Saturday, July 27, 2024
Homeರಾಜ್ಯವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ವಿಚಾರದ ಕುರಿತು ಸಚಿವ ಬಿ.ನಾಗೇಂದ್ರ ಸ್ಪಷ್ಟನೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ವಿಚಾರದ ಕುರಿತು ಸಚಿವ ಬಿ.ನಾಗೇಂದ್ರ ಸ್ಪಷ್ಟನೆ

ಬೆಂಗಳೂರು, ಮೇ 28-ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆಯಲ್ಲಿ ತಮ್ಮ ಪಾತ್ರ ಇಲ್ಲ. ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ತನಿಖೆ ನಡೆಯುತ್ತಿದ್ದು, ಅವರ ವಿರುದ್ಧ ಶೀಘ್ರವೇ ಕ್ರಮ ಜರುಗಿಸಲಾಗುವುದು. ಹಣ ದುರುಪಯೋಗವಾಗಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸಚಿವ ಬಿ.ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದ ತುರ್ತು ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಾಲೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಣವಿತ್ತು. 87 ಕೋಟಿ ರೂ.ಗಳನ್ನು ಯೂನಿಯನ್‌ ಬ್ಯಾಂಕ್‌ನ ನಿಗಮದ ಖಾತೆಯಿಂದ ಅದೇ ಬ್ಯಾಂಕಿನ ಮತ್ತೊಂದು ಶಾಖೆಯ ನಕಲಿ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇದರ ಹಿಂದೆ ಬ್ಯಾಂಕ್‌ ಅಧಿಕಾರಿಗಳ ಪಾತ್ರ ಇರುವ ಶಂಕೆ ಇದೆ ಎಂದರು.

ವರ್ಗಾವಣೆಯಾಗಿದ್ದ ಹಣದ ಪೈಕಿ ನಿನ್ನೆಯವರೆಗೆ 28 ಕೋಟಿ ರೂ.ಗಳನ್ನು ಮರು ವಸೂಲಿ ಮಾಡಿ ನಿಗಮದ ಖಾತೆಯಲ್ಲಿಡಲಾಗಿದೆ. ಬಾಕಿ ಇರುವ ಸುಮಾರು 50 ಕೋಟಿ ರೂ.ಗಳನ್ನು ಇಂದು ಸಂಜೆಯೊಳಗಾಗಿ ಮರಳಿಸಬೇಕು, ಇಲ್ಲದೇ ಹೋದರೆ ಯೂನಿಯನ್‌ ಬ್ಯಾಂಕ್‌ನ ಅಧ್ಯಕ್ಷರು, ನಿರ್ದೇಶಕರು ಮತ್ತು ಸಿಬ್ಬಂದಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದನಾಭ್‌ ಅವರು ತಮ ಗಮನಕ್ಕೆ ಬರದೆ, ಸಹಿಯನ್ನು ನಕಲು ಮಾಡಿ ಹಣ ವರ್ಗಾವಣೆ ಮಾಡಲಾಗಿದೆ. ಸದರಿ ಹಣವನ್ನು ಸೋಮವಾರದೊಳಗೆ ವಸೂಲಿ ಮಾಡಿ ನಿಗಮದ ಬ್ಯಾಂಕ್‌ ಖಾತೆಗೆ ವಾಪಸ್‌‍ ತರಿಸಬೇಕು ಎಂದು ತಾವು ಸೂಚನೆ ನೀಡಿದ್ದು, ಅದರ ಬಳಿಕ ಭ್ರಷ್ಟಾಚಾರಿ ಚಂದ್ರಶೇಖರ್‌ ಆತಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ನಿಗಮದ ಹಣ ವರ್ಗಾವಣೆ ಆಗಿರುವ ಹಾಗೂ ಸಹಿಯನ್ನು ನಕಲು ಮಾಡಿರುವ ಬಗ್ಗೆ ದೂರು ನೀಡಲಾಗಿದ್ದು, ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಯುತ್ತಿದೆ.

ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ವರದಿಯ ಬಳಿಕ ಯಾರೇ ಆಗಿದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ವ್ಯವಸ್ಥಾಪಕ ನಿರ್ದೇಶಕರೂ ಸೇರಿದಂತೆ ಯಾರ ವಿರುದ್ಧವೂ ಮೃದು ಧೋರಣೆ ಅನುಸರಿಸುವುದಿಲ್ಲ ಎಂದು ತಿಳಿಸಿದರು.

ಇಷ್ಟು ಬೃಹತ್‌ ಮೊತ್ತದ ಹಣವನ್ನು ವರ್ಗಾವಣೆ ಮಾಡುವಾಗ ನನ್ನ ಗಮನಕ್ಕೆ ತರದೇ ಇರುವುದು ವ್ಯವಸ್ಥಾಪಕ ನಿರ್ದೇಶಕರ ಲೋಪವಾಗಿದೆ. ಈ ಕಾರಣಕ್ಕೆ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಪ್ರಕರಣದ ಬಗ್ಗೆ ನನಗೆ ಯಾವ ಮಾಹಿತಿಯೂ ಇರಲಿಲ್ಲ. ನಿಗಮ ಪ್ರತ್ಯೇಕವಾದ ಸಂಸ್ಥೆಯಾಗಿದೆ. ಹೀಗಾಗಿ ವಿರೋಧಪಕ್ಷಗಳು ಒತ್ತಾಯಿಸುವಂತೆ ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಲ್ಲದೆ, ಬಿಜೆಪಿಯ ಮಾಜಿ ಸಚಿವ ಕೆ.ಎಸ್‌‍.ಈಶ್ವರಪ್ಪ ಅವರ ಪ್ರಕರಣವೇ ಬೇರೆ, ನನ್ನ ಪ್ರಕರಣವೇ ಬೇರೆ ಎಂದು ಸಮರ್ಥಿಸಿಕೊಂಡರು.

ನಿಗಮದ ಉಳಿತಾಯ ಖಾತೆ ಲೆಕ್ಕಾಧಿಕಾರಿ ಚಂದ್ರಶೇಖರ್‌ ಅವರ ಹೆಸರಿನಲ್ಲಿರುತ್ತದೆ. ಅವರ ಮೇಲೆ ಯಾರು ಒತ್ತಡ ಹೇರಿ ಹಣ ವರ್ಗಾವಣೆ ಮಾಡಿಸಿದ್ದಾರೆ ಎಂದು ಗೊತ್ತಿಲ್ಲ.
ಸಿಐಡಿ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಲಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರ ಸಹಿಯ ಸಾಚಾತನದ ಬಗ್ಗೆ ಶೀಘ್ರವೇ ಎಫ್‌ಎಸ್‌‍ಎಲ್‌ ವರದಿ ಪಡೆಯಲಾಗುವುದು. ಆತಹತ್ಯೆ ಮಾಡಿಕೊಂಡ ಚಂದ್ರಶೇಖರ್‌, ನನ್ನ ಹೆಸರನ್ನು ಏಕೆ ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲ. ನಾನು ಯಾವುದೇ ಆದೇಶವನ್ನೂ ಮೌಖಿಕವಾಗಿ ನೀಡಿಲ್ಲ. ಎಲ್ಲವನ್ನೂ ಲಿಖಿತವಾಗಿಯೇ ಸೂಚನೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News