Thursday, September 19, 2024
Homeಜಿಲ್ಲಾ ಸುದ್ದಿಗಳು | District Newsತುಮಕೂರು | Tumakuruಮದುವೆ ಮಾಡಿಕೊಂಡು ಯುವಕರಿಗೆ ವಂಚಿಸುತ್ತಿದ್ದ ಖತರ್ನಾಕ್‌ "ಮ್ಯಾರೇಜ್ ಗ್ಯಾಂಗ್‌" ಸೆರೆ

ಮದುವೆ ಮಾಡಿಕೊಂಡು ಯುವಕರಿಗೆ ವಂಚಿಸುತ್ತಿದ್ದ ಖತರ್ನಾಕ್‌ “ಮ್ಯಾರೇಜ್ ಗ್ಯಾಂಗ್‌” ಸೆರೆ

ಗುಬ್ಬಿ, ಆ.14– ಹೆಣ್ಣು ಸಿಗದ ಗ್ರಾಮೀಣ ಭಾಗದ ಯುವಕರನ್ನು ಟಾರ್ಗೆಟ್‌ ಮಾಡಿಕೊಂಡು ಮದುವೆ ಹೆಸರಿನಲ್ಲಿ ಮೋಸ ಮಾಡುತ್ತಿದ್ದ ಖತರ್ನಾಕ್‌ ಗ್ಯಾಂಗ್‌ಅನ್ನು ಪೊಲೀಸರು ಬಂಧಿಸಿದ್ದಾರೆ.ಮದುಮಗಳು ಮೂರು ವರ್ಷದಲ್ಲಿ ನಾಲ್ಕು ಮದುವೆ ಆಗಿದ್ದಾಳೆ. ಮದುವೆಯಾಗಿದ್ದ ವಂಚಕ ಜಾಲವನ್ನು ಗುಬ್ಬಿ ಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ.

ತಾಲ್ಲೂಕಿನ ಲಕ್ಷ್ಮೀ ಬಾಳಸಾಬ್‌ ಜನಕರ್‌ ಅಲಿಯಾಸ್‌‍ ಕೋಮಲ, ಸಿದ್ದಪ್ಪ , ಲಕ್ಷ್ಮೀಬಾಯಿ, ಬ್ರೋಕರ್‌ ಲಕ್ಷ್ಮಿ ಬಂಧಿತರು. ತಾಲ್ಲೂಕಿನ ಅತ್ತಿಗಟ್ಟೆ ಪಾಲಾಕ್ಷ ಎಂಬುವವರು ತಮ ಮಗನ ಮದುವೆ ಮಾಡಲು ಹರಸಾಹಸ ನಡೆಸಿದ್ದರು.ವಯಸ್ಸು ಮೀರುತ್ತಿದ್ದರೂ ಹೆಣ್ಣು ಸಿಗದೆ ನೊಂದಿದ್ದರು. ನೂರಾರು ಹೆಣ್ಣು ಹುಡುಕಿದರೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ.

ಹತ್ತಾರು ಮದುವೆ ಬ್ರೋಕರ್‌ ಮೂಲಕ ಹೆಣ್ಣು ಹುಡುಕಿಸಿದ್ದರೂ ಮದುವೆ ಸೆಟ್‌ ಆಗಿರಲಿಲ್ಲ. ಕುಷ್ಟಗಿ ಮೂಲದ ಬಸವರಾಜು ಎಂಬುವವರ ಮೂಲಕ ಬ್ರೋಕರ್‌ ಲಕ್ಷಿ ಎಂಬಾಕೆಯ ಪರಿಚಯವಾಗಿದ್ದು, ನಿಮ ಮಗನಿಗೆ ನಾನು ಹೆಣ್ಣು ತೋರಿಸಿ ಮದುವೆ ಮಾಡಿಸುತ್ತೇವೆ ಎಂದು ಭರವಸೆ ನೀಡಿದ್ದಳು.

ಇದಾದ ಕೆಲವು ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಒಬ್ಬ ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ-ತಾಯಿ ಇಲ್ಲ. ನೀವೆ ಮದುವೆ ಮಾಡಿಕೊಳ್ಳಬೇಕೆಂದು ಸುಳ್ಳು ಹೇಳಿದ್ದಾಳೆ. ಆಗ ಬ್ರೋಕರ್‌ ಲಕ್ಷ್ಮಿ ಈ ಕೋಮಲ ಎಂಬ ಹೆಸರಿನಲ್ಲಿ ಯುವತಿಯ ಪೋಟೋ ತೋರಿಸಿದ್ದಾಳೆ.

ಇನ್ನು ಹುಡುಗನ ಮನೆ ನೋಡಲು ಅತ್ತಿಕಟ್ಟೆ ಗ್ರಾಮಕ್ಕೆ ಬಂದಿದ್ದ ಯುವತಿ ಹಾಗೂ ಆಕೆಯ ಚಿಕ್ಕಮ-ಚಿಕ್ಕಪ್ಪ ಬಂದು ಮದುವೆ ಮಾತುಕತೆಯನ್ನೂ ಮುಗಿಸಿದ್ದರು. ನಂತರ, ಹುಡುಗ ಒಪ್ಪಿಗೆ ಇದ್ದಾನೆ, ನಿಮಗೂ ಹುಡುಗಿ ಒಪ್ಪಿಗೆ ಇದ್ದರೆ ನಾಳೆಯೇ ನಿಮೂರಿನ ದೇವಸ್ಥಾನದಲ್ಲಿ ಸಿಂಪಲ್ಲಾಗಿ ಮದುವೆ ಮಾಡಿಬಿಡೋಣ ಎಂದು ಹೇಳಿದ್ದಾರೆ.

ಮೊದಲೇ ಮಗನಿಗೆ ಹೆಣ್ಣು ಸಿಗದೆ ಹೈರಾಣಾಗಿದ್ದ ದಯಾನಂದ ಮೂರ್ತಿ ಕುಟುಂಬಕ್ಕೆ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿತ್ತು. ಹೆಣ್ಣು ಸಿಕ್ಕ ಖುಷಿಯಲ್ಲಿ ಹಿಂದು ಮುಂದು ಯೋಚಿಸದೆ ದಿಢೀರ್‌ ಮದುವೆಗೆ ಒಪ್ಪಿಕೊಂಡು ಗ್ರಾಮದಲ್ಲಿ ಮದುವೆ ಮಾಡಿದ್ದರು.

ಈ ಮದುವೆಗೆ ಸುಮಾರು 200ಕ್ಕೂ ಹೆಚ್ಚು ಜನರು ಸಾಕ್ಷಿಯಾಗಿದ್ದರು. ಮದುಮಗಳಿಗೆ ಚಿನ್ನದ ಸರ, ತಾಳಿ, ಓಲೆ ಸೇರಿ ಸುಮಾರು 25 ಗ್ರಾಂ ತೂಕದ ಚಿನ್ನಾಭರಣವನ್ನು ಗಂಡಿನ ಮನೆಯವರು ಮಾಡಿಸಿಕೊಟ್ಟಿದ್ದರು. ಜತೆಗೆ ಇನ್ನು ಬ್ರೋಕರ್‌ ಲಕ್ಷ್ಮೀಗೆ ಬರೋಬ್ಬರಿ 1.5 ಲಕ್ಷ ರೂ. ಹಣ ನೀಡಿದ್ದರು.

ಮದುವೆ ಮುಗಿದ 2 ದಿನದ ನಂತರ ತವರುಮನೆಗೆ ಯುವತಿಯನ್ನು ಕರೆದುಕೊಂಡು ಹೋಗಬೇಕೆಂದು ಮದುವೆಯಾಗಿದ್ದ ಕೋಮಲಳನ್ನು ಆಭರಣದೊಂದಿಗೆ ಕರೆದುಕೊಂದು ಹೋಗಿದ್ದರು. ಒಂದು ವಾರ ಕಳೆದರೂ ವಾಪಸ್‌‍ ಬರಲಿಲ್ಲ. ಇದಿಂದ ಆತಂಕಗೊಂಡ ಪಾಲಾಕ್ಷ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಸತ್ಯ ಬಯಲಾಗಿದೆ. ನಕಲಿ ಮದುವೆಗೆ ಬಂದವರು ಕೂಡ ದೋಖಾ ಗಿರಾಕಿಗಳು ಎಂಬ ಸತ್ಯ ಬಯಲಾಗಿದೆ. ಆಗ ಪುನಃ ವಾಪಸ್‌‍ ಬಂದು ಗುಬ್ಬಿ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಗುಬ್ಬಿ ಪೊಲೀಸರು ನಿರಂತರ ತನಿಖೆ ನಡೆಸುತ್ತಿದ್ದು, ಮಹರಾಷ್ಟ್ರದಲ್ಲಿ ಮದುವೆ ಮಾಡಿಕೊಂಡು ಸೆಟೆಲ್‌ ಆಗಿದ್ದರು. ಆಗ ಮದುವೆ ೇಟೋ ಹಾಗೂ ವಿಡಿಯೋ ಆಧರಿಸಿ ವಂಚನೆ ಮಾಡಿದ ಗ್ಯಾಂಗ್‌ನ ಎಲ್ಲರನ್ನೂ ಬಂಧಿಸಿದ್ದಾರೆ.

ಒಟ್ಟಾರೆ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಒಟ್ಟು ನಾಲ್ಕೈದು ಮದುವೆಗಳನ್ನು ಮಾಡಿಕೊಂಡು ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದರು. ಇದಕ್ಕಾಗಿ ನಕಲಿ ಅಡ್ರೆಸ್‌‍ನಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿಕೊಳ್ಳುತ್ತಿದ್ದರು. ಆಧಾರ್‌ ಕಾರ್ಡ್‌ ತೋರಿಸಿ ಗಂಡಿನ ಮನೆಯವರನ್ನು ನಂಬಿಸುತ್ತಿದ್ದರು.

ಇತ್ತೀಚೆಗೆ ಮದುವೆಗೆ ಹೆಣ್ಣುಗಳು ಸಿಗುವುದೇ ಕಷ್ಟವಾಗಿದ್ದು, ಗ್ರಾಮೀಣ ಭಾಗದ ಯುವಕರು ನಿರಾಶವಾದಿಗಳಾಗಿದ್ದು, ವಯಸ್ಸು ಕೂಡ ದಾಟುತ್ತಿದ್ದು, ಯಾವುದೋ ಒಂದು ಹೆಣ್ಣು ಸಿಕ್ಕರೆ ಸಾಕು ಎಂದು ಕಣುಚ್ಚಿ ಒಪ್ಪಿಕೊಳ್ಳುವುದಕ್ಕೂ ಮುಂಚೆ ಎಚ್ಚರಿಕೆಯಿಂದಿರಬೇಕಿದೆ.

RELATED ARTICLES

Latest News