Wednesday, April 17, 2024
Homeರಾಜ್ಯಸಹಿ ಹಾಕಲು 3 ಲಕ್ಷ ಲಂಚ ಕೇಳಿದ್ದ ಮುಖ್ಯ ಶಿಕ್ಷಕ ಲೋಕಾಯುಕ್ತ ಬಲೆ

ಸಹಿ ಹಾಕಲು 3 ಲಕ್ಷ ಲಂಚ ಕೇಳಿದ್ದ ಮುಖ್ಯ ಶಿಕ್ಷಕ ಲೋಕಾಯುಕ್ತ ಬಲೆ

ಬೀದರ್,ಫೆ.15-ನಿವೃತ್ತರಾದ ಶಿಕ್ಷಕಿಗೆ ನಿವೃತ್ತಿ ಸೌಲಭ್ಯ ಪಡೆಯುವ ಕಡತಕ್ಕೆ ಸಹಿ ಹಾಕಲು 3 ಲಕ್ಷ ಲಂಚ ಕೇಳಿದ್ದ ಇಲ್ಲಿನ ಶ್ರೀ ವಿವೇಕಾನಂದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಿಜ್ಞಾನ ವಿಷಯದ ಸಹಾಯಕ ಶಕ್ಷಕಿಯಾಗಿದ್ದ ಶಶಿಕಲಾ ಅವರು ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ್ದರು.ಈ ಸಂಬಂಧ ನಿವೃತ್ತಿ ಸೌಲಭ್ಯ ಪಡೆಯುವ ಕಡತಕ್ಕೆ ಸಹಿ ಹಾಕಲು ಶಲೆಯ ಮುಖ್ಯ ಶಿಕ್ಷಕ ತುಕಾರಾಂ ಕಾಂಬ್ಳೆ (58) 3 ಲಕ್ಷ ಲಂಚ ಬೇಡಿಕೆ ಇಟ್ಟು ಒತ್ತಾಯಿಸಿದ್ದರು.

ರಾಜ್ಯಸಭೆಗೆ ಜೆಡಿಎಸ್ ಅಭ್ಯರ್ಥಿ ಕಣಕ್ಕೆ : ಅಡ್ಡ ಮತದಾನ ಭೀತಿ

ಈ ಬಗ್ಗೆ ಶಶಿಕಲಾ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು ಅದರಂತೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಇನ್ಸ್‍ಪೆಕ್ಟರ್ ಬಾಬ ಸಾಹೇಬ್ ಪಾಟೀಲ್ ಮತ್ತವರ ತಂಡ ಮುಖ್ಯ ಶಿಕ್ಷಕ ತುಕಾರಾಂ ಕಾಂಬ್ಳೆ 50 ಸಾವಿರ ನಗದು ಹಣ,1 ಲಕ್ಷರೂನ ಚೆಕ್ ಪಡೆಯುವಾಗ ರೆಡ್‍ಹ್ಯಾಂಡ್‍ಆಗಿ ಸಿಕ್ಕಿಬಿದ್ದಿದ್ದಾರೆ. ಆರೋಪಿ ಶಿಕ್ಷಕನನ್ನು ಬಂ„ಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ

RELATED ARTICLES

Latest News