Sunday, February 16, 2025
Homeರಾಜ್ಯಮಂಗಳೂರಲ್ಲಿ ಸಚಿವ ದಿನೇಶ್‌ ಗುಂಡೂರಾವ್‌ ಸ್ವಿಮ್ಮಿಂಗ್

ಮಂಗಳೂರಲ್ಲಿ ಸಚಿವ ದಿನೇಶ್‌ ಗುಂಡೂರಾವ್‌ ಸ್ವಿಮ್ಮಿಂಗ್

ಮಂಗಳೂರು,ಜು.6- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಇಂದು ಬೆಳಿಗ್ಗೆ ಮಂಗಳೂರಿನ ಎಮ್ಮೆ ಕೆರೆ ಬಳಿ ಇರುವ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳದಲ್ಲಿ ಕಸರತ್ತು ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಮಳೆಗಾಲ ಸಂದರ್ಭದಲ್ಲಿ ಸಂಭವಿಸಬಹುದಾದ ನೆರೆ ಹಾಗೂ ಇತರ ಪರಿಸ್ಥಿತಿಗಳ ಅವಲೋಕನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಸ ಕೈಗೊಂಡಿದ್ದಾರೆ.ನಿನ್ನೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಡೆಂಘೀ ನಿಯಂತ್ರಣ ಹಾಗೂ ಸೊಳ್ಳೆ ನಾಶ ಕುರಿತು ಜನರಲ್ಲಿ ಅರಿವು ಮೂಡಿಸಿದರು. ಜೊತೆಗೆ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಇಂದೂ ಕೂಡ ಮಂಗಳೂರು ವಾಸ್ತವ್ಯವನ್ನು ಮುಂದುವರೆಸಿರುವ ಸಚಿವರು, ವಿವಿಧ ಅಭಿವೃದ್ಧಿ ಯೋಜನೆಗಳ ಪರಾಮರ್ಶೆ ಜೊತೆಗೆ ಮಳೆ ಅನಾಹುತಗಳ ಕುರಿತು ಸ್ಥಳ ಪರಿಶೀಲನೆ ನಡೆಸಲಿದ್ದಾರೆ.

ಅದಕ್ಕೂ ಮುನ್ನ ಬೆಳಿಗ್ಗೆ ವಾಯುವಿಹಾರದ ಬಳಿಕ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಮೀನಿನಂತೆ ಈಜಿ ತಮ ದೈಹಿಕ ಕ್ಷಮತೆ ಪ್ರದರ್ಶನ ಮಾಡಿದರು.ಲೀಲಾಜಾಲವಾಗಿ ಸಚಿವರು ಈಜಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

RELATED ARTICLES

Latest News