Wednesday, May 1, 2024
Homeರಾಜ್ಯಲೋಕಸಭಾ ಚುನಾವಣೆ : ನಾಳೆ ಮೊದಲ ಹಂತದ ಮತದಾನ, ಸಮೀಕ್ಷೆಗಳಿಗೆ ಆಯೋಗ ನಿಷೇಧ

ಲೋಕಸಭಾ ಚುನಾವಣೆ : ನಾಳೆ ಮೊದಲ ಹಂತದ ಮತದಾನ, ಸಮೀಕ್ಷೆಗಳಿಗೆ ಆಯೋಗ ನಿಷೇಧ

ಬೆಂಗಳೂರು, ಏ.18- ಪ್ರಸಕ್ತ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ಆರಂಭವಾಗಲಿದ್ದು, ನಾಳೆಯಿಂದ ಕೊನೆಯ ಹಂತದ ಮತದಾನ ಮುಕ್ತಾಯವಾಗುವ ಜೂನ್ 1 ರ ಸಂಜೆ 6.30 ಗಂಟೆಯವರೆಗೂ ಮತಗಟ್ಟೆ ಸಮೀಕ್ಷೆಯನ್ನು ಭಾರತದ ಚುನಾವಣಾ ಆಯೋಗ ನಿಷೇಧಿಸಿದೆ.

ನಾಳೆ ಬೆಳಿಗ್ಗೆ 7 ಗಂಟೆಯಿಂದ ಜೂನ್ 1 ರ ಸಂಜೆ 6.30 ರ ನಡುವಿನ ಅವಧಿಯಲ್ಲಿ ಯಾವುದೇ ಮಾಧ್ಯಮದಲ್ಲಿ ಮತದಾನಕ್ಕೆ ಸಂಬಂಧಪಟ್ಟ ಅಭಿಪ್ರಾಯದ ಸಮೀಕ್ಷೆಗಳು ಸೇರಿದಂತೆ ಚುನಾವಣೆಗೆ ಸಂಬಂಧಪಟ್ಟ ಯಾವುದೇ ಸಮೀಕ್ಷೆಯ ಫಲಿತಾಂಶವನ್ನು ಪ್ರಸಾರ ಮಾಡಲು ಆಯೋಗ ನಿರ್ಬಂಧಿಸಿದೆ.

ಮತದಾರರ ಮೇಲೆ ಪ್ರಭಾವ ಬೀರುವಂತಹ ಯಾವುದೇ ರೀತಿಯ ಸಮೀಕ್ಷೆ ಅಥವಾ ಅಭಿಪ್ರಾಯವನ್ನು ರಾಜ್ಯದ ಎಲ್ಲಾ ಎಲೆಕ್ಟ್ರಾನಿಕ್, ಮುದ್ರಣ ಮಾಧ್ಯಮಗಳು ಸೇರಿದಂತೆ ಯಾವುದೇ ರೀತಿಯ ಮಾಧ್ಯಮದಲ್ಲಿ ಪ್ರಸಾರ ಮಾಡದಿರಲು ಸೂಚಿಸಿದೆ.

RELATED ARTICLES

Latest News