Monday, May 13, 2024
Homeರಾಜ್ಯವಿವಾದಕ್ಕೀಡಾದ ಸಿಎಂ ಪುತ್ರ ಯತೀಂದ್ರರ ವಿಡಿಯೋ

ವಿವಾದಕ್ಕೀಡಾದ ಸಿಎಂ ಪುತ್ರ ಯತೀಂದ್ರರ ವಿಡಿಯೋ

ಬೆಂಗಳೂರು, ನ.16- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮೊಬೈಲ್‍ನಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.

ವಿಡಿಯೋದಲ್ಲಿ ಚರ್ಚಿಸಲಾದ ಮಾಹಿತಿ ಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಹರಿ ಹಾಯ್ದಿವೆ. ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಗ್ರಾಮವೊಂದರಲ್ಲಿ ಜನ ಸಂಪರ್ಕ ಸಭೆ ನಡೆಸುವ ವೇಳೆ ಯತೀಂದ್ರ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆರಂಭದಲ್ಲೇ ಹಲೋ ಅಪ್ಪಾ ಎಂದು ಮಾತು ಶುರು ಮಾಡಿದ್ದಾರೆ.

ಹಾಗಾಗಿ ಯತೀಂದ್ರ ಅವರು ಸಿದ್ದರಾಮಯ್ಯ ಅವರ ಜೊತೆಯಲ್ಲೇ ಮಾತನಾಡಿದ್ದಾರೆ ಎಂದು ಭಾವಿಸಲಾಗಿದೆ.
ವಿವೇಕಾನಂದನಾ ಎಲ್ಲಿಗೆ… ಇಲ್ಲಪ್ಪ ಇದ್ಯಾವುದು ಕೊಟ್ಟಿಲ್ಲ. ಯಾರು ಆ ಮಹದೇವ್… ? ಕೊಡಿ ಅವನಿಗೆ, ಅದಕ್ಕೆ ಹೇಳಿದ್ದು, ಕೊಡಿ ಆ ಮಹದೇವ್‍ಗೆ ಹೇಳ್ತೀನಿ. ನಾನು ಕೊಟ್ಟಿರೋದೆ ಐದು, ಅಲ್ಲಿ ಕೊಡಿ ಅದು ಎಂದು ಹೇಳುತ್ತಾರೆ.

ಅತ್ತ ಕಡೆ ಮೊಬೈಲ್ ಕೈ ಬದಲಾದಂತೆ ಕಂಡು ಬರುತ್ತಿದ್ದು, ಹಲೋ ಮಹದೇವ್ ಎಂದು ಯತೀಂದ್ರ ಮಾತು ಮುಂದುವರೆಸುತ್ತಾರೆ. ಮಹದೇವ್ ಯಾಕೆ ಯಾವುದ್ಯಾವುದೋ ಕೊಡ್ತಾ ಇದ್ದೀರಿ.. ? ಮತ್ತೆ ಇದೆಲ್ಲಾ ಯಾರು ಕೊಡ್ತಿರೋದು, ಲಿಸ್ಟ್ ಅಲ್ಲಿ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ, ಅಷ್ಟೇ ಮಾತ್ರ ಮಾಡಿ, ಒಕೆ ಎಂದು ಹೇಳಿ ಯತೀಂದ್ರ ಮೊಬೈಲ್ ಅನ್ನು ಸಹಾಯಕರಿಗೆ ಕೊಡುತ್ತಾರೆ.

ಗುಂಡಿನ ಚಕಮಕಿ : ಕೊಡಗು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಹೈಅಲರ್ಟ್

ಈ ವಿಡಿಯೋ ಮತ್ತು ಆಡಿಯೋದಲ್ಲಿ ಕಂಡು ಬಂದಿರುವಂತೆ ನಾಲ್ಕೈದು ಹೆಸರುಗಳನ್ನು ಕೊಡಲಾಗಿದೆ. ಅಷ್ಟಕ್ಕೆ ಸೀಮಿತವಾಗಿ ಕೆಲಸವಾಗಬೇಕು, ಉಳಿದವನ್ನು ಪರಿಗಣಿಸಬಾರದು ಎಂದು ಯತೀಂದ್ರ ಸೂಚನೆ ನೀಡಿರುವುದು ಕಂಡು ಬಂದಿದೆ.

ಆ ವಿಡಿಯೋದಲ್ಲಿ ಹೇಳಿರುವಂತೆ ನಾಲ್ಕೈದು ಹೆಸರುಗಳು ವರ್ಗಾವಣೆಯೇ, ಗುತ್ತಿಗೆಯೇ, ನೇಮಕವೇ ಯಾವುದು ಎಂದು ಸ್ಪಷ್ಟವಾಗಿಲ್ಲ. ಸಬ್ ರಿಜಿಸ್ಟರ್ ಆಗಿದ್ದ ಮಹದೇವ್ ಸಿದ್ದರಾಮಯ್ಯ ಅವರ ಸಂಬಂಧಿ ಎನ್ನಲಾಗಿದೆ. ಅವರು ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯಾಕಾರಿಯನ್ನಾಗಿ ಕೆಲಸ ಮಾಡುತ್ತಿದ್ದಾರೆ. ಯತೀಂದ್ರ ಅವರ ಜೊತೆಯಲ್ಲಿ ಮಾತನಾಡುವಾಗ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಮಾತುಕತೆ ಯಾವ ವಿಚಾರ ಕುರಿತು ಎಂಬುದು ಸ್ಪಷ್ಟವಾಗಿಲ್ಲ. ಬಿಜೆಪಿ ಇದನ್ನು ವರ್ಗಾವಣೆ ದಂಧೆ ಎಂದು ವ್ಯಾಖ್ಯಾನಿಸಿದೆ. ಯತೀಂದ್ರ ಮೊದಲಿನಿಂದಲೂ ಅಕಾರಿಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅದು ಮತ್ತೂ ಮುಂದುವರೆದಿದೆ, ಎಲ್ಲಾ ಕಾಲದಲ್ಲೂ ಇದು ನಡೆದಿದೆ. ಕಾಂಗ್ರೆಸ್ ಆಡಳಿತದಲ್ಲಿ ಇದು ಸ್ವಲ್ಪ ಹೆಚ್ಚಾಗಿದೆ ಎಂದು ಬಿಜೆಪಿ ನಾಯಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಆರೋಪಿಸಿದ್ದಾರೆ.

ಬೆಳಗಾವಿ ವಿಧಾನಮಂಡಲದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದು, ಅದಕ್ಕೂ ಮುನ್ನಾ ಬಿಜೆಪಿಯಿಂದ ಪ್ರತಿಭಟನೆ ನಡೆಸಲು ಚರ್ಚಿಸುವುದಾಗಿ ತಿಳಿಸಿದ್ದಾರೆ. ಜೆಡಿಎಸ್ ಕೂಡ ಇದನ್ನು ವರ್ಗಾವಣೆ ದಂಧೆ ಎಂದು ಟೀಕಿಸಿದೆ.

RELATED ARTICLES

Latest News