Thursday, December 12, 2024
Homeಮನರಂಜನೆಮೂರು ಸ್ನೇಹಿತರ ಬದುಕಿನ ಹೋರಾಟ 'ಮರ್ಯಾದೆ ಪ್ರಶ್ನೆ'

ಮೂರು ಸ್ನೇಹಿತರ ಬದುಕಿನ ಹೋರಾಟ ‘ಮರ್ಯಾದೆ ಪ್ರಶ್ನೆ’

ಆರ್ ಜೆ ಪ್ರದೀಪ್, ಮರ್ಯಾದೆ ಪ್ರಶ್ನೆ ಸಿನಿಮಾ ಬಿಡುಗಡೆಗು ಮುಂಚೆ, ‘ಒಂದಷ್ಟು ಸೂಕ್ಷ್ಮ ವಿಚಾರಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಕಂಟೆಂಟ್ ಗಟ್ಟಿಯಾಗಿದೆ’ ಎಂದು ಪ್ರೇಕ್ಷಕರಿಗೆ ಭರವಸೆ ಕೊಟ್ಟಿದ್ದರು. ನಾವು ಸಿನಿಮಾ ನೋಡಾದ ಮೇಲೆ ಅದು ನಿಜ ಅನಿಸುತ್ತದೆ. ಪ್ರಮುಖವಾಗಿ ಮೂರು ಸ್ನೇಹಿತರ ಹಿನ್ನೆಲೆಯನ್ನು ಇಟ್ಟುಕೊಂಡು ಇಡೀ ಚಿತ್ರವನ್ನು ಕಟ್ಟಿಕೊಡಲಾಗಿದೆ. ಅದೇ ಇಡೀ ಕಥೆಯನ್ನು ಕೊನೆಯವರೆಗೂ ಕೊಂಡೊಯ್ಯುತ್ತದೆ.

ಮೂವರು ಪ್ರಾಣ ಸ್ನೇಹಿತರು – ಸೂರಿ (ರಾಕೇಶ್ ಅಡಿಗ), ಮಂಜ (ಪೂರ್ಣಚಂದ್ರ ಮೈಸೂರು), ಮತ್ತು ಸತೀಶ್ (ಸುನೀಲ್ ರಾವ್) ಇವರೆಲ್ಲರೂ ಮಧ್ಯಮ ವರ್ಗದಿಂದ ಬಂದವರು. ಜೀವನ ಕಟ್ಟಿಕೊಳ್ಳಲು ಏನಿಲ್ಲ ಹೋರಾಟಗಳನ್ನು ಮಾಡುತ್ತಾರೆ, ಅವರು ತಮ್ಮ ಗುರಿಗಳನ್ನು ಮುಟ್ಟುತ್ತಾರ, ಇಲ್ಲ ಸೋತು ಸೊರಗುತ್ತಾರ ಎನ್ನುವ ಪ್ರಶ್ನೆಗಳ ಉತ್ತರವೇ ಸ್ಟೋರಿ ಲೈನ್.

ಕಾರ್ಪೊರೇಟರ್ ಕನಸು ಕಾಣುವ ಸೂರಿ, ಸ್ವಂತ ಕಾರಿಗಾಗಿ ಹೋರಾಟ ನಡೆಸುವ ಡ್ರೈವರ್ ಮಂಜ, ಫುಡ್ ಡೆಲಿವರಿ ಬಾಯ್ ಆಗಿ ಸತೀಶ್ ಸದಾ ಬದುಕಿನ ಜೊತೆ ಗುದ್ದಾಡುತ್ತಿರುತ್ತಾರೆ. ಅವರಿಗೆ ಎಷ್ಟೇ ಕಷ್ಟಗಳಿದ್ದರೂ ಒಬ್ಬರಿಗೊಬ್ಬರು ಸಹಕಾರಿಯಾಗಿ ನಿಲ್ಲುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರಲ್ಲಿ ಒಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದಾಗ ಅವರ ಜೀವನವು ದುರಂತ ತಿರುವು ಪಡೆಯುತ್ತದೆ. ಅಲ್ಲಿಂದ ಸೇಡಿನಾಟ ಶುರುವಾಗುತ್ತದೆ, ಚಿತ್ರದ ಕಥೆ ಬೇರೊಂದು ದಿಕ್ಕಿನತ್ತ ಪಯಣಿಸುತ್ತದೆ. .ನಾಗರಾಜ್ ಸೋಮಯಾಜಿ ಅವರ ನಿರ್ದೇಶನ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.

ಸುನಿಲ್ ರಾವ್, ರಾಕೇಶ್ ಅಡಿಗ, ಪೂರ್ಣಚಂದ್ರ ಮೈಸೂರು ಈ ಮೂರು ನಟರು ಪ್ರೇಕ್ಷಕರನ್ನು ನಗಿಸುತ್ತಾರೆ ಮತ್ತು ಅಳಿಸುತ್ತಾರೆ. ಒಬ್ಬಬ್ಬರು ಒಂದೊಂದು ರೀತಿಯಲ್ಲಿ ಸಿನಿಮಾ ಪರಿಣಾಮಕಾರಿಯಾಗಿ ಮೂಡಿಬರಲು ಕಾರಣರಾಗಿದ್ದಾರೆ. ಅಷ್ಟೇ ಅಲ್ಲದೆ, ತೇಜು ಬೆಳವಾಡಿ, ಶೈನ್ ಶೆಟ್ಟಿ,ಪ್ರಭು ಮುಂಡ್ಕೂರ್,ನಾಗೇಂದ್ರ ಶಾ ಇವರ ಕೊಡೆಗೆಯೂ ಇದೆ. ಚಿತ್ರದ ಮೊದಲಭಾಗದಲ್ಲಿ ಮಧ್ಯಮ ವರ್ಗದ ಜೀವನದ ಮಜಲುಗಳನ್ನು ಪ್ರೇಕ್ಷಕರಿಗೆ ದೃಶ್ಯಗಳ ಮೂಲಕ ಪರಿಚಯಿಸುವ ಪ್ರಯತ್ನ ಆಗಿದೆ.ದ್ವಿತೀಯಾರ್ಧವು ಸೇಡಿನ ಮೇಲೆ ಸಾಗುತ್ತದೆ.ಸಂದೀಪ್ ವಲ್ಲೂರಿ ಅವರ ಕ್ಯಾಮೆರಾ ಕೈಚಳಕ ಎದ್ದು ಕಾಣುತ್ತದೆ. ಹಾಡುಗಳು ಕಥೆಯೊಂದಿಗೆ ಸಾಗುವ ಪರಿ ಗಮನ ಸೆಳೆಯುತ್ತದೆ.

RELATED ARTICLES

Latest News