ಬೆಂಗಳೂರು,ಸೆ.30– ರಾಜ್ಯಸರ್ಕಾರದ ಕೆಲವು ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳನ್ನು ವಿಲೀನಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೊಂದು ನಿಗಮ ಮಂಡಳಿಗಳು ಕ್ರಿಯಾಶೀಲವಾಗಿಲ್ಲ. ಅವುಗಳನ್ನು ವಿಲೀನಗೊಳಿಸುವ ಸಾಧ್ಯಾಸಾಧ್ಯತೆ ಬಗ್ಗೆ ಆಯೋಗ ಚರ್ಚೆ ಮಾಡಲಿದೆ. ಈ ಬಗ್ಗೆ ಆಯೋಗವು ವಿವರವಾದ ವಿಶ್ಲೇಷಣೆಯನ್ನು ಪ್ರಾರಂಭಿಸಿದೆ ಎಂದರು.
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಮಾನದಂಡಗಳನ್ನು ಪರಿಶೀಲಿಸಲು ಮತ್ತು ಆದಾಯ ಪ್ರಮಾಣಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಪರಿಶೀಲಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉಪ-ಸಮಿತಿಯನ್ನು ರಚಿಸಲಾಗಿದೆ. ಉಪಸಮಿತಿಯು ರಾಜ್ಯ ಸರ್ಕಾರದ ಪ್ರಾಯೋಜಿತ ಯೋಜನೆಗಳ ಬಗ್ಗೆ ಪರಿಶೀಲನೆ ಮತ್ತು ಸಲಹೆಗಳನ್ನು ಪ್ರಸ್ತಾಪಿಸುವ ಕಾರ್ಯವನ್ನು ಸಹ ಹೊಂದಿದೆ ಎಂದು ಹೇಳಿದರು.
ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳ ಸಮಗ್ರ ಪರಿಶೀಲನೆ ನಡೆಸಲಾಗುತ್ತಿದ್ದು, ಈ ಪರಿಶೀಲನೆಯ ಸಂದರ್ಭದಲ್ಲಿ ಗುರುತಿಸಲಾದ ಯಾವುದೇ ಲೋಪಗಳನ್ನು ನಿವಾರಿಸಲಾಗುವುದು ಎಂದರು.
ಆಯೋಗದ ಇತರ ಉಪಕ್ರಮಗಳು :
ಪರಿಣಾಮಕಾರಿಯಾಗಿ ಮತ್ತು ಸಕಾಲದಲ್ಲಿ ಸೇವಾ ವಿತರಣೆಯನ್ನು ಖಚಿತಪಡಿಸಿಕೊಳ್ಳಲು, ನಗದುರಹಿತ ಮತ್ತು ಸಂಪರ್ಕರಹಿತ ಆಯ್ಕೆಗಳನ್ನು ನೀಡಲು ನಾಗರಿಕ ಸೇವೆಗಳನ್ನು ಉನ್ನತೀಕರಿಸಲಾಗುವುದು. ಇದು ಕಡಿಮೆ ವೆಚ್ಚದೊಂದಿಗೆ ದೂರದಿಂದಲೇ ಸೇವೆಗಳನ್ನು ಪಡೆಯಲು ಸಾರ್ವಜನಿ ಕರಿಗೆ ಅನುಕೂಲ ಮಾಡಿಕೊಡುತ್ತದೆ. ಅಲ್ಲದೆ, ಎಲ್ಲಾ ಸೇವೆಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಎಂಡ್-ಟು-ಎಂಡ್ ಸೇವೆಗಳಾಗಿ ಪರಿವರ್ತಿಸಲಾಗುತ್ತದೆ ಎಂದು ಹೇಳಿದರು.
ಸಿಬ್ಬಂದಿಯ ಮೇಲಿನ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಇ-ಆಫೀಸ್, ಎಂಡ್- ಟು-ಎಂಡ್ ಆನ್‌ಲೈನ್ ಸೇವೆಗಳು ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು. ತ್ವರಿತ ಕಡತ ವಿಲೇವಾರಿಗೆ ಅನುಕೂಲವಾಗುವಂತೆ, ಕಡತ ಚಲನವಲನದ ಹಂತಗಳನ್ನು 3-4 ಹಂತಗಳಿಗೆ ಇಳಿಸಲಾಗುವುದು ಎಂದರು.
ನಾಗರಿಕ ಸೇವೆಗಳು ಮತ್ತು ಕಡತ ಚಲನವಲನಕ್ಕೆ ಸಂಬಂಧಿಸಿದ ಕಾರ್ಯ ವಿಧಾನಗಳನ್ನು ಎಲ್ಲಾ ಹಂತಗಳಲ್ಲಿ ಸರಳೀಕರಿಸಲಾಗುವುದು.ಅಟಲ್ ಜೀ ಜನಸ್ನೇಹಿ ಕೇಂದ್ರ, ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಪೊಲೀಸ್ ಠಾಣೆಗಳಂತಹ ಮುಂಚೂಣಿ ಕಚೇರಿಗಳ ಸೇವಾ ವಿತರಣೆಯನ್ನು ಬಲಪಡಿಸಲಾಗುವುದು. ಈ ಮುಂಚೂಣಿ ಕಚೇರಿಗಳಲ್ಲಿರುವ ನಿರ್ಣಾಯಕ ಖಾಲಿ ಹ್ದುೆಗಳು ಮತ್ತು ತಾಂತ್ರಿಕ ಹ್ದುೆಗಳನ್ನು ಭರ್ತಿ ಮಾಡಲು ಆಯೋಗವು ನೀಡಿದ ಶಿಫಾರಸುಗಳನ್ನು ಜಾರಿಗೆ ತರಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಶುಲ್ಕ ಮತ್ತು ದಂಡಗಳ ಪರಿಷ್ಕರಣೆಯ ಮೂಲಕ ಸರ್ಕಾರದ ಆದಾಯ/ಸಂಪನೂಲಗಳನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು. ಆಡಳಿತಾತಕ ಮತ್ತು ಆರ್ಥಿಕ ಅಧಿಕಾರಗಳನ್ನು ಜಿಲ್ಲಾ ಉಪವಿಭಾಗ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಪ್ರದತ್ತಗೊಳಿಸಲು ಹೆಚ್ಚಿನ ಶಿಫಾರಸುಗಳನ್ನು ಮಾಡಲಾಗುವುದು.
ಸೇವಾ ವಿತರಣೆಯನ್ನು ಸುಧಾರಿಸಲು, ಅಸ್ತಿತ್ವದಲ್ಲಿರುವ ಖಾಲಿ ಲಿಪಿಕ ಹ್ದುೆಗಳನ್ನು ಕೆಲಸದ ಹೊರೆಯ ಆಧಾರದ ಮೇಲೆ ತಾಂತ್ರಿಕ ಹ್ದುೆಗಳಿಗೆ ಪರಿವರ್ತಿಸುವ ಜೊತೆಗೆ ಸಿಬ್ಬಂದಿಯ ಮರು ನಿಯೋಜನೆಗೆ ಹೆಚ್ಚಿನ ಅವಕಾಶ ನೀಡಲಾಗುವುದು. ಕೆಲಸದ ಹೊರೆಯ ಆಧಾರದ ಮೇಲೆ ಸಿಬ್ಬಂದಿಯ ಮರು ನಿಯೋಜನೆಯನ್ನು ಪ್ರಾರಂಭಿಸಲಾಗಿಲ್ಲ. ಇದನ್ನು ತ್ವರಿತಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.