Sunday, October 13, 2024
Homeಮನರಂಜನೆಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತಹತ್ಯೆ

ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತಹತ್ಯೆ

Father of actor Malaika Arora dies by suicide in Mumbai

ಮುಂಬೈ,ಸೆ.11- ಬಾಲಿವುಡ್‌ ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್‌ ಅರೋರಾ ಅವರು ಇಂದು ಬೆಳಗ್ಗೆ ತಮ್ಮ ಮನೆಯ 7ನೇ ಮಹಡಿಯಿಂದ ಜಿಗಿದು ಆತಹತ್ಯೆ ಮಾಡಿಕೊಂಡಿದ್ದಾರೆ. ಅನಿಲ್‌ ಅರೋರಾ ಭಾರತದ ಮರ್ಚೆಂಟ್‌ ನೇವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು. ಮುಂಬೈನ ಬಾಂದ್ರಾದಲ್ಲಿ ವಾಸ ಇರುವ ತಮ ಮನೆಯ ತೆರೆಸಾನಿಂದ ಜಿಗಿದು ಆತಹತ್ಯೆ ಮಾಡಿಕೊಂಡಿದ್ದಾರೆ.

ಮಲೈಕಾ ಅರೋರಾ ಚಿತ್ರೀಕರಣಕ್ಕಾಗಿ ಪುನಾಕ್ಕೆ ತೆರಳಿದ್ದರು. ವಿಷಯ ತಿಳಿಯುತ್ತಿದ್ದಂತೆ ಮುಂಬೈಗೆ ರವಾನೆಯಾಗಿದ್ದಾರೆ. ಮಲೈಕಾ ಅರೋರಾರ ಸಹೋದರಿ ಅಮೃತ್‌ ಅರೋರಾ ಸಹ ತಂದೆಯ ಸಾವಿನ ವಿಷಯ ತಿಳಿದು ಮುಂಬೈಗೆ ವಾಪಸ್ಸಾಗಿದ್ದಾರೆ.

ಅನಿಲ್‌ ಅವರು ಆತಹತ್ಯೆ ಮಾಡಿಕೊಳ್ಳಲು ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅನಿಲ್‌ ಅರೋರಾ ಅವರ ಮಕ್ಕಳಾದ ಮಲೈಕಾ ಅರೋರಾ ಹಾಗೂ ಅಮೃತ್‌ ಅರೋರಾ ಇಬ್ಬರೂ ಸಹ ಮಾಡೆಲ್‌ಗಳಾಗಿ ಗುರುತಿಸಿಕೊಂಡವರು ಚಿತ್ರರಂಗಕ್ಕೂ ಪ್ರವೇಶ ಪಡೆದಿದ್ದಾರೆ.ಮಲೈಕಾ ಅರೋರಾ, ಸಲಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ ದಶಕಕ್ಕೂ ಹೆಚ್ಚು ಕಾಲ ದಾಂಪತ್ಯದಲ್ಲಿದ್ದರು.

ಅವರಿಗೆ ಒಬ್ಬ ಮಗನಿದ್ದಾನೆ. ಬಳಿಕ ಅರ್ಬಾಜ್‌ಗೆ ವಿಚ್ಛೇದನ ನೀಡಿ, ತನಗಿಂತಲೂ ಬಹಳ ಕಿರಿಯರಾದ ಅರ್ಜುನ್‌ ಕಪೂರ್‌ ಜೊತೆಗೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ತೊಡಗಿಕೊಂಡರು. ಇತ್ತೀಚೆಗೆ ಅರ್ಜುನ್‌ ಕಪೂರ್‌ ಜೊತೆಗೂ ಸಹ ಮಲೈಕಾ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.

RELATED ARTICLES

Latest News