Saturday, September 14, 2024
Homeರಾಜ್ಯಮೆಟ್ರೋ ಟ್ರಾಕ್ ಜಿಗಿದರೂ ಪ್ರಾಣಾಪಾಯದಿಂದ ಪಾರಾದ ಮಹಿಳೆ..!

ಮೆಟ್ರೋ ಟ್ರಾಕ್ ಜಿಗಿದರೂ ಪ್ರಾಣಾಪಾಯದಿಂದ ಪಾರಾದ ಮಹಿಳೆ..!

ಬೆಂಗಳೂರು,ಜ.2- ಮೆಟ್ರೋ ಟ್ರ್ಯಾಕ್‍ಗೆ ಜಿಗಿದ ಮಹಿಳೆ ಸಿಬ್ಬಂದಿಗಳ ಚಾಕಚಕ್ಯತೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದಿರಾನಗರ ಮೆಟ್ರೋ ಸ್ಟೇಷನ್‍ನಲ್ಲಿ ನಡೆದಿದೆ. ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮೆಟ್ರೋ ಟ್ರ್ಯಾಕ್ ಗೆ ಮಹಿಳೆ ಜಿಗಿಯುತ್ತಿರುವುದನ್ನು ಕಂಡ ಕೂಡಲೇ ಮೆಟ್ರೋ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದರಿಂದ ಸಂಭವಿಸಬಹುದಾದ ಅನಾಹುತ ತಪ್ಪಿದೆ.

ಸಾಮೂಹಿಕ ಅತ್ಯಾಚಾರ, ಮೂವರು ಕಾಮುಕರ ಬಂಧನ

ಮಹಿಳೆ ಮಾಡಿದ ಈ ಎಡವಟ್ಟಿನಿಂದಾಗಿ ಸುಮಾರು 15 ನಿಮಿಷಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಳಿಸಬೇಕಾಯಿತು ಎಂದು ಬಿಎಂಆರ್‌ಸಿಎಲ್‌ ಸ್ಪಷ್ಟನೆ ನೀಡಿದೆ. ವಿದ್ಯುತ್ ತೆಗೆದ ನಂತರ ಎಲ್ಲವನ್ನೂ ರೀ ಸೆಟ್ ಮಾಡಲು 15 ನಿಮಿಷ ಬೇಕು ನಿನ್ನೆ ಪೀಕ್ ಅವರ್ ನಲ್ಲೇ ಈ ರೀತಿ ಸಮಸ್ಯೆ ಅಗಿದೆ ಇದಕ್ಕೆ ವಿಷಾಧಿಸುತ್ತೇವೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News