Thursday, December 7, 2023
Homeರಾಷ್ಟ್ರೀಯಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ತಂದೆಯಿಂದಲೇ ಅತ್ಯಾಚಾರ

ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ತಂದೆಯಿಂದಲೇ ಅತ್ಯಾಚಾರ

ಗಾಜಿಯಾಬಾದ್,ಅ.3- ಜನ್ಮ ನೀಡಿದಾತನೆ ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಗಾಜಿಯಾಬಾದ್‍ನಲ್ಲಿ ನಡೆದಿದೆ. 40 ವರ್ಷದ ತಂದೆ ಕಳೆದ ನಾಲ್ಕು ವರ್ಷಗಳಿಂದ ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದು, ಕಾಮುಕ ತಂದೆಯನ್ನು ಬಂಧಿಸಿದ್ದಾರೆ.

ತನ್ನ 17 ಮತ್ತು 15 ವರ್ಷದ ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿಕೊಂಡು ಬಂದಿದ್ದ ಪಾಪಿ ತಂದೆ ವಿಷಯ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

BIG NEWS : ಹಳಿ ತಪ್ಪಿದ ರೀರೈಲ್, ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ತಂದೆಯ ಕಾಮುಕತನದಿಂದ ಘಾಸಿಗೊಳಗಾಗಿದ್ದ ಬಾಲಕಿಯರು ಅರೆ ಮನಸ್ಸಿನಿಂದ ಶಾಲೆಗೆ ಬರುವುದನ್ನು ಗಮನಸಿದ ಶಿಕ್ಷಕರೊಬ್ಬರು ವಿಚಾರಿಸಿದಾಗ ಆಕೆ ಸತ್ಯಾಂಶ ಬಯಲು ಮಾಡಿದ್ದಾಳೆ. ಶಾಲೆಯಿಂದ ಹೊರಬಂದ ನಂತರ, ತಾಯಿ ಕೆಲಸದಿಂದ ಹಿಂತಿರುಗುವವರೆಗೆ ಉದ್ಯಾನವನದಲ್ಲಿ ಕುಳಿತುಕೊಳ್ಳುತ್ತಿದ್ದರು ಎಂದು ಸಹೋದರಿಯರು ಶಿಕ್ಷಕರಿಗೆ ತಿಳಿಸಿದರು. ತಮ್ಮ ತಂದೆ ಹಲವು ದಿನಗಳಿಂದ ಕೆಲಸವಿಲ್ಲದೇ ಇದ್ದು, ತಾಯಿ ಮಾತ್ರ ಅನ್ನದಾತರಾಗಿದ್ದರು ಎಂದು ತಿಳಿಸಿದ್ದಾರೆ. ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಮಸೂರಿ ಎಸಿಪಿ ನರೇಶ್ ಕುಮಾರ್ ತಿಳಿಸಿದ್ದಾರೆ.

RELATED ARTICLES

Latest News