Thursday, April 3, 2025
Homeರಾಷ್ಟ್ರೀಯ | Nationalಆಸ್ತಿಗಾಗಿ ಹೆತ್ತವರನ್ನೇ ಇರಿದು ಕೊಂದ ಪಾಪಿ ಪುತ್ರ

ಆಸ್ತಿಗಾಗಿ ಹೆತ್ತವರನ್ನೇ ಇರಿದು ಕೊಂದ ಪಾಪಿ ಪುತ್ರ

ಕೋಟಾ (ರಾಜಸ್ಥಾನ) ಮೇ 8- ಕೋಟಾ ಜಿಲ್ಲೆಯ ಬರಾನ್‌ ನಗರದಲ್ಲಿ ಪಿಂಚಣಿ ಮತ್ತು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಗನೇ ತನ್ನ ಹೆತ್ತವರ ಮೇಲೆ ಹಲ್ಲೆ ನಡೆಸಿ ಚೂಪಾದ ಆಯುಧದಿಂದ ಇರಿದು ಕೊಂದಿದ್ದಾನೆ.

ಪಾಪಿ ಮಗನನ್ನು ಗಗೇಂದ್ರ ಗೌತಮ್‌ (50) ಎಂದು ಪೊಲೀಸರು ತಿಳಿಸಿದ್ದು ಆತ ತನ್ನತಂದೆ ಪ್ರೇಂಬಿಹಾರಿ ಗೌತಮ್‌ (75)ಮತ್ತು ತಾಯಿ ದೇವಕಿ ಬಾಯಿ (72)ಅವರನ್ನು ಹತ್ಯೆ ಮಾಡಿದ್ದಾನೆ.

ಕಳೆದ ರಾತ್ರಿ ನಕೋಡ ಕಾಲೋನಿಯಲ್ಲಿರುವ ಮನೆಯಲ್ಲಿ ಜಗಳ ನಡೆದಿದೆ ಇದು ವಿಕೋಪಕ್ಕೆ ತಿರುಗಿ ತಂದೆ -ತಾಯಿಯನ್ನು ಗೋಡೆಗೆ ತಲಲ್ಳಿ ಚಾಕುವಿನಿಂದ ಇರಿದು ಕೊಂದು ನಂತರ ಬೆಳಿಗೆ ಆರೋಪಿ ಮಗ ಗಗೇಂದ್ರ ಪೊಲೀಸ್‌‍ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಸರ್ಕಲ್‌ ಇನ್ಸ್ ಪೆಕ್ಟರ್‌ ರಾಮ್‌ವಿಲಾಸ್‌‍ ಮೀನಾ ತಿಳಿಸಿದ್ದಾರೆ.

ಮೃತ ಪ್ರೇಂಬಿಹಾರಿ ಗೌತಮ್‌ (75) ಗ್ರಾಮ ಪಂಚಾಯಿತಿ ನಿವೃತ್ತ ಕಾರ್ಯದರ್ಶಿಯಾಗಿದ್ದಾರೆ.ಘಟನೆ ನಡೆದಾಗ ಗಗೇಂದ್ರ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ..

ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಗಗೇಂದ್ರ ಅವರ ಪತ್ನಿ ಮತ್ತು ಮಕ್ಕಳು ಈಗಾಗಲೇ ಮನೆಯಿಂದ ಪರಾರಿಯಾಗಿದಾರೆ.

RELATED ARTICLES

Latest News