Thursday, September 19, 2024
Homeರಾಷ್ಟ್ರೀಯ | Nationalಮದುವೆಗೆ ಒಲ್ಲೆ ಎಂದ ಪ್ರಿಯಕರನ ಮರ್ಮಾಂಗಕ್ಕೆ ಚಾಕು ಇರಿದ ಪ್ರಿಯತಮೆ

ಮದುವೆಗೆ ಒಲ್ಲೆ ಎಂದ ಪ್ರಿಯಕರನ ಮರ್ಮಾಂಗಕ್ಕೆ ಚಾಕು ಇರಿದ ಪ್ರಿಯತಮೆ

Maharashtra Woman Attacks Boyfriend's Private Parts As He Refuses To Marry Her

ಮುಂಬೈ,ಆ.21- ಮದುವೆಗೆ ಒಪ್ಪದಿದ್ದ ಪ್ರಿಯಕರನ ಮರ್ಮಾಂಗಕ್ಕೆ ಯುವತಿಯೊಬ್ಬಳು ಚಾಕುವಿನಿಂದ ಇರಿದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಪದಾ ನಗರ ಪ್ರದೇಶದ ತನ್ನ ಮನೆಯಲ್ಲಿ ಮಹಿಳೆ ತನ್ನ 31 ವರ್ಷದ ಗೆಳೆಯನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ. ತನ್ನನ್ನು ಮದುವೆಯಾಗಲು ನಿರಾಕರಿಸಿದ ನಂತರ ಆಕೆ ವ್ಯಕ್ತಿಯ ಖಾಸಗಿ ಅಂಗಗಳಿಗೆ ಇರಿದು ಗಾಯಗೊಳಿಸಿದ್ದಾಳೆ ಎಂದು ಭೀವಂಡಿ ಪೊಲೀಸರು ತಿಳಿಸಿದ್ದಾರೆ.

ಪ್ರೇಯಸಿ ಅಟ್ಯಾಕ್ನಿಂದ ಕಂಗಲಾದ ಪ್ರೀಯಕರ ಮನೆಯಿಂದ ಓಡಿ ಹೋಗಿ ಆಸ್ಪತ್ರೆಗೆ ದಾಖಲಾದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಂತರ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 118 (1) (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು ಅಥವಾ ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಗಂಭೀರವಾದ ಗಾಯವನ್ನು ಉಂಟುಮಾಡುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿತ್ತು. ಇಲ್ಲಿ ಮಹಿಳೆಯೊಬ್ಬರು ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಪತಿಯ ಖಾಸಗಿ ಅಂಗಗಳನ್ನು ಬ್ಲೇಡ್ ನಿಂದ ಕತ್ತರಿಸಿದ್ದರು. ವಾಸ್ತವವಾಗಿ, ಪತಿ ಯಾವಾಗಲೂ ತನ್ನ ಹೆಂಡತಿ ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸುತ್ತಿದ್ದರು ಎನ್ನಲಾಗಿದೆ.

RELATED ARTICLES

Latest News