Thursday, June 20, 2024
Homeಜಿಲ್ಲಾ ಸುದ್ದಿಗಳುಮಂಗಳೂರು : ಮೋದಿ ಪ್ರಮಾಣವಚನ ವಿಜಯೋತ್ಸವ ವೇಳೆ ಇಬ್ಬರಿಗೆ ಚೂರಿ ಇರಿತ

ಮಂಗಳೂರು : ಮೋದಿ ಪ್ರಮಾಣವಚನ ವಿಜಯೋತ್ಸವ ವೇಳೆ ಇಬ್ಬರಿಗೆ ಚೂರಿ ಇರಿತ

ಮಂಗಳೂರು, ಜೂ.10- ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಜಯೋತ್ಸವ ಆಚರಿಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಸುಮಾರು 20 ರಿಂದ 25 ಮಂದಿಯ ಗುಂಪೊಂದು ಹಲ್ಲೆ ನಡೆಸಿ ಇಬ್ಬರಿಗೆ ಚೂರಿಯಿಂದ ಇರಿದಿರುವ ಘಟನೆ ಕಳೆದ ರಾತ್ರಿ ನಗರದ ಮುಡಿಪು ಸಮೀಪದ ಬೋಳಿಯಾರ್‌ನಲ್ಲಿ ನಡೆದಿದೆ.

ಘಟನೆಯಲ್ಲಿ ಹರೀಶ್‌ (40) ಹಾಗೂ ನಂದಕುಮಾರ್‌ ಎಂಬುವವರು ಚೂರಿ ಇರಿತದಿಂದ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಕೃಷ್ಣಕುಮಾರ್‌ ಎಂಬುವವರಿಗೆ ಹಲ್ಲೆಯಿಂದ ಗಾಯಗಳಾಗಿದ್ದು, ಅವರಿಗೆ ಇಲ್ಲಿನ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ಸುಮಾರು ನಾಲ್ಕೈದು ಮಂದಿ ಬಿಜೆಪಿಗೆ ಜೈಕಾರ ಕೂಗಿ ವಿಜಯೋತ್ಸವ ಆಚರಿಸುತ್ತಿದ್ದರು. ಈ ವೇಳೆ ಕೆಲವರು ಅವರ ಬಳಿ ಬಂದು ಜಗಳ ತೆಗೆದಿದ್ದಾರೆ. ನಂತರ ಕೆಲವರನ್ನು ದೂರವಾಣಿ ಮೂಲಕ ಕರೆಸಿದ್ದಾರೆ. ಅಪಾಯ ಅರಿತ ಯುವಕರು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದರೂ ಅವರನ್ನು ಹಿಂಬಾಲಿಸಿ ಚೂರಿಯಿಂದ ಇರಿಯಲಾಗಿದೆ.

ಒಬ್ಬ ಪ್ರಾಣಾಪಾಯದಿಂದ ಪಾರಾಗಿದ್ದು, ಮತ್ತೊಬ್ಬರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಕೋಣಾಂಜೆ ಪೊಲೀಸ್‌‍ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

RELATED ARTICLES

Latest News