ನ್ಯೂಜೆರ್ಸಿ,ಮೇ.2- ಮಗ ದಪ್ಪಗಿದ್ದಾನೆ ಎಂಬ ಕಾರಣಕ್ಕೆ ಆತನ ದೈಹಿಕ ಕ್ಷಮತೆಯನ್ನು ಸದೃಢಗೊಳಿಸಲು ಥ್ರೆಡ್‍ಮಿಲ್ ಮೇಲೆ ಅತಿವೇಗವಾಗಿ ಓಡಿಸಿ ತಂದೆಯೇ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆಯ ವಿಡಿಯೋ ವೈರಲ್ ಆಗಿದೆ. ಆರು ವರ್ಷದ ಬಾಲಕ ಕೋರೆ ಮಿಕಿಲೋಲನನ್ನು ಆತನ ತಂದೆ ಕ್ಲಿಸ್ಟೋಫರ್ ಜಾರ್ಜ್(31) ಥ್ರೆಡ್‍ಮಿಲ್ ಮೇಲೆ ನಿಲ್ಲಿಸಿ ಓಡುವಂತೆ ಸೂಚಿಸಿದ್ದಾರೆ. ಬಾಲಕ ಓಡಲಾರಂಭಿಸುತ್ತಿದ್ದಂತೆ ಥ್ರೆಡ್‍ಮಿಲ್‍ನ ವೇಗವನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಗಿದೆ. ಅದರ ವೇಗವನ್ನು ಸರಿಗಟ್ಟಲಾಗದೆ ಬಾಲಕ ಜಾರಿ ಕೆಳಗೆ ಬಿದ್ದಿದ್ದಾನೆ.
ಆದರೆ ತಂದೆ ಪುತ್ರನನ್ನು ಎತ್ತಿ ಮತ್ತೆ ಥ್ರೆಡ್‍ಮಿಲ್ ಮೇಲೆ ನಿಲ್ಲಿಸಿ ಮತ್ತೆ ಓಡುವಂತೆ ಒತ್ತಾಯ ಮಾಡಿದ್ದಾರೆ. ಕೆಲವೇ ಸೆಕೆಂಡ್‍ಗಳಲ್ಲಿ ಬಾಲಕ ಮತ್ತೆ ಕೆಳಗೆ ಬಿದ್ದಿದ್ದಾನೆ. ಅನಂತರವೂ ಥ್ರೆಡ್‍ಮಿಲ್‍ನ ವೇಗವನ್ನು ಕಡಿಮೆ ಮಾಡಲಿಲ್ಲ. ಬಾಲಕ ಪದೇ ಪದೇ ಥ್ರೆಡ್‍ಮಿಲ್ ಮೇಲೆ ಹತ್ತಲು ಸಾಧ್ಯವಾಗದೇ ಜಾರಿ ಬಿದ್ದಿದ್ದಾನೆ.
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿಲ್ಲ: ನಾರಾಯಣ ಸ್ವಾಮಿ
ಈ ದೃಶ್ಯಾವಳಿಗಳು ಹೃದಯ ವಿದ್ರಾವಕವಾಗಿದೆ.2021 ರ ಮಾ.21 ರಂದು ಕ್ಲಿಸ್ಟೋಫರ್ ಜಾರ್ಜ್ ತನ್ನ ಪುತ್ರನನ್ನು ಅಮೆರಿಕದ ನ್ಯೂಜೆರ್ಸಿಯ ಅಟ್ಲಾಂಟಿಕ್ ಹೈಯೆಸ್ಟ್ ಕ್ಲಬ್ ಹೌಸ್ ಫಿಟ್‍ನೆಸ್ ಸೆಂಟರ್‍ಗೆ ಕರೆದುಕೊಂಡು ಹೋಗಿ ಆತನ ತಲೆ ಮೇಲೆ ಬಲವಾಗಿ ಹೊಡೆದು, ಥ್ರೆಡ್‍ಮಿಲ್ ಮೇಲೆ ಓಡುವಂತೆ ಒತ್ತಾಯ ಮಾಡಿದ್ದಾನೆ. ಈ ಘಟನೆಯಿಂದ ಘಾಸಿಗೊಂಡ ಬಾಲಕ ಮಾರನೆಯ ದಿನ ಹಾಸಿಗೆಯಿಂದ ಏಳುವಾಗ ಮುಗ್ಗರಿಸಿದ್ದಾನೆ.
ಮಾತಿನಲ್ಲಿ ತೊದಲು ಕಂಡಿದೆ. ಆತನ ಉಸಿರಾಟದಲ್ಲಿ ಏರಿಳಿತವಾಗಿದ್ದು, ವಾಕರಿಕೆ ಹೆಚ್ಚಾಗಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯರು ಬಾಲಕ ಕೋರೆ ಮಿಕಿಲೋಲನನಿಗೆ ಹೃದಯ ಮತ್ತು ಯಕೃತ್‍ಗೆ ತೀವ್ರ ಪ್ರಮಾಣದ ಹಾನಿಯಾಗಿರುವುದನ್ನು ಗುರುತಿಸಿದ್ದಾರೆ. ಜೀವರಕ್ಷಕ ಸಾಧನಗಳ ಮೂಲಕ ಚಿಕಿತ್ಸೆ ಕೊಟ್ಟಿದ್ದಾರೆ. ಆದರೆ ಸತತ ಪ್ರಯತ್ನದ ಬಳಿಕ ಬಾಲಕ ಏ.2 ರಂದು ಮೃತಪಟ್ಟಿದ್ದಾನೆ.
ಮರಣೋತ್ತರ ಪರೀಕ್ಷೆಯಲ್ಲಿ ಬಲ ಪ್ರಯೋಗದಿಂದಾಗಿ ಹೃದಯ ಮತ್ತು ಯಕೃತ್‍ಗೆ ಹಾನಿಯಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಬಾಲಕ ಸಾಯುವ ಮುನ್ನ ನೀಡಿದ್ದ ಹೇಳಿಕೆ ಆಧರಿಸಿ ವ್ಯಾಯಾಮ ಶಾಲೆಯ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಖುದ್ದು ತಂದೆಯೇ ಬಾಲಕನ ಮೇಲೆ ವಿಕೃತ ಬಲಪ್ರಯೋಗ ಮಾಡಿರುವುದು ಕಂಡುಬಂದಿದೆ. 2021 ರ ಜುಲೈನಲ್ಲಿ ಕ್ಲಿಸ್ಟೋಫರ್‍ನನ್ನು ಬಂಧಿಸಲಾಗಿತ್ತು. ವಿಚಾರಣೆ ನಡೆಸಿದ ಓಶಿಯನ್ ಸಿಟಿಯ ನ್ಯಾಯಾಲಯ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದೆ.
ಕಾಂಗ್ರೆಸ್ ಪಾಕಿಸ್ತಾನದ ಶಿಷ್ಯ: ಮೋದಿ ವ್ಯಂಗ್ಯ
ವ್ಯಾಯಾಮ ಶಾಲೆಯಲ್ಲಿನ ದೃಶ್ಯಾವಳಿಗಳನ್ನು ನ್ಯಾಯಾಲಯ ನಿನ್ನೆ ಪ್ರದರ್ಶನ ಮಾಡಿದ್ದು, ಅದನ್ನು ನೋಡುತ್ತಿದ್ದಂತೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿ ಆಕೆ ಕುಸಿದುಬಿದ್ದಿದ್ದಾರೆ. ಮುದ್ದಾದ ಕೋರೆ ಮಿಕಿಲೋಲನನ್ನು ಸಣ್ಣ ಮಾಡುವ ಸಲುವಾಗಿ ಅತಿಯಾದ ಬಲಪ್ರಯೋಗ ಮಾಡಿ ತಂದೆಯೇ ಮಗನನ್ನು ಕೊಂದಿದ್ದಾನೆ ಎಂಬ ಆರೋಪ ಸಾಬೀತಾಗಿದೆ.