Friday, May 24, 2024
Homeರಾಜ್ಯನೇಹಾ ಕೊಲೆ ಹಿಂದೆ 'ಲವ್ ಜಿಹಾದ್' ಕೈವಾಡ : ಆರೋಪಿ ಎನ್‍ಕೌಂಟರ್‌ಗೆ ಆಗ್ರಹ

ನೇಹಾ ಕೊಲೆ ಹಿಂದೆ ‘ಲವ್ ಜಿಹಾದ್’ ಕೈವಾಡ : ಆರೋಪಿ ಎನ್‍ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿ, ಏ.19- ಹಿಂದೂ ಯುವತಿ ನೇಹಾ ಕೊಲೆ ಹಿಂದೆ ಲವ್ ಜಿಹಾದ್ ಕೈವಾಡವಿದ್ದು ಕೂಡಲೇ ಕೊಲೆಗಾರನನ್ನು ಎನ್ಕೌಂಟರ್ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಇಲ್ಲಿನ ಕಿಮ್ಸ್ ಶವಾಗಾರಕ್ಕೆ ಕೇಂದ್ರಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನೇಹಾ ಹಿರೇಮಠ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಾಡಹಗಲೇ ಹತ್ಯೆ ಆಗಿರೋದು ನೋಡಿದ್ರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ.

ಮೊನ್ನೆ ತಾನೇ ಐದು ಜನ ಯುವಕರು ಬೈಕ್ ಮೇಲೆ ಹೊಗೋವಾಗ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡೋ ಹೇಯ ಕೃತ್ಯ ನಡೆದಿತ್ತು. ಸಮಾಜಘಾತಕರಿಗೆ ಭಯ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಸರ್ಕಾರ ಈಗಲಾದರೂ ಗಂಭೀರವಾಗಿ ಪರಿಗಣಿಸಲಿ. ಆರೋಪ ಪರ ಯಾರು ವಕಾಲತ್ತು ವಹಿಸಬಾರದು ಎಂದು ಆಗ್ರಹಿಸಿದರು. ಅಮಾಯಕ ಹೆಣ್ಣು ಮಗಳ ಕೊಲೆಯಾಗಿದೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ ಅವರು ಏನು ಉತ್ತರ ಕೊಡ್ತಾರೆ? ಎಂದು ಪ್ರಶ್ನಿಸಿದರು.

ಸರ್ಕಾರ ಮೂಕ ಪ್ರೇಕ್ಷಕನಂತಿದೆ: ಸಿ.ಟಿ.ರವಿ ಕಿಡಿ
ಅವರು ಅವಳ ಕುತ್ತಿಗೆಗೆ ಚಾಕು ಹಾಕಿ ಸಾಯಿಸುತ್ತಾರೆ. ಸರ್ಕಾರ ಮೂಕಪ್ರೇಕ್ಷಕನಂತಿರುತ್ತದೆ ಎಂದು ಹುಬ್ಬಳ್ಳಿಯಲ್ಲಿ ಯುವತಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೊಸ್ಟ್ ಮಾಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ಸಿನ ತುಘಲಕ್ ದರ್ಬಾರ್ನಲ್ಲಿ ನಮ್ಮ ದುರ್ದೈವ. ಹನುಮಾನ್ ಚಾಲೀಸಾ ಕೇಳುತ್ತೀರಾ? ಅವರು ನಿಮ್ಮ ಮೇಲೆ ಹಲ್ಲೆ ಮಾಡುತ್ತಾರೆ ಮತ್ತು ಕಾಂಗ್ರೆಸ್ ಸರ್ಕಾರ ನಿಮ್ಮ ಮೇಲೆಯೇ ಕೇಸ್ ಹಾಕುತ್ತಾರೆ.

ರಾಮಮಂದಿರ ಉದ್ಘಾಟನೆ ವಿಜೃಂಭಣೆಯಿಂದ ಮಾಡ್ತೀರಾ? ಅವರು ರಾಮೇಶ್ವರಂ ಕೆಫೆಗೆ ಬಾಂಬ್ ಇಡುತ್ತಾರೆ ಮತ್ತು ಕಾಂಗ್ರೆಸ್ ಸರ್ಕಾರ ಅದನ್ನು ಲೋ ಇಂಟೆನ್ಸಿಟಿ ಬಾಂಬ್ ಎಂದು ಮೂಲೆಗುಂಪು ಮಾಡುತ್ತದೆ.

ರಾಮನವಮಿ ದಿನ ಜೈ ಶ್ರೀರಾಮ್ ಅನ್ನುತ್ತೀರಾ? ಅವರು ಅಲ್ಲಾ ಅಕ್ಬರ್ ಘೋಷಣೆ ಕೂಗಿ ಎಂದು ಹಲ್ಲೆ ಮಾಡುತ್ತಾರೆ ಮತ್ತು ಸರ್ಕಾರ ಮಗುಮ್ಮಾಗಿ ಕುಳಿತುಕೊಳ್ಳುತ್ತದೆ. ಬಿಜೆಪಿ ಪರ ಚುನಾವಣಾ ಪ್ರಚಾರ ಕೈಗೊಳ್ಳುತ್ತೀರಾ? ಅವರು ನಿಮ್ಮ ಮೇಲೆ ಕಾರು ಹರಿಸಿ ಸಾಯಿಸುತ್ತಾರೆ ಮತ್ತು ಎಲ್ಲರೂ ಮೌನವಾಗಿರುತ್ತಾರೆ.

ನನಗಲ್ಲ ಎನ್ನುವ ಕಾಲ ಇದಲ್ಲ. ಪ್ರತಿಯೊಂದು ಬೆಳವಣಿಗೆಗೂ ನಮ್ಮ ಮೌನವು ಒಂದು ಕಾರಣ. ಇನ್ನಾದರೂ ಎದ್ದು ನಿಲ್ಲು ಹಿಂದೂ, ಸುಮ್ಮನಿದ್ದರೆ ದೇಶವೂ ಇರದು, ಜಾತಿಯು ಇರದು, ನಾನು ಇರೆನು, ನೀನು ಇರಲಾರೆ ಎಂದು ಸಿ.ಟಿ.ರವಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

Latest News