Thursday, September 19, 2024
Homeಜಿಲ್ಲಾ ಸುದ್ದಿಗಳು | District Newsತುಮಕೂರು | Tumakuruಮಗಳಿಗೆ ಆಸ್ತಿ ಬರೆದುಕೊಟ್ಟ ಅಪ್ಪನನ್ನು ಕೊಚ್ಚಿ ಕೊಂದ ಮಗ

ಮಗಳಿಗೆ ಆಸ್ತಿ ಬರೆದುಕೊಟ್ಟ ಅಪ್ಪನನ್ನು ಕೊಚ್ಚಿ ಕೊಂದ ಮಗ

ಕೊರಟಗೆರೆ, ಆ.14- ಆಸ್ತಿಯನ್ನು ತನ್ನ ಮಗಳಿಗೆ ಬರೆದುಕೊಟ್ಟ ಅಪ್ಪನನ್ನು ತನ್ನ ಮಗನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಕೋಳಾಲ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ತಾಲೂಕಿನ ಆಲಪನಹಳ್ಳಿ ಗ್ರಾಮದ ವೆಂಕಟಪ್ಪ (75) ಕೊಲೆಯಾದ ವೃದ್ಧ. ಆಸ್ತಿ ವಿವಾದ ಸಂಬಂಧ ಪುತ್ರ ಸಿದ್ದಪ್ಪ ಹಾಗೂ ವೆಂಕಟಪ್ಪನೊಂದಿಗೆ ಆಗಾಗ್ಗೆ ಜಗಳ ನಡೆಯುತ್ತಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.

ವೆಂಕಟಪ್ಪ ಹೆಸರಿನಲ್ಲಿದ್ದ ಮೂರು ಎಕರೆ ಜಮೀನನ್ನು ಮಗನ ಹೆಸರಿಗೆ ಬರೆಯದೆ ಮಗಳ ಹೆಸರಿಗೆ ಬರೆದುಕೊಟ್ಟಿದ್ದಾರೆ. ಇದರಿಂದ ತಂದೆ-ಮಗನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.

ಹಿರಿಯರ ಸಮುಖದಲ್ಲಿ ನ್ಯಾಯ ಪಂಚಾಯಿತಿ ನಡೆದು ಯಾವುದಕ್ಕೂ ಜಗ್ಗದ ವೆಂಕಟಪ್ಪ ಜೊತೆಗೆ ಕೋಟಾಲದಿನ್ನೆ ಬಳಿ ಇದ್ದ ಜಮೀನಿನಿಂದ ಬಂದ 25 ಲಕ್ಷ ಹಣವನ್ನೂ ಸಹ ಮಗಳಿಗೆ ಕೊಟ್ಟಿದ್ದು, ಸಾಲ ಮಾಡಿಕೊಂಡು ನಾನು ಹೊಸ ಮನೆ ಕಟ್ಟುತ್ತಿದ್ದರೂ ಸಹ ನನಗೆ ಯಾವುದೇ ಸಹಾಯ ಮಾಡಿಲ್ಲ, ಕಷ್ಟಕ್ಕೆ ಸ್ಪಂದಿಸಿಲ್ಲ. ಎಲ್ಲವನ್ನೂ ಮಗಳಿಗೇ ಕೊಟ್ಟಿದ್ದಾರೆ ಎಂದು ಆಕ್ರೋಶಗೊಂಡು ಅಪ್ಪನನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದ.

ಮುಚ್ಚು ಹಿಡಿದುಕೊಂಡು ಹೊಂಚು ಹಾಕುತ್ತಿದ್ದ ಸಿದ್ದಪ್ಪ ಮಧ್ಯಾಹ್ನ ದ್ವಿಚಕ್ರವಾಹನದಲ್ಲಿ ತಲೆಗೆ ಹೆಲೆಟ್‌ ಹಾಕಿಕೊಂಡು ಯಾರಿಗೂ ತಿಳಿಯದ ರೀತಿಯಲ್ಲಿ ಬಂದವನು ಏಕಾಏಕಿ ಅಪ್ಪನ ತಲೆಗೆ ಮುಚ್ಚಿನಿಂದ ಬರ್ಬರವಾಗಿ ನಾಲ್ಕೈದು ಬಾರಿ ಕೊಚ್ಚಿ ಕೊಲೆಗೈದಿದ್ದಾನೆ.

ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ತುಮಕೂರು ಅಡಿಷನಲ್ ಎಸ್‌‍ಪಿ ಮರಿಯಪ್ಪ , ಡಿವೈಎಸ್‌‍ಪಿ ರಾಮಚಂದ್ರಪ್ಪ , ಸಿಪಿಐ ಹನುಮಂತರಾಯಪ್ಪ ,ಪಿಎಸ್‌‍ಐ ರೇಣುಕಾಯಾದವ್‌, ಯೋಗೇಶ್‌ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ಕೋಳಾಲ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಿದ್ದಪ್ಪನ ಬಂಧನಕ್ಕೆ ಕೊರಟಗೆರೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

Latest News