Sunday, April 28, 2024
Homeರಾಷ್ಟ್ರೀಯಬಿಹಾರ ಸಿಎಂ ನಿತೀಶ್‍ಗೆ ಬಿಗ್ ಶಾಕ್ ಕೊಟ್ಟ ತೇಜಸ್ವಿ

ಬಿಹಾರ ಸಿಎಂ ನಿತೀಶ್‍ಗೆ ಬಿಗ್ ಶಾಕ್ ಕೊಟ್ಟ ತೇಜಸ್ವಿ

ಪಾಟ್ನಾ,ಜ.27-ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿರುವ ಬಿಹಾರ ರಾಜಕಾರಣ ಈಗ ನಿರ್ಣಾಯಕ ಘಟ್ಟ ತಲುಪಿದ್ದು, ಮುಖ್ಯಮಂತ್ರಿ ನಿತೀಶ್‍ಕುಮಾರ್‍ಗೆ ನೀಡಿದ್ದ ಬೆಂಬಲವನ್ನು ಆರ್‍ಜೆಡಿ ಹಿಂಪಡೆದಿದೆ. ಇದರಿಂದ ಜೆಡಿಯು-ಆರ್‍ಜೆಡಿ ಮೈತ್ರಿ ವಿದ್ಯುಕ್ತವಾಗಿ ಮುರಿದು ಬಿದ್ದಿದು, ಮುಖ್ಯಮಂತ್ರಿ ನಿತೀಶ್‍ಕುಮಾರ್ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಡಿಸಿಎಂ ತೇಜಸ್ವಿ ಯಾದವ್ ರಾಜ್ಯಪಾಲರಿಗೆ ಪತ್ರ ನೀಡಿದ್ದಾರೆ.

ಇದೀಗ ನಿತೀಶ್‍ಕುಮಾರ್ ಸದನ ದಲ್ಲಿ ಬಹುಮತ ಸಾಬೀತುಪಡಿಸಬೇಕು ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಕ್ಕಟ್ಟಿಗೆ ಸಿಲುಕಿದ್ದು, ಮುಂದೆ ನಡೆಯುವ ರಾಜಕೀಯ ವಿದ್ಯಮಾನಗಳು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿವೆ. ಮೂಲಗಳ ಪ್ರಕಾರ ನಿತೀಶ್‍ಕುಮಾರ್ ತಮ್ಮ ಸ್ಥಾನಕ್ಕೆ ಯಾವುದೇ ಕ್ಷಣದಲ್ಲೂ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಬಿಜೆಪಿ ಜೊತೆ ಹೊಸ ಸರ್ಕಾರ ರಚನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಜೆಡಿಯುಗೆ ಬೆಂಬಲ ನೀಡಲು ಬಿಜೆಪಿ ಸಮ್ಮತಿಸಿವೆ. ಹೊಸ ಸರ್ಕಾರದಲ್ಲಿ ಬಿಜೆಪಿಗೆ ಎರಡು ಡಿಸಿಎಂ ಹಾಗೂ ಆರ್‍ಜೆಡಿ ಬಳಿ ಇದ್ದ ಖಾತೆಗಳನ್ನೆ ನೀಡಲು ಜೆಡಿಯು ಒಪ್ಪಿಕೊಂಡಿದೆ.

ಸುಫಾರಿ ಕೊಟ್ಟು ತಂದೆಯ ಕೊಲ್ಲಿಸಿದ ಮಗ

ಆದರೆ ಇದೀಗ ಸಿಎಂ ನಿತೀಶ್‍ಕುಮಾರ್‍ಗೆ ತೇಜಸ್ವಿ ಯಾದವ್ ಮಾಸ್ಟರ್ ಸ್ಟ್ರೋಕ್ ಕೊಟ್ಟಿರುವುದು ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ. ಇಂದು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ನಿವಾಸದಲ್ಲಿ ಆರ್‍ಜೆಡಿಯ ಮಹತ್ವದ ಸಭೆ ನಡೆಯಲಿದ್ದು, ತೇಜಸ್ವಿ ಯಾದವ್ ಎಲ್ಲಾ ಶಾಸಕರೊಂದಿಗೆ ರಣತಂತ್ರ ರೂಪಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಹಾರದಲ್ಲಿ ಬದಲಾಗುತ್ತಿರುವ ರಾಜಕೀಯದ ನಡುವೆ ತೇಜಸ್ವಿ ಯಾದವ್ ಅವರ ಈ ಸಭೆಯನ್ನು ಪ್ರಾಮುಖ್ಯತೆ ಪಡೆದುಕೊಂಡಿದೆ. ಇದೆಲ್ಲದರ ಮಧ್ಯೆ, ನಿತೀಶ್ ಕುಮಾರ್ ಅವರಿಗೆ ಈ ಬಾರಿ ದಂಗೆ ಸುಲಭವಲ್ಲ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. ತಮ್ಮ ಪಕ್ಷದ ಆರ್ಜೆಡಿಯ ಶಾಸಕರು ಮತ್ತು ಮುಖಂಡರೊಂದಿಗಿನ ಸಭೆಯಲ್ಲಿ ತೇಜಸ್ವಿ ಈ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳಿಂದ ಹೇಳಲಾಗುತ್ತಿದೆ. ಜೊತೆಗೆ, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕೂಡ ತಮ್ಮ ಬಳಿ ಬಹುಮತವಿದೆ ಎಂದು ಹೇಳಿದ್ದಾರೆ.

ನಿತೀಶ್ ಕುಮಾರ್ ಅವರೊಂದಿಗಿನ ಜೆಡಿಯು ಮೈತ್ರಿ ಮುರಿದರೆ, ಬಿಹಾರದಲ್ಲಿ ಅತಿದೊಡ್ಡ ಪಕ್ಷವಾಗಿರುವ ಆರ್ಜೆಡಿ ರಾಜಭವನಕ್ಕೆ ಹೋಗಿ ಸರ್ಕಾರ ರಚಿಸಲು ಹಕ್ಕು ಸಾಸಬಹುದು. ರಾಜಭವನಕ್ಕೆ ಹೋಗಲು ಅನುಮತಿ ಸಿಗದಿದ್ದರೆ ತೇಜಸ್ವಿ ಯಾದವ್ ಅವರು ತಮ್ಮ ಶಾಸಕರೊಂದಿಗೆ ರಾಜಭವನದ ಹೊರಗೆ ಧರಣಿ ನಡೆಸುವ ಸಾಧ್ಯತೆಯೂ ಇದೆ.

ಮೂಲಗಳ ಪ್ರಕಾರ, ಮುಂಬರುವ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿಯೇ ಹಲವು ಅಕಾರಿಗಳು ರಾಜಭವನಕ್ಕೆ ತೆರಳಿದ್ದು, ಸಿದ್ಧತೆ ಕುರಿತು ಚರ್ಚೆ ನಡೆಸಲಾಗಿದೆ. ರಾಜ್ಯ ಸರ್ಕಾರದ ಮೂವರು ಹಿರಿಯ ಅಧಿಕಾರಿಗಳು ರಾಜಭವನಕ್ಕೆ ತೆರಳಿದ್ದು, ಅದರಲ್ಲಿ ನಿತೀಶ್ ಕುಮಾರ್ ಅವರ ಪ್ರಮುಖ ಅಧಿಕಾರಿಯೊಬ್ಬರು ಉಪಸ್ಥಿತರಿದ್ದರು ಎಂದು ಮೂಲಗಳು ಬಹಿರಂಗಪಡಿಸಿವೆ.ರಾಜಭವನದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು ಎಂದು ಮೂಲಗಳು ಬಹಿರಂಗಪಡಿಸಿವೆ.

ನಿಗಮ – ಮಂಡಳಿ ನೇಮಕಾತಿ ಬೆನ್ನಲ್ಲೇ `ಕೈ’ನಲ್ಲಿ ಭುಗಿಲೆದ್ದ ಭಿನ್ನಮತ

ಬಿಹಾರದ ಮಹಾ ಘಟಬಂಧನ ಮೈತ್ರಿ ಸರ್ಕಾರದಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ಸಿಎಂ ಆಗಿದ್ದು, ಅಂಗ ಪಕ್ಷವಾದ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಡಿಸಿಎಂ ಆಗಿದ್ದಾರೆ. ಈ ಮೈತ್ರಿ ಕೂಟದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳೂ ಸೇರಿದಂತೆ ಹಲವು ಪಕ್ಷಗಳಿವೆ. ಇದೀಗ ನಿತೀಶ್ ಕುಮಾರ್ ಮತ್ತೆ ಎನ್‍ಡಿಎ ತೆಕ್ಕೆಗೆ ವಾಲಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. 2022ರಲ್ಲಿ ರಾಷ್ಟ್ರ ಮಟ್ಟದಲ್ಲಿ ಎನ್‍ಡಿಎ ಮೈತ್ರಿ ಕೂಟದಿಂದ ಹೊರ ಬಂದಿದ್ದ ನಿತೀಶ್ ಕುಮಾರ್, ಬಿಹಾರದಲ್ಲೂ ಬಿಜೆಪಿ ಮೈತ್ರಿ ಮುರಿದು ಮಹಾ ಘಟಬಂಧನದ ಜೊತೆ ಮೈತ್ರಿ ಸರ್ಕಾರ ರಚಿಸಿದ್ದರು. ಇದೀಗ ಎರಡೇ ವರ್ಷಗಳಲ್ಲಿ ಯೂ ಟರ್ನ್ ಹೊಡೆಯಲು ಮುಂದಾಗಿದ್ಧಾರೆ ಎನ್ನಲಾಗಿದೆ.

ಲೋಕ ಸಮರದಲ್ಲಿ ಶತಾಯ ಗತಾಯ ಬಿಜೆಪಿಯನ್ನು ಸೋಲಿಸುವ ಪಣ ತೊಟ್ಟು 28 ಪ್ರತಿಪಕ್ಷಗಳು ರಚಿಸಿಕೊಂಡಿರುವ ಐಎನ್‍ಡಿಐಎ ಮೈತ್ರಿ ಕೂಟದಲ್ಲಿ ಭಿನ್ನ ಮತದ ಬಿರುಗಾಳಿ ಜೋರಾಗಿದೆ. ಟಿಎಂಸಿ ಹಾಗೂ ಆಪ್ ಪಕ್ಷಗಳು ಪಶ್ಚಿಮ ಬಂಗಾಳ ಹಾಗೂ ಪಂಜಾಬ್‍ನಲ್ಲಿ ಏಕಾಂಗಿಯಾಗಿ ಸ್ರ್ಪಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ, ಈಗ ಬಿಹಾರದಲ್ಲಿ ಜೆಡಿಯು ಮುಖ್ಯಸ್ಥ ಹಾಗೂ ಸಿಎಂ ನಿತೀಶ್ ಕುಮಾರ್ ಐಎನ್‍ಡಿಐಎ ಮೈತ್ರಿಕೂಟದಿಂದ ದೂರ ಸರಿದು ಎನ್‍ಡಿಎ ಸೇರಿಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ಇದರ ಬೆನ್ನಲ್ಲೇ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ನಿತೀಶ್ ಅವರನ್ನು ತಮ್ಮ ನಿವಾಸಕ್ಕೆ ಕರೆದುಕೊಂಡು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ. ಬಿಹಾರದಲ್ಲಿ ಮಹಾ ಘಟಬಂಧನದ ಜೊತೆ ಮೈತ್ರಿ ಮುರಿದುಕೊಂಡು ಅವ ಪೂರ್ವವಾಗಿ ವಿಧಾನಸಭೆ ವಿಸರ್ಜಿಸಿ ಎನ್‍ಡಿಎ ಜೊತೆ ಸೇರಿ ಚುನಾವಣೆ ಎದುರಿಸಲು ನಿತೀಶ್ ಸಜ್ಜಾಗಿದ್ಧಾರೆ ಎನ್ನಲಾಗಿದೆ.

ಹೈಕಮಾಂಡ್ ನಿತೀಶ್ ಅವರನ್ನು ಸಂಪರ್ಕಿಸಲಿದೆ ಎಂದ ಮಾಜಿ ಡಿಸಿಎಂ ಸುಶೀಲ್‍ಕುಮಾರ್ ಮೋದಿ, ಮತ್ತೆ ಎನ್‍ಡಿಎ ಒಕ್ಕೂಟಕ್ಕೆ ನಿತೀಶ್ ಸೇರುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ. ಈ ಬೆಳವಣಿಗೆಯ ನಡುವೆ ಸುಶೀಲ್ ಮೋದಿ ಸೇರಿದಂತೆ ಬಿಹಾರ ಬಿಜೆಪಿಯ ಪ್ರಮುಖ ನಾಯಕರನ್ನು ಪಕ್ಷದ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ.

ರಾಜಕೀಯ ಗೊಂದಲದ ನಡುವೆಯೇ ಹೊಸ ಸರ್ಕಾರ ರಚನೆಯಾಗುವ ಸೂಚನೆಗಳು ಗೋಚರಿಸುತ್ತಿದ್ದು, ಇದರ ಸಿದ್ಧತೆಗೆ ಸಂಬಂಸಿದಂತೆ ರಾಜಭವನದಲ್ಲಿ ಚಟುವಟಿಕೆ ನಡೆಯುತ್ತಿದೆ ಎಂದು ಮೂಲಗಳಿಂದ ವರದಿಯಾಗಿದೆ. ಇದೇ ವೇಳೆ ಆರ್‍ಜೆಡಿ ಪಾಳಯವೂ ಈ ನಿಟ್ಟಿನಲ್ಲಿ ಸಕ್ರಿಯವಾಗಿದ್ದು, ಒಂದು ವೇಳೆ ಮೈತ್ರಿ ಮುರಿದರೆ ಇಂದು ಮಧ್ಯಾಹ್ನ 1 ಗಂಟೆಗೆ ತೇಜಸ್ವಿ ಯಾದವ್ ನೇತೃತ್ವದಲ್ಲಿ ಸರ್ಕಾರ ರಚಿಸಲು ಆರ್‍ಜೆಡಿ ಹಕ್ಕು ಸಾಧಿಸಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ.

RELATED ARTICLES

Latest News