Saturday, October 12, 2024
Homeರಾಷ್ಟ್ರೀಯ | Nationalಬಂಧಿತ ಸಚಿವ ಸೆಂಥಿಲ್ ಬಾಲಾಜಿಗೆ ಆಂಜಿಯೋಗ್ರಾಮ್ ಮಾಡಲು ಸೂಚನೆ

ಬಂಧಿತ ಸಚಿವ ಸೆಂಥಿಲ್ ಬಾಲಾಜಿಗೆ ಆಂಜಿಯೋಗ್ರಾಮ್ ಮಾಡಲು ಸೂಚನೆ

ಚೆನ್ನೈ, ನ.15- ಬಂಧಿತ ತಮಿಳುನಾಡು ಸಚಿವ ವಿ.ಸೆಂಥಿಲ್ ಬಾಲಾಜಿ ಅವರನ್ನು ಇಲ್ಲಿನ ಸರ್ಕಾರಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸರಣಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಂಜಿಯೋಗ್ರಾಮ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಜೂನ್‍ನಲ್ಲಿ ಉದ್ಯೋಗಕ್ಕಾಗಿ ನಗದು ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿತ್ತು. ಪುಝಲ್ ಜೈಲಿನಲ್ಲಿದ್ದ ಬಾಲಾಜಿ ಅವರ ಆರೋಗ್ಯ ಬುಧವಾರ ಹದಗೆಟ್ಟಿದೆ. ಬೆನ್ನು, ಕುತ್ತಿಗೆ ನೋವು ಮತ್ತು ಕಾಲಿನ ಮರಗಟ್ಟುವಿಕೆ ಹೆಚ್ಚಾಗಿದ್ದರಿಂದ ತಕ್ಷಣ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಓಮಂದೂರರ್ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೃದ್ರೋಗ ತಜ್ಞರನ್ನೊಳಗೊಂಡ ವೈದ್ಯರ ತಂಡವು ಅವರನ್ನು ಪರೀಕ್ಷಿಸಿದೆ. ಎಕೋ ಮತ್ತು ಇಸಿಜಿಯಲ್ಲಿ ಯಾವುದೇ ಪ್ರಮುಖ ವ್ಯತ್ಯಾಸಗಳು ಕಂಡು ಬಂದಿಲ್ಲ. ಸಣ್ಣ ಪ್ರಮಾಣದ ಸಮಸ್ಯೆ ಇರುವುದರಿಂದ ಆಂಜಿಯೋಗ್ರಾಮ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗುಂಡಿನ ಚಕಮಕಿ : ಕೊಡಗು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಹೈಅಲರ್ಟ್

ಆಂಜಿಯೋಗ್ರಾಮ್ ಎನ್ನುವುದು ವ್ಯಕ್ತಿಯ ಹೃದಯದ ರಕ್ತನಾಳಗಳನ್ನು ನೋಡಲು ಎಕ್ಸ್-ರೇ ಇಮೇಜಿಂಗ್ ಅನ್ನು ಬಳಸುವ ಒಂದು ವಿಧಾನವಾಗಿದೆ. ಹೃದಯಕ್ಕೆ ಹೋಗುವ ರಕ್ತದ ಹರಿವಿನಲ್ಲಿ ತಡೆಗಳಿರುವುದನ್ನು ಪತ್ತೆ ಹಚ್ಚಲು ಸಾಮಾನ್ಯವಾಗಿ ಈ ಪರೀಕ್ಷೆ ಮಾಡಲಾಗುತ್ತದೆ.

47 ವರ್ಷ ವಯಸ್ಸಿನ ಸಚಿವರು ಜೂನ್ 14 ರಂದು ಅವರನ್ನು ಬಂಸಿದ ನಂತರ ಜೂನ್ 21 ರಂದು ಕಾಪೆರ್ರೇಟ್ ಆಸ್ಪತ್ರೆಯಲ್ಲಿ ಪರಿಧಮನಿಯ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳ ಪಡಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದಾಗಿನಿಂದ ಅವರು ಪುಝಲ್ ಜೈಲಿನಲ್ಲಿದ್ದರು.

RELATED ARTICLES

Latest News