತದೆ. ಏಕೆಂದರೆ ಮದ್ಯಪಾನವು ಪಿತ್ತಜನಕಾಂಗ ರೋಗ ಮತ್ತು ಅದರೊಂದಿಗೆ ಸಂಬoಧಿತ ಹಲವಾರು ಕ್ಯಾನ್ಸರ್‌ಗಳಿಗೆ ಪ್ರಮುಖ ಕೊಡುಗೆ ನೀಡುತ್ತದೆ. ಮದ್ಯಪಾನವನ್ನು ತಪ್ಪಿಸುವುದು ಅಥವಾ ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ಪಿತ್ತಜನಕಾಂಗದ ಆರೋಗ್ಯವನ್ನು ಸಂರಕ್ಷಿಸಲು ನೆರವಾಗಬಹುದು. ಹೆಪಟೈಟಿಸ್ ಬಿ ಮತ್ತು ಸಿಗಳ ವಿರುದ್ಧ ಲಸಿಕೆ ಪಡೆಯುವುದರಿಂದ ಈ ತೀವ್ರರೀತಿಯ ಪಿತ್ತಜನಕಾಂಗ ರೋಗಗಳ ಅಪಾಯ ಗಮನಾರ್ಹವಾಗಿ ಕಡಿಮೆ ಆಗುತ್ತದೆ.

ಆಲ್ಕೋಹಾಲ್ ಸಂಬoಧಿತ ತೊಂದರೆಗಳನ್ನು ಹೊಂದಿರುವ ಅಥವಾ ಬೊಜ್ಜು ಮೈ ಹೊಂದಿರುವ ಜನರಲ್ಲಿ ಪಿತ್ತಜನಕಾಂಗ ಸಂಬoಧಿತ ರೋಗಗಳನ್ನು ಶೀಘ್ರವಾಗಿ ಪತ್ತೆ ಮಾಡಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ನಂಬಿಕೆಯಾಗಿದೆ. ಇದು ನಿಜವಲ್ಲ. ಪಿತ್ತಜನಕಾಂಗ ರೋಗಗಳನ್ನು ಮತ್ತು ಅವುಗಳನ್ನು ಹೇಗೆ ತಡೆಯಬಹುದು ಎಂಬುದನ್ನು ಕುರಿತು ಜಾಗೃತಿ ಹೆಚ್ಚುವುದು ಇಂತಹ ರೋಗಿಗಳಿಗೆ ಮುಖ್ಯವಾಗಿರುತ್ತದೆ. ಸಾಮಾನ್ಯ ಪಿತ್ತಜನಕಾಂಗ ಪರೀಕ್ಷೆಗಳು ಪಿತಜನಕಾಂಗದ ರೋಗಗಳನ್ನು ಆರಂಭದ ಹಂತಗಳಲ್ಲಿ ಪತ್ತೆ ಮಾಡಲು ಸಹಾಯ ಮಾಡಬಹುದಾಗಿದ್ದು, ಇದರಿಂದ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಬಹುದು.

ಪಿತ್ತಜನಕಾಂಗದ ರೋಗಗಳು ಸದ್ದಿಲ್ಲದೆ ಪ್ರಗತಿ ಹೊಂದುತ್ತಿರುತ್ತದೆ. ಅಲ್ಲದೆ ಇವು ಸಿರಾಸಿಸ್ ಮತ್ತು ಪಿತ್ತಜನಕಾಂಗ ವೈಫಲ್ಯಕ್ಕೆ ದಾರಿಯಾಗಬಹುದು. ಜಾಗತಿಕವಾಗಿ ಇಷೆಮಿಕ್ ಹೃದಯ ರೋಗದ ನಂತರದ ಸ್ಥಾನವನ್ನು ಇವು ಹೊಂದಿವೆ.

ಪಿತ್ತಜನಕಾಂಗದ ರೋಗಗಳು ಕಂಡುಬರುವುದು ಮತ್ತು ಅದರ ಪರಿಣಾಮಗಳನ್ನು ಕಡಿಮೆ ಮಾಡಲು ಆರೋಗ್ಯ ಸಾಕ್ಷರತೆ ಹೆಚ್ಚಳವಾಗುವುದು ಮತ್ತು ನಡವಳಿಕೆಯಲ್ಲಿನ ಬದಲಾವಣೆಗಳು ಮುಖ್ಯ ಅಗತ್ಯವಾಗಿರುತ್ತದೆ. ಪಿತ್ತಜನಕಾಂಗದ ಆರೋಗ್ಯ ಶಿಕ್ಷಣವನ್ನು ಪ್ರೋತ್ಸಾಹಿಸುವುದು ಹಾಗೂ ಪಿತ್ತಜನಕಾಂಗದ ರೋಗಗಳು ಮತ್ತು ಅವುಗಳನ್ನು ಹೇಗೆ ತಡೆಯಬಹುದು ಎಂಬುದನ್ನು ಕುರಿತು ಮಾಹಿತಿ ಹಂಚಿಕೊಳ್ಳುವುದರಿoದ ಜೀವಗಳನ್ನು ಉಳಿಸಬಹುದು.

ಹೆಚ್ಚುವರಿಯಾಗಿ, ಯಾವುದೇ ಪರಿಸ್ಥಿತಿಯವರಾಗಿರಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಪಿತ್ತಜನಕಾಂಗ ಆರೋಗ್ಯ ಸೇವೆಗಳು ಲಭಿಸುವ ಖಾತ್ರಿ ಮಾಡಿಕೊಳ್ಳುವಲ್ಲಿ ಉಪಕ್ರಮಗಳಿಗೆ ಬೆಂಬಲ ನೀಡುವುದು ಮುಖ್ಯವಾಗಿರುತ್ತದೆ. ಸಮತೋಲಿತ ಆಹಾರಕ್ರಮ ಮತ್ತು ನಿಗದಿತ ವ್ಯಾಯಾಮಗಳನ್ನು ಒಳಗೊಂಡ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮತ್ತು ಸಾಮಾನ್ಯವಾಗಿ ಪಿತ್ತಜನಕಾಂಗ ಸಮಸ್ಯೆಗಳ ಶೀಘ್ರ ಪತ್ತೆ ಮಾಡುವುದಕ್ಕಾಗಿ ಸಾಮಾನ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಗಮನಾರ್ಹ ವ್ಯತ್ಯಾಸ ಉಂಟುಮಾಡಬಲ್ಲದು.

ಡಾ. ಅತಿಫ್ ಅಹ್ಮದ್, ಪಚನಾಂಗ ರೋಗತಜ್ಞರು, ಟ್ರೈಲೈಫ್ ಹಾಸ್ಪಿಟಲ್

RELATED ARTICLES

Latest News