Thursday, May 2, 2024
Homeರಾಜ್ಯರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರ ಮಿಂಚಿನ ದಾಳಿ

ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರ ಮಿಂಚಿನ ದಾಳಿ

ಬೆಂಗಳೂರು, ಅ.30-ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಮಿಂಚಿನ ದಾಳಿ ನಡೆಸಿ ಸರ್ಕಾರಿ ಭ್ರಷ್ಠ ಅಧಿಕಾರಿಗಳ ಬಂಡವಾಳ ಬಯಲಿಗೆಳೆದಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಮನೆಗಳು , ಕಚೇರಿ, ತೋಟದ ಮನೆ ಹಾಗೂ ವಿವಿದೆಡೆ ಇಂದು ಏಕಾಕಾಲಕ್ಕೆ ರಾಜ್ಯಾದ್ಯಂತ ಚಿತ್ರದುರ್ಗ, ತುಮಕೂರು,ಹಾಸನ, ಕಲಬುರಗಿ, ದಾವಣಗೆರೆ ,ಬೆಂಗಳೂರು ,ಬೆಳಗಾವಿ ,ಬೀದರ್, ಕಲಬುರಗಿ ಸೇರಿದಂತೆ ಸುಮಾರು 15 ಜಿಲ್ಲೆಗಳಲ್ಲಿ 95ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಹಾಸನ: ಹಾಸನದಲ್ಲಿ ಕೆಪಿಟಿಸಿಎಲ್ ಕಿರಿಯ ಇಂಜಿನಿಯರ್ ನಾರಾಯಣ ಅವರ ಮನೆ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಿದ್ದೆಯಿಂದ ಏಳುವ ಮುಂಚೆಯೇ ಲೋಕಾಯುಕ್ತ ಎಸ್‍ಪಿ ಮಲ್ಲಿಕ್ ನೇತೃತ್ವದ ಅಕಾರಿಗಳ ತಂಡ ಮನೆಯ ಬಾಗಿಲು ತಟ್ಟಿದೆ. ಡಿವೈಎಸ್‍ಪಿ ತಿರುಮಲೇಶ್, ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಬಾಲು, ಶಿಲ್ಪಾ ನೇತೃತ್ವದಲ್ಲಿ ಹಾಸನ ಹೊರವಲಯದ ಬೊಮ್ಮನಾಯಕನಹಳ್ಳಿರುವ ನಾರಾಯಣ ಅವರ ನಿವಾಸದಲ್ಲಿ ಚಿನ್ನಾಭರಣ, ಆಸ್ತಿ ದಾಖಲೆ ಹಾಗೂ ಗೊರೂರಿನಲ್ಲಿರುವ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯ್ಕ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಕೃಷ್ಣಮೂರ್ತಿ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ಚಿತ್ರದುರ್ಗದ ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯ್ಕ್ ಅವರ ಹಿರಿಯೂರು ಪಟ್ಟಣದ ಚಂದ್ರಾ ಲೇಔಟ್ ನಲ್ಲಿರುವ ಮನೆ ಮತ್ತು ತವಂದಿ ಗ್ರಾಮದ ಬಳಿಯ ಫಾರ್ಮ್ ಹೌಸ್‍ನಲ್ಲಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಅವರ ಹಿರಿಯೂರು ಪಟ್ಟಣದ ಕುವೆಂಪು ನಗರದ ಮನೆ ಹಾಗು ಕಛೇರಿ, ಸಂಬಂಧಿಕರ ಮನೆಯಲ್ಲೂ ಶೋಧಕಾರ್ಯ ನಡೆದಿದೆ. ದಾಳಿ ಸಂದರ್ಭದಲ್ಲಿ ಅಪಾರ ಪ್ರಮಾಣದ ನಗದು ಹಣ ,ಚಿನ್ನಾಭರಣ ಆಸ್ತಿ ಪತ್ರದ ದಾಖಲೆಗಳು ಪತ್ತೆಯಾಗಿದ್ದು, ಅವುಗಳನ್ನು ಪರಿಶೀಲಿಸುತ್ತಿದ್ದಾರೆ.

ವಾರಕ್ಕೆ 70 ಗಂಟೆಗೂ ಹೆಚ್ಚು ದುಡಿಯುತ್ತಿದ್ದಾರೆ ಭಾರತೀಯ ನಾರಿಯರು

ಹಾವೇರಿ : ಹಾವೇರಿ ಜಿಲ್ಲೆಯಲ್ಲಿ 9 ಕಡೆ ದಾಳಿ ನಡೆದಿದ್ದು ಹಾವೇರಿ ಪ್ರಾದೇಶಿಕ ಅರಣ್ಯಾಕಾರಿ (ಆರ್‍ಎಫ್‍ಓ) ಅಪರ ಮೇಶಪ್ಪ ಪೇರಲನವರ್ ಹಾಗು ನ್ಯಾಮತಿ ಪ್ರಾದೇಶಿಕ ಅರಣ್ಯಾಧಿಕಾರಿ (ಆರ್‍ಎಫ್‍ಓ) ಮಾಲತೇಶ್‍ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅವರ ಮನೆ ,ಕಚೇರಿ ಮೇಲೆ 20ಕ್ಕೂ ಹೆಚ್ಚು ಸಿಬ್ಭಂದಿ ದಾಳಿ ಮಾಡಿದ್ದಾರೆ.

ಭಾನುವಾರದ ರಜೆಯ ಮಜಾ ಮಾಡಿ ಮಲಗಿದ್ದವರು ಬೆಳಿಗ್ಗೆ ದಿಢೀರ್ ಎಂಟ್ರೀ ಕೊಟ್ಟ ಲೋಕಾಯುಕ್ತ ಪೊಲೀಸರನ್ನು ಕಂಡು ಅಧಿಕಾರಿ ಮನೆಯವರು ದಂಗಾಗಿದ್ದಾರೆ. ಮನೆಯಲ್ಲಿದ್ದ ನಗದು, ವಿವಿದೆಡೆ ಅಕ್ರಮವಾಗಿ ಸಂಪಾದಿಸಿದ ಆಸ್ತಿ ಪತ್ತೆ ಮಾಡಲಾಗಿದೆ.

ಬೀದರ್ : ಬೀದರ ವಲಯ ಅರಣ್ಯಾಧಿಕಾರಿ ಬಸವರಾಜ್ ಮತ್ತು ದೇವದುರ್ಗದ ಕೃಷ್ಣ ಜಲಾನಯನ ಇಲಾಖೆಯ ಕಾರ್ಯಪಾಲಕ ಅಭಿಯಂತರ ತಿಪ್ಪಣ್ಣ ಅನ್ನದಾನಿ ಮನೆಗಳ ಮೇಲೆ ಲೋಕಾಯುಕ್ತ ಎಸ್ಪಿ ಎಸ್.ಎಸ್.ಕರ್ನೂಲ್ ನೇತೃತ್ವದಲ್ಲಿ ದಾಳಿ ಮಾಡಿದ್ದು ಹಲವು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಕಲಬುರಗಿ ಪಾಲಿಕೆಯ ಟೌನ್ ಪ್ಲ್ಯಾನರ್ ಅಧಿಕಾರಿ ಅಪ್ಪಾಸಾಹೇಬ್ ಕಾಂಬಳೆ ಅವರ ರಾಮತೀರ್ಥ ನಗರದ ನಿವಾಸ, ಆಟೋ ನಗರದಲ್ಲಿ ಹೊಂದಿರುವ ಕಾರ್ಖಾನೆ ಮೇಲೆ ದಾಳಿ ಮಾಡಿರುವ ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರು : ಬೆಂಗಳೂರಿನ ಪಾಲಿಕೆ ಅಧಿಕಾರಿ ವಲಯಕ್ಕೂ ಲೋಕಾಯುಕ್ತ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಹೆಗ್ಗನಹಳ್ಳಿ ವಾರ್ಡ್ ಎಆರ್‍ಓ ಚಂದ್ರಪ್ಪ ಬಿರಜ್ಜನವರ್ ಅವರ ಮನೆ, ಕಚೇರಿ ಸೇರಿ ಮೂರು ಕಡೆ ದಾಳಿ ನಡೆಸಲಾಗಿದೆ. ಈ ಹಿಂದೆ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದ ಎಆರ್ ಓ ಚಂದ್ರಪ್ಪ ಲೋಕಾಯುಕ್ತ ಟ್ರ್ಯಾಪ್ ಗೆ ಒಳಗಾಗಿದ್ದರು. ಅದರ ಮುಂದುವರಿದ ಭಾಗವಾಗಿ ದಾಳಿ ಮುಂದುವರಿಸಿರೋ ಲೋಕಾಯುಕ್ತ ಪೊಲೀಸರು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ : ದಾವಣಗೆರೆಯಲ್ಲಿ ಕೈಗಾರಿಕೆ ಮತ್ತು ಸುರಕ್ಷತಾ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ಮನೆ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಬೆಂಗಳೂರು ಹಾಗೂ ಅವರ ಸ್ವಂತ ಊರಾದ ಕೊಳ್ಳೆಗಾಲ ಸೇರಿದಂತೆ ಒಟ್ಟು ಮೂರು ಕಡೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು. ಬೆಂಗಳೂರಿನ ಉಪಕಾರ್ ಲೇಔಟ್, ಆಂಧ್ರಹಳ್ಳಿ , ಕೊಳ್ಳೆಗಾಲ ಮನೆಯಲ್ಲಿ ಶೋಧ ನಡೆಸಲಾಗಿದೆ.

ಸಿಸೋಡಿಯಾ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಬ್ಯಾಡರಹಳ್ಳಿ ತಂದೆಯ ಮನೆ, ಬಿಇಎಲ್, ವಿನಾಯಕ ನಗರ ಸೇರಿದಂತೆ ವಿವಿದೆಢೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಮನೆಯಲ್ಲಿ 8 ಲಕ್ಷ ನಗದು ಹಣ, ಹತ್ತು ದುಬಾರಿ ಬೆಲೆಯ ವಾಚ್‍ಗಳು, ಎಂಟು ಕೂಲಿಂಗ್ ಸನ್ ಗ್ಲಾಸ್ ಗಳು, ಚಿನ್ನ ಬೆಳ್ಳಿ ವಸ್ತುಗಳು, ಎರಡು ಕಾರು, ಆಸ್ತಿ ಪತ್ರಗಳು ಪತ್ತೆಯಾಗಿದೆ.

ಬೆಳಗಾವಿ : ಬೆಳಗಾವಿಯ ಪಂಚಾಯತ್ ರಾಜ್ ಇಲಾಖೆ ಎಇಇ ಎಂ.ಎಸ್.ಬಿರಾದಾರ ಮನೆ ಮೇಲೆ ಲೋಕಾಯುಕ್ತ ಎಸ್ಪಿ ಹನುಮಂತರಾಯ್ ನೇತೃತ್ವದಲ್ಲಿ ಡಿಎಸ್ಪಿ ಜೆ.ರಘು ತಂಡದಿಂದ ದಾಳಿ ನಡೆಸಿದ್ದಾರೆ.
ವಿಶ್ವೇಶ್ವರಯ್ಯ ನಗರದ ಶ್ರದ್ಧಾ ಅಪಾರ್ಟ್‍ಮೆಂಟ್‍ನಲ್ಲಿರುವ ಅವರ ನಿವಾಸ, ಬೆಳಗಾವಿ ನಿವಾಸ, ಕಿತ್ತೂರು, ಖಾನಾಪುರದಲ್ಲಿ ಇರೋ ನಿವಾಸದ ಮೇಲೂ ಏಕಕಾಲಕ್ಕೆ ದಾಳಿ ನಡೆಸಿರುವ ಪೊಲೀಸರು ಅಕ್ರಮ ಸಂಪತ್ತು ಬಯಲಿಗೆಳೆದಿದ್ದಾರೆ.

ತುಮಕೂರು: ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನೀಯರ್ ನಾಗೇಂದ್ರಪ್ಪ ಅವರ ಮನೆ, ಕಚೇರಿ ಸೇರಿ ವಿವಿದೆಡೆ ಲೋಕಾಯುಕ್ತ ಡಿಎಸ್ಪಿ ಮಂಜುನಾಥ್. ಡಿಎಸ್ಪಿ.ಹರೀಶ್. ನೇತೃತ್ವದಲ್ಲಿ ದಾಳಿ ನಡೆದಿದೆ.

ಇನ್ಪೆಕ್ಟರ್ ಶಿವರುದ್ರಪ್ಪ ಮೇಟಿ,ಸತ್ಯನಾರಾಯಣ, ಸಲೀಂ ನೇತೃತ್ವದ ತಂಡ ತುಮಕೂರು ನಗರದ ಬಟವಾಡಿಯಲ್ಲಿರುವ ಮನೆ ಹಾಗೂ ಶಿರಾ ತಾಲ್ಲೂಕಿನ ಮದ್ದೇರಹಳ್ಳಿ, ರಾಗಲಹಳ್ಳಿಯಲ್ಲಿರುವ ನಿವಾಸ , ಫಾರಂ ಹೌಸ್ ಮೇಲೂ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ಮುಂದುವರೆದಿದೆ.

RELATED ARTICLES

Latest News