Friday, May 3, 2024
Homeರಾಜ್ಯರಾಜಣ್ಣಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ರಾಜಣ್ಣಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು,ಜ.27- ಪಕ್ಷದಿಂದ ನಾವೆಲ್ಲಾ ಇದ್ದೇವೆ ಹೊರತು ನಮ್ಮಿಂದಲೇ ಪಕ್ಷ ನಡೆಯುತ್ತಿದೆ ಎಂಬುದು ಮೂರ್ಖತನ. ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ವಿವಾದಿತ ಹೇಳಿಕೆ ಕುರಿತಂತೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಪಕ್ಷ ಚೌಕಟ್ಟಿನಲ್ಲಿ ಶಿಸ್ತನ್ನು ಪಾಲಿಸುವುದು ಅನಿವಾರ್ಯ ಎಂದರು.

ಇಲ್ಲಿ ಹೈ ಕಮಾಂಡ್, ಲೋ ಕಮಾಂಡ್ ಎಂಬುದಿಲ್ಲ. ಯಾರೂ ಯಾರ ಗುಲಾಮರೂ ಅಲ್ಲ. ಟಿಕೆಟ್ ಪಡೆದುಕೊಳ್ಳುವಾಗ ಹೈಕಮಾಂಡ್ ಮುಖ್ಯವಾಗುತ್ತದೆ. ಟಿಕೆಟ್ ದೊರೆತು ಚುನಾವಣೆಯಲ್ಲಿ ಗೆದ್ದ ಬಳಿಕ ಹೈಕಮಾಂಡ್ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ನನ್ನನ್ನೂ ಒಳಗೊಂಡಂತೆ ಎಲ್ಲರೂ ಪಕ್ಷದ ಚೌಕಟ್ಟಿನಲ್ಲೇ ಇರಬೇಕು. ನಮ್ಮಿಂದಲೇ ಪಕ್ಷ ನಡೆಯುತ್ತಿದೆ ಎಂಬುದು ಮೂರ್ಖತನವಾಗುತ್ತದೆ. ಹಿರಿಯರಾದ ರಾಜಣ್ಣ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಯಾರೂ ಯಾರ ಗುಲಾಮರೂ ಅಲ್ಲ. ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ನಡೆದುಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಕಾಂಗ್ರೆಸ್ ನಾಯಕ ಶ್ಯಾಮನೂರು ಶಿವಶಂಕರಪ್ಪ, ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸುವಂತೆ ಹೇಳಿಕೆ ನೀಡುವುದು ನನ್ನ ಗಮನಕ್ಕೆ ಬಂದಿಲ್ಲ. ಬಹುಷಃ ಆತ್ಮೀಯತೆಯಿಂದ ಅವರು ಆ ರೀತಿ ಮಾತನಾಡಿರಬಹುದು. ಪಕ್ಷದ ಕಾರ್ಯಕ್ರಮವಂತೂ ಆಗಿರಲಿಕ್ಕಿಲ್ಲ ಎಂದರು. ನಿಗಮಮಂಡಳಿಯ ನೇಮಕಾತಿಯಲ್ಲಿ ಯಾವುದೇ ಅಸಮಾಧಾವಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದಾರೆ. ಅದನ್ನು ಬಹಿರಂಗವಾಗಿ ಚರ್ಚಿಸುವುದು ಸೂಕ್ತವಲ್ಲ.

ಇಂಡಿಯಾ ಬಣದಲ್ಲಿ ಯಾರಿಗೂ ನ್ಯಾಯ ಸಿಗುತ್ತಿಲ್ಲ : ಅನುರಾಗ್ ಠಾಕೂರ್

ಮೊದಲ ಹಂತದಲ್ಲಿ ಶಾಸಕರನ್ನು ನೇಮಿಸಲಾಗಿದೆ. ಅದರಲ್ಲಿ ಒಂದಿಷ್ಟು ಏರುಪೇರುಗಳಾಗಿದ್ದವು. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ನೇಮಕಾತಿಗೂ ಚಾಲನೆ ನೀಡಲಾಗುವುದು ಎಂದು ಹೇಳಿದರು ಬಿಜೆಪಿಯವರು 6 ತಿಂಗಳುಗಳ ಕಾಲ ವಿಧಾನಮಂಡಲದ ವಿರೋಧಪಕ್ಷದ ನಾಯಕರನ್ನು ಮತ್ತು ಅವರ ಪಕ್ಷದ ಅಧ್ಯಕ್ಷರನ್ನು ನೇಮಿಸಿರಲಿಲ್ಲ. ಅದರ ಬಗ್ಗೆ ಯಾರೂ ಪ್ರಶಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ನಿಗದಿತ ಭರವಸೆಯಂತೆ ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡಲಾಗಿದೆ. ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ. ಆದರೆ ನಮ್ಮನ್ನು ಹೆಚ್ಚು ಚರ್ಚೆಗೊಳಪಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿನ ಜಲಜೀವನ್ ಮಿಷನ್ ಯೋಜನೆ ಅವೈಜ್ಞಾನಿಕವಾಗಿದೆ ಎಂದು ನಿಯೋಗ ತಮಗೆ ದೂರು ನೀಡಿದೆ. ಈ ಬಾರಿ ಅಕಾರಿಗಳ ಜೊತೆ ಚರ್ಚಿಸಿ ಲೋಪಗಳನ್ನು ಸರಿಪಡಿಸಲಾಗುವುದು. ಯೋಜನೆ ಇನ್ನೂ ಆರಂಭಗೊಂಡಿಲ್ಲ. ಆದರೆ ಭ್ರಷ್ಟಾಚಾರಗಳು ನಡೆದಿವೆ ಎಂಬುದು ಅಪ್ರಸ್ತುತ. ಜಲಜೀವನ್ ಮಿಷನ್ ಕೈಗಾರಿಕೆಗಳಿಗೆ ಅಥವಾ ಉದ್ಯಮಗಳಿಗೆ ನೀರು ಪೂರೈಸುವ ಸಲುವಾಗಿ ಇಲ್ಲ. ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದೆ ಎಂದರು.

RELATED ARTICLES

Latest News