ಕಲಬುರಗಿ, ಅ.20- ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಬಿಜೆಪಿಯವರು ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷ ಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸೋಲಿನಿಂದ ಹತಾಶರಾಗಿರುವ ಬಿಜೆಪಿಯವರು ನನ್ನ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಜೊತೆ ನಾನು ಯಾವತ್ತು ಮಾತನಾಡಿಲ್ಲ. ಆ ವ್ಯಕ್ತಿಯನ್ನು ನೋಡೆ ಇಲ್ಲ. ಆತ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂದು ಕುಟುಂಬದ ಸದಸ್ಯರೇ ಪೊಲೀಸರಿಗೆ ದೂರು ಕೊಟ್ಟು, ಹೇಳಿಕೆ ನೀಡಿದ್ದಾರೆ. ಘಟನೆಯ ಬಳಿಕ ಮಾಧ್ಯಮದವರು ಶಿವಕುಮಾರ್ ಅವರ ಊರಿಗೆ ಹೋಗಿ ಹೇಳಿಕೆ ಪಡೆದಿದ್ದಾರೆ. ಅಲ್ಲಿಯೂ ಕುಟುಂಬದ ಸದಸ್ಯರು ಸತ್ಯ ಹೇಳಿದ್ದಾರೆ. ವಾಸ್ತವ ಏನು ಎಂದು ಎಲ್ಲರಿಗೂ ಗೋತ್ತಿದೆ ಎಂದರು.
ಆತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ಮಾತನಾಡಿರುವ ಆಡಿಯೋವನ್ನು ನಾನು ಕೇಳಿದ್ದೇನೆ. ಆದರಲ್ಲಿ ಜನರಲ್ ಆಗಿ ಮಾತನಾಡಿ ದ್ದಾರೆ. ಆಡಿಯೋ ಯಾರು ಕಳುಹಿಸಿದ್ದಾರೆ, ಹೇಗೆ ಬಂದಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾನೂನು ತನ್ನದೆ ಆದ ಕ್ರಮ ಕೈಗೊಳ್ಳುತ್ತದೆ. ಈ ಹಿಂದೆ ಬಿಜೆಪಿ ಈಶ್ವರಪ್ಪ ಸೇರಿದಂತೆ ಹಲವರ ಮೇಲೆ ನಿರ್ದಿಷ್ಟ ಆರೋಪಗಳಿದ್ದವು, ಈಗ ನನ್ನ ಮೇಲೆ ಇರುವ ಆರೋಪಗಳೇನು? ಯಾವ ಕಾರಣಕ್ಕೆ ನಾನು ರಾಜಿನಾಮೆ ನೀಡಬೇಕು ಎಂದು ಪ್ರಶ್ನಿಸಿದರು.
ಸತೀಶ್ ಜಾರಕಿಹೊಳಿ ಅಸಮಾಧಾನದಿಂದ ಪಕ್ಷಕ್ಕೆ ನಷ್ಟವಿಲ್ಲ : ಸಚಿವ ರಾಜಣ್ಣ
ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ ಈ ಮೊದಲು ಭಯದ ವಾತಾವರಣ ಇತ್ತು. ಬಿಜೆಪಿ ಕಾರ್ಯಕರ್ತರು ತಮ್ಮಲ್ಲೆ ಹಲ್ಲೆ ಮಾಡಿಕೊಂಡು ಜನರಲ್ಲಿ ಆತಂಕ ಮೂಡಿಸಿದ್ದರು. ಈಗ ಅಂತಹ ವಾತಾವರಣ ಇಲ್ಲವಾಗಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಪಾಲನೆ ಮಾಡಲಾಗಿದೆ ಎಂದರು.
ಶಿವಕುಮಾರ್‍ನ ಆತ್ಮಹತ್ಯೆ ಬಗ್ಗೆ ಸ್ಥಳೀಯರು ನನಗೆ ಮಾಹಿತಿ ನೀಡಿದ್ದರು. ಆರೋಪ ಮಾಡಿರು ವುದೇಕೆ ಎಂದು ಗೋತ್ತಿಲ್ಲ. ಕಾಂಗ್ರೆಸ್ ನವರು ಮನೆ ಮನೆ ಗಳಲ್ಲಿ ಜಗಳ ತಂದಿಡುತ್ತಾರೆ ಎಂದು ಸಾರ್ವತ್ರಿಕವಾಗಿ ಆರೋಪ ಮಾಡಿರುವುದು ಕಂಡು ಬಂದಿದೆ. ನನ್ನ ಮೇಲೆ ನಿರ್ದಿಷ್ಟ ಆರೋಪಗಳಿಲ್ಲ. ಬಿಜೆಪಿಯವರು ದೊಡ್ಡ ಪ್ರಮಾಣದಲ್ಲಿ ಸೋಲು ಕಂಡ ಬಳಿಕ ಹತಾಶರಾಗಿದ್ದು, ಆರೋಪ ಮಾಡುತ್ತಿದ್ದಾರೆ. ಸಂತೋಷ ಪೂಜಾರಿ ಆರೋಪದ ಬಗ್ಗೆ ಊರಿನವರಿಗೆ ಮಾಹಿತಿ ಇಲ್ಲ. ಆತ್ಮಹತ್ಯೆ ಮಾಡಿಕೊಂಡಿ ರುವುದಂತೂ ನಿಜ, ಅದಕ್ಕೆ ಕಾರಣಗಳೇನು ಎಂದು ಪೊಲೀಸರು ತನಿಖೆ ನಡೆಸುತ್ತಾರೆ ಎಂದರು.
ಗ್ಯಾರಂಟಿ ಸರ್ಕಾರದ ಕಲೆಕ್ಷನ್ ವಂಶಾವಳಿ ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ
ಆತನನ್ನು ನಾನು ನೋಡಿಲ್ಲ, ಮಾತನಾಡಿಸಿಲ್ಲ. ಕರೆ ಮಾಡಿಲ್ಲ, ಭೇಟಿಯಾಗಿಲ್ಲ, ಅವರ ಕುಟುಂಬದ ಸದಸ್ಯರೊಂದಿಗೂ ಮಾತನಾಡಿಲ್ಲ. ಆದರೂ ನನ್ನ ಹೆಸರು ಏಕೆ ಪ್ರಸ್ತಾಪ ಮಾಡಲಾಗಿದೆ ಎಂದು ಗೋತ್ತಿಲ್ಲ. ಪ್ರಕರಣದಲ್ಲಿ ನಾನು ಯಾರ ಮೇಲೂ ಒತ್ತಡ ಹೇರಿಲ್ಲ, ಅದರ ಅಗತ್ಯವೂ ನನಗೆ ಇಲ್ಲ. ನಾನು ಏನು ಎಂದು ಜಿಲ್ಲೆಯ ಜನರಿಗೆ ಗೊತ್ತಿದೆ. 2004ರಿಂದಲೂ ಶಾಸಕನಾಗಿ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಹೊರತು ಪಡಿಸಿ ದೌರ್ಜನ್ಯದ ರಾಜಕಾರಣವನ್ನು ನಾನು ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.