Saturday, December 14, 2024
Homeರಾಜ್ಯಸುಫಾರಿ ಕೊಟ್ಟು ತಂದೆಯ ಕೊಲ್ಲಿಸಿದ ಮಗ

ಸುಫಾರಿ ಕೊಟ್ಟು ತಂದೆಯ ಕೊಲ್ಲಿಸಿದ ಮಗ

ಬಾಗಲಕೋಟೆ, ಜ.27-ಆಸ್ತಿ ಹಂಚಿಕೆ ವಿಚಾರಕ್ಕೆ ಉಂಟಾದ ಭಿನ್ನಾಭಿಪ್ರಾಯದಲ್ಲಿ ತಂದೆಯ ಮೇಲೆ ಸಿಟ್ಟಾದ ಮಗ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ಚೆನ್ನಪ್ಪ (66) ಕೊಲೆಯಾದ ತಂದೆ. ಹತ್ಯೆ ಆರೋಪಿಗಳಾದ ಮಗ ಚನ್ನಬಸಪ್ಪ, ಪತ್ನಿ ಶಿವಬಸವ್ವ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದ ವಾಸಿಗಳಾದ ಚೆನ್ನಪ್ಪ ಅವರಿಗೆ 37 ಎಕರೆ ಜಮೀನು ಇದ್ದು, ಅದನ್ನು ಭಾಗ ಮಾಡಲು ಮಗ ಚನ್ನಬಸಪ್ಪ ಒತ್ತಾಯಿಸುತ್ತಿದ್ದ. ಇದೇ ವಿಚಾರಕ್ಕೆ ಇತ್ತೀಚೆಗೆ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಚನ್ನಬಸಪ್ಪ ಮತ್ತು ಪತ್ನಿ ಶಿವಬಸವ್ವ ಹೇಗಾದರು ಮಾಡಿ ಚೆನ್ನಪ್ಪನನ್ನು ಮುಗಿಸಲು ಸಂಚು ರೂಪಿಸಿದ್ದರು.

ಡಿಕೆಶಿ ಮನೆಗೆ ಗೃಹಸಚಿವ ಪರಮೇಶ್ವರ್ ದಿಢೀರ್ ಭೇಟಿ

ವಿಜಯಪುರ ಜಿಲ್ಲೆಯ ನಿಡಗುಂದಿ ಮೂಲದ ಮಾಂತೇಶ್ ಮರಡಿಮಠ ಎಂಬುವನಿಗೆ 3 ಲಕ್ಷ ರೂ. ನೀಡಿ ಚೆನ್ನ ಪ್ಪನನ್ನು ಕೊಲೆ ಮಾಡುವಂತೆ ಸುಫಾರಿ ನೀಡಿದ್ದರು. ಆದರಂತೆ ಆತ ಕಳೆದ ಜ.25ರ ರಾತ್ರಿ ರಾಂಪುರ ಗ್ರಾಮದ ಬಳಿ ಚೆನ್ನಪ್ಪನನ್ನು ಮಚ್ಚಿನಿಂದ ಕೊಚ್ಚಿ, ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಿದ್ದಾನೆ.

ಕೊಲೆ ಸುದ್ದಿ ತಿಳಿದು ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಪಾಪಿ ಮಗನ ಕೃತ್ಯ ಬೆಳಕಿಗೆ ಬಂದಿದೆ. ಚನ್ನಬಸಪ್ಪನ ಆಪ್ತ ಗೆಳೆಯರಮೇಶ್ ಮನಗೂಳಿ ಕೂಡ ಈ ಕೊಲೆ ಯೋಚನೆಯಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News