Thursday, December 12, 2024
Homeರಾಷ್ಟ್ರೀಯ | Nationalನ.26ಕ್ಕೆ ಮಹಾಯುತಿ ಸರ್ಕಾರ ರಚನೆ, ನಾಳೆ ನೂತನ ಶಾಸಕರ ಸಭೆ

ನ.26ಕ್ಕೆ ಮಹಾಯುತಿ ಸರ್ಕಾರ ರಚನೆ, ನಾಳೆ ನೂತನ ಶಾಸಕರ ಸಭೆ

Maharashtra's new chief minister to take oath on Nov 26th

ಮುಂಬೈ, ನ.23- ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಅಧಿಕಾರದತ್ತ ದಾಪುಗಾಲು ಇಡುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತು.

ಭಾರೀ ಬಹುಮತದತ್ತ ಮಹಾಯುತಿ ಮೈತ್ರಿ ಪಡೆ ಮುನ್ನುಗ್ಗುತ್ತಿದ್ದಂತೆ ಬಿಜೆಪಿ ಕಚೇರಿ ಏಕನಾಥ್ ಸಿಂಧೆ ಕಚೇರಿ ಬಳಿ ಜಮಾ ಯಿಸಿದ ಅಭಿಮಾನಿಗಳು ವಿಜಯದ ಘೋಷಣೆ ಮೊಳಗಿಸಿದರು.

ನಾಳೆಯೇ ನೂತನ ಶಾಸಕರ ಸಭೆ ಕರೆಯಲಿದ್ದು, ನಂ. 26ಕ್ಕೆ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. ಸಂಜೆ ವೇಳೆಗೆ ಖಚಿತ ಫಲಿತಾಂಶ ಹೊರಬೀಳಲಿದ್ದು, ಎಲ್ಲಾ ಶಾಸಕರ ಸಭೆ ಇಂದು ಅಥವಾ ನಾಳೆ ನಡೆಯಲಿದ್ದು, ನಂ. 26ರಂದು ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಯಾಗಲಿದ್ದು, ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುವುದು ಕುತೂಹಲ ಕೆರಳಿಸಿದೆ.

RELATED ARTICLES

Latest News