Sunday, May 5, 2024
Homeಕ್ರೀಡಾ ಸುದ್ದಿದ್ವಿಶತಕ ಸಿಡಿಸಿದ ಜೈಸ್ವಾಲ್, ಇಂಗ್ಲೆಂಡ್‌ಗೆ 556 ಗುರಿ

ದ್ವಿಶತಕ ಸಿಡಿಸಿದ ಜೈಸ್ವಾಲ್, ಇಂಗ್ಲೆಂಡ್‌ಗೆ 556 ಗುರಿ

ರಾಜ್ಕೋಟ್, ಫೆ.18- ಗಾಯದ ಸಮಸ್ಯೆಯಿಂದ ಮೂರನೇ ದಿನದಾಟದಲ್ಲಿ ನಿವೃತ್ತಿಗೊಂಡಿದ್ದ ಯಶಸ್ವಿ ಜೈಸ್ವಾಲ್ ಇಂದು ತಮ್ಮ ಸೋಟಕ ಆಟ ಪ್ರದರ್ಶಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ಸಿಡಿಸಿದ ಎರಡನೇ ದ್ವಿಶತಕ ನೆರವಿನಿಂದ ದ್ವಿತೀಯ ಇನಿಂಗ್ಸ್ ನಲ್ಲಿ ಟೀಮ್ ಇಂಡಿಯಾ 430/4 ಡಿಕ್ಲೇರ್ಡ್ ಘೋಷಿಸಿ ಇಂಗ್ಲೆಂಡ್ ಗೆಲುವಿಗೆ 556 ರನ್ಗಳ ಬೃಹತ್ ಗುರಿ ನೀಡಿದೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಚೊಚ್ಚಲ ದ್ವಿಶತಕ (209 ರನ್) ಸಂಭ್ರಮ ಕಂಡಿದ್ದ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್, ರಾಜ್ಕೋಟ್ನ ಪಂದ್ಯದಲ್ಲೂ ದ್ವಿಶತಕ ಸಿಡಿಸಿ ತಂಡಕ್ಕೆ ಬೃಹತ್ ಮುನ್ನಡೆ ತಂದುಕೊಡಲು ಪಣತೊಟ್ಟಿದ್ದಾರೆ.

ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದ್ದ ಟೀಂ ಇಂಡಿಯಾ ಪರ ಇಂದು ಜಾಣ್ಮೆಯ ಬ್ಯಾಟಿಂಗ್ ನಡೆಸಿದ ಶುಭಮನ್ ಗಿಲ್ (91 ರನ್) ಶತಕ ವಂಚಿತರಾದರು. ಆದರೆ 5ನೇ ವಿಕೆಟ್ಗೆ ಜೊತೆಗೂಡಿದ ಜೈಸ್ವಾಲ್ (213ರನ್) ಹಾಗೂ ಸರ್ಫಾರಾಝ್ ಖಾನ್ (51ರನ್) ತಂಡಕ್ಕೆ ಆಸರೆಯಾಗುವ ಮೂಲಕ ತಂಡದ ಮೊತ್ತ 430 ರನ್ಗಳ ಗಡಿಗೆ ತಲುಪಿಸಿ 556 ಬೃಹತ್ ಲೀಡಿಂಗ್ ಕೊಡಿಸಿದರು.

RELATED ARTICLES

Latest News