Saturday, July 27, 2024
Homeಅಂತಾರಾಷ್ಟ್ರೀಯಭಾರತದ ಮೇಜರ್‌ ರಾಧಿಕಾ ಸೇನ್‌ಗೆ ಪ್ರತಿಷ್ಠಿತ ವಿಶ್ವಸಂಸ್ಥೆ ಮಿಲಿಟರಿ ಅಡ್ವೊಕೇಟ್‌ ಆಫ್‌ ದಿ ಇಯರ್‌ ಪ್ರಶಸ್ತಿ

ಭಾರತದ ಮೇಜರ್‌ ರಾಧಿಕಾ ಸೇನ್‌ಗೆ ಪ್ರತಿಷ್ಠಿತ ವಿಶ್ವಸಂಸ್ಥೆ ಮಿಲಿಟರಿ ಅಡ್ವೊಕೇಟ್‌ ಆಫ್‌ ದಿ ಇಯರ್‌ ಪ್ರಶಸ್ತಿ

ವಿಶ್ವಸಂಸ್ಥೆ, ಮೇ 28– ಕಾಂಗೋದಲ್ಲಿ ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಸೇವೆ ಸಲ್ಲಿಸಿದ ಭಾರತೀಯ ಮಹಿಳಾ ಶಾಂತಿಪಾಲಕಿ ಮೇಜರ್‌ ರಾಧಿಕಾ ಸೇನ್‌ ಅವರಿಗೆ ಪ್ರತಿಷ್ಠಿತ ವರ್ಷದ ಮಿಲಿಟರಿ ಸಾಧಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಸೆಕ್ರೆಟರಿ ಜನರಲ್‌ ಆಂಟೋನಿಯೊ ಗುಟೆರೆಸ್‌‍ ಘೋಷಿಸಿದ್ದಾರೆ.

ಮೇ 30 ರಂದು ಯುಎನ್‌ ಶಾಂತಿಪಾಲಕರ ಅಂತರರಾಷ್ಟ್ರೀಯ ದಿನವನ್ನು ಗುರುತಿಸುತ್ತದೆ ಇದೇ ದಿನ ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೋದಲ್ಲಿ ಯುನೈಟೆಡ್‌ ನೇಷನ್‌್ಸಆರ್ಗನೈಸೇಶನ್‌ ಸ್ಟೆಬಿಲೈಸೇಶನ್‌ ಮಿಷನ್‌ನೊಂದಿಗೆ ಸೇವೆ ಸಲ್ಲಿಸಿದ ಮೇಜರ್‌ ರಾಧಿಕಾ ಸೇನ್‌ ಅವರಿಗೆ ಇಲ್ಲಿನ ವಿಶ್ವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಗುಟೆರೆಸ್‌‍ ಅವರು ಪ್ರತಿಷ್ಠಿತ 2023 ವಿಶ್ವಸಂಸ್ಥೆಯ ಮಿಲಿಟರಿ ಅಡ್ವೊಕೇಟ್‌ ಆಫ್‌ ದಿ ಇಯರ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ರಾಧಿಕಾ ಅವರು ಮಾರ್ಚ್‌ 2023 ರಿಂದ ಏಪ್ರಿಲ್‌ 2024 ರವರೆಗೆ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಪೂರ್ವದಲ್ಲಿ ವಿಶ್ವಸಂಸ್ಥೆ ಎಂಗೇಜ್‌ಮೆಂಟ್‌ ಪ್ಲಟೂನ್‌ನ ಕಮಾಂಡರ್‌ ಆಗಿ ಸೇವೆ ಸಲ್ಲಿಸಿದ್ದಾರೆ.

1993 ರಲ್ಲಿ ಹಿಮಾಚಲ ಪ್ರದೇಶದಲ್ಲಿ ಜನಿಸಿದ ಅವರು ಎಂಟು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿದ್ದರು. ಬಯೋಟೆಕ್‌ ಇಂಜಿನಿಯರ್‌ ಪದವೀಧರೆಯಾದ ಮತ್ತು ಐಐಟಿ ಬಾಂಬೆಯಿಂದ ಸ್ನಾತಕೋತ್ತರ ಪದವಿ ಪಡೆದು ಸಶಸ್ತ್ರ ಪಡೆಗಳಿಗೆ ಸೇರಲು ನಿರ್ಧರಿಸಿದರು.

ಅವರು ಮಾರ್ಚ್‌ 2023 ರಲ್ಲಿ ಭಾರತೀಯ ಕ್ಷಿಪ್ರ ನಿಯೋಜನೆ ಬೆಟಾಲಿಯನ್‌ನೊಂದಿಗೆ ಎಂಗೇಜ್‌ಮೆಂಟ್‌ ಪ್ಲಟೂನ್‌ ಕಮಾಂಡರ್‌ ಆಗಿ ನಿಯೋಜಿತರಾದರು ಮತ್ತು ಏಪ್ರಿಲ್‌ 2024 ರಲ್ಲಿ ಅವರ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದರು.

ದಕ್ಷಿಣ ಸುಡಾನ್‌ನಲ್ಲಿ ಓ ಮಿಷನ್‌ನಲ್ಲಿ ಸೇವೆ ಸಲ್ಲಿಸಿದ ಮತ್ತು 2019 ರ ವಿಶ್ವಸಂಸ್ಥೆಯ ಮಿಲಿಟರಿ ಅಡ್ವೊಕೇಟ್‌ ಆಫ್‌ ದಿ ಇಯರ್‌ ಪ್ರಶಸ್ತಿ ಪಡೆದ ಮೇಜರ್‌ ಸುಮನ್‌ ಗವಾನಿ ನಂತರ ಈ ಪ್ರತಿಷ್ಠಿತ ಪ್ರಶಸ್ತಿ ಗಳಿಸಿದ ಎರಡನೇ ಭಾರತೀಯ ಶಾಂತಿಪಾಲಕ ಮೇಜರ್‌ ಎನಿಸಿದ್ದಾರೆ.
ಮೇಜರ್‌ ಸೇನ್‌ ಅವರ ಸೇವೆಯನ್ನು ಅಭಿನಂದಿಸಿದ ಗುಟೆರೆಸ್‌‍ ಅವರು ನೈಜ ನಾಯಕಿ ಮತ್ತು ಎಲ್ಲರಿಗೂ ಮಾದರಿಯಾಗಿದ್ದಾರೆ. ಆಕೆಯ ಸೇವೆಯು ಒಟ್ಟಾರೆಯಾಗಿ ವಿಶ್ವಸಂಸ್ಥೆಗೆ ನಿಜವಾದ ಛಾಪುಮೂಡಿಸಿದೆ ಎಂದರು.

ಈ ಪ್ರಶಸ್ತಿಯು ನನಗೆ ವಿಶೇಷವಾಗಿದೆ. ಏಕೆಂದರೆ ಇದು ಡಿಆರ್‌ಸಿಯ ಸವಾಲಿನ ವಾತಾವರಣದಲ್ಲಿ ಕೆಲಸ ಮಾಡುವ ಎಲ್ಲಾ ಶಾಂತಿಪಾಲಕರ ಶ್ರಮಕ್ಕೆ ಮನ್ನಣೆ ನೀಡುತ್ತದೆ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಅತ್ಯುತ್ತಮ ಪ್ರಯತ್ನ ಮಾಡುತ್ತದೆ ಎಂದು ಸೇನ್‌ ಹೇಳಿದರು.

RELATED ARTICLES

Latest News