Monday, October 14, 2024
Homeಬೆಂಗಳೂರುನಂದಿ ಬೆಟ್ಟದ ರೇಂಜ್‌ನಲ್ಲಿ ಹಾಟ್ ಸ್ಪಾಟ್ ಆಯ್ತು ಸುಮನಹಳ್ಳಿ ಫ್ಲೈಓವರ್, ಏಕೆ ಗೊತ್ತೇ..?

ನಂದಿ ಬೆಟ್ಟದ ರೇಂಜ್‌ನಲ್ಲಿ ಹಾಟ್ ಸ್ಪಾಟ್ ಆಯ್ತು ಸುಮನಹಳ್ಳಿ ಫ್ಲೈಓವರ್, ಏಕೆ ಗೊತ್ತೇ..?

Sumanahalli flyover has become a hot spot

ಬೆಂಗಳೂರು,ಸೆ.11- ನಂದಿಬೆಟ್ಟದ ತುತ್ತತುದಿಯ ಮೇಲೆ ನಿಂತು ಜನರು ಸೂರ್ಯೋದಯ ಹಾಗೂ ಸೂರ್ಯಾಸ್ತ ವಿಹಂಗಮ ದೃಶ್ಯ ನೋಡುವಂತೆ ಚಿತ್ರದುರ್ಗದ ರೇಣುಕಾಸ್ವಾಮಿ ಮೃತದೇಹ ಸಿಕ್ಕ ರಾಜುಕಾಲುವೆಯನ್ನು ಫ್ಲೈಓವರ್‌ ಮೇಲೆ ನಿಂತು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದು, ಹಾಟ್‌ಸ್ಪಾಟ್‌ ಆಗಿ ನಿರ್ಮಾಣವಾಗಿದೆ.

ಸುಮನಹಳ್ಳಿ ಮಾರ್ಗವಾಗಿ ಚಲಿಸುವ ದ್ವಿಚಕ್ರ ವಾಹನ ಸವಾರರು, ಕಾರು ಚಾಲಕರು ತಮ ವಾಹನವನ್ನು ರಸ್ತೆಬದಿ ನಿಲ್ಲಿಸಿ ಕುತೂಹಲದಿಂದ ಡಿ ಬಾಸ್‌‍ ಗ್ಯಾಂಗ್‌ ಸೃಷ್ಟಿಸಿ ಮಾಡಿದ ಹಾಟ್‌ಸ್ಪಾಟ್‌ ಜಾಗವನ್ನು ವೀಕ್ಷಿಸುತ್ತಿದ್ದಾರೆ.

ನಿತ್ಯ ನೂರಾರು ಜನ ಸುಮನಹಳ್ಳಿ ಫ್ಲೈಓವರ್‌ ಮೇಲೆ ವಾಹನ ನಿಲ್ಲಿಸಿ ಸ್ಥಳ ವೀಕ್ಷಣೆ ಮಾಡುತ್ತಿದ್ದಾರೆ. ಯಾರಾದರೊಬ್ಬರು ಗಾಡಿ ನಿಲ್ಲಿಸಿ ರಾಜಕಾಲುವೆ ವೀಕ್ಷಿಸುತ್ತಿದ್ದರೆ ಜನ ಮರಳೋ, ಜಾತ್ರೆ ಮರಳೋ ಎಂಬಂತೆ ಒಬ್ಬರ ಮೇಲೆ ಒಬ್ಬರು ಬಿದ್ದು ಸ್ಥಳ ವೀಕ್ಷಣೆ ಮಾಡುತ್ತಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ಸಂಚಾಟ ದಟ್ಟಣೆ ಹೆಚ್ಚಾಗಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

RELATED ARTICLES

Latest News