Sunday, October 6, 2024
Homeರಾಷ್ಟ್ರೀಯ | Nationalವಿಷಕಾರಿ ಚುಚ್ಚುಮದ್ದು ಚುಚ್ಚಿಕೊಂಡು ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

ವಿಷಕಾರಿ ಚುಚ್ಚುಮದ್ದು ಚುಚ್ಚಿಕೊಂಡು ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

Medical Student in Prayagraj Ends Life by Injecting Himself

ಪ್ರಯಾಗ್ರಾಜ್ (ಯುಪಿ),ಸೆ.29-ಇಲ್ಲಿನ ಸರ್ಕಾರಿ ಮೋತಿ ಲಾಲ್ ನೆಹರೂ ವೈದ್ಯಕೀಯ ಕಾಲೇಜಿನಲ್ಲಿ ಮಾಸ್ಟರ್ ಆಫ್ ಸರ್ಜರಿ ವ್ಯಾಸಂಗ ಮಾಡುತ್ತಿದ್ದ ವೈದ್ಯನೊಬ್ಬ ತನ್ನ ವಿಷಕಾರಿ ಇಂಜೆಕ್ಷನ್ ಚುಚಿಕೊಂಡು ಆತಹತ್ಯೆ ಮಾಡಿಕೊಂಡ ದುರಂತ ಘಟನೆ ನಡೆದಿದೆ.

ಕಳೆದ ರಾತ್ರಿ ಎಸ್ಆರ್ಎನ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಡಾ.ಕಾರ್ತಿಕೇಯ ಶ್ರೀವಾಸ್ತವ (28) ಆತಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಂದು ಡಿಸಿಪಿ (ನಗರ) ಅಭಿಷೇಕ್ ಭಾರ್ತಿ ತಿಳಿಸಿದ್ದಾರೆ.

ಉತ್ತರಾಖಂಡದ ಕೋಟ್ದ್ವಾರದವರಾದ ಡಾ. ಕಾರ್ತಿಕೇಯ ಶ್ರೀವಾಸ್ತವ ಆಸ್ಪತ್ರೆಯ ವಿಚಾರದಲ್ಲಿ ತಲೆ ಕೆಡಿಸಿಕೊಂಡು ಆತಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ತಮ ಕಾರಿನಲ್ಲಿ ಬಂದು ಕೂತು ಪ್ರಾಣ ಬಿಟ್ಟಿದ್ದಾರೆ ಎಂದು ಎಸಿಪಿ ಕೊತ್ವಾಲಿ ಮನೋಜ್ ಕುಮಾರ್ ಸಿಂಗ್ ಹೇಳಿದ್ದಾರೆ.

ಶ್ವಾನದಳ ಹಾಗೂ ತನಿಖಾ ತಂಡವನ್ನು ಸ್ಥಳಕ್ಕೆ ಬಂದು ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಘಟನೆಯಿಂದ ಆಸ್ಪತ್ರೆ ಸಿಬ್ಭಂಧಿ ಆತಂಕಗೊಂಡಿದ್ದಾರೆ.ನಿಜವಾದ ಕಾರಣ ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಿದರು.

RELATED ARTICLES

Latest News