Friday, July 19, 2024
Homeಬೆಂಗಳೂರುಯಲಹಂಕ ಶಾಸಕ ವಿಶ್ವನಾಥ್ ಸಂಬಂಧಿ ಮನೆಯಲ್ಲಿ 2 ಕೋಟಿ ಮೌಲ್ಯದ ಚಿನ್ನಾಭರಣ ಕಳವು

ಯಲಹಂಕ ಶಾಸಕ ವಿಶ್ವನಾಥ್ ಸಂಬಂಧಿ ಮನೆಯಲ್ಲಿ 2 ಕೋಟಿ ಮೌಲ್ಯದ ಚಿನ್ನಾಭರಣ ಕಳವು

ಬೆಂಗಳೂರು, ನ.7- ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಸಂಬಂಧಿಕರ ನಿವಾಸದ ಬಾಗಿಲು ಮೀಟಿ ಒಳ ನುಗ್ಗಿರುವ ಚೋರರು ನಗದು ಸೇರಿದಂತೆ 2 ಕೋಟಿ ರೂ. ಮೌಲ್ಯದ ಚಿನ್ನಾಭರಣ, ವಜ್ರ ಬೆಲೆಬಾಳುವ ವಾಚ್‍ಗಳು ಹಾಗೂ ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನ್ಯಾಯಾಂಗ ಬಡಾವಣೆಯಲ್ಲಿರುವ ರಾಮಮೂರ್ತಿ ಅವರ ನಿವಾಸದಲ್ಲಿ ಈ ಬಾರಿ ಕಳ್ಳತನ ನಡೆದಿದೆ. ಇವರು ರಿಯಲ್ ಎಸ್ಟೇಟ್ ಹಾಗೂ ಗುತ್ತಿಗೆದಾರರಾಗಿದ್ದು, ಶಾಸಕ ವಿಶ್ವನಾಥ್ ಅವರ ಸಂಬಂಧಿ. ಕುಟುಂಬ ಸಮೇತರಾಗಿ ಬೇರೆ ಊರಿಗೆ ತೆರಳಿದ್ದ ರಾಮಮೂರ್ತಿ ಅವರು ಮನೆಗೆ ಬಂದಾಗ ಬಾಗಿಲು ತೆರೆದಂತಿತ್ತು. ಒಳ ಹೋಗಿ ನೋಡಿದಾಗ ಕೆಲ ವಸ್ತುಗಳು ಚಿಲ್ಲಾಪಿಲ್ಲಿಯಾಗಿ ಬಿದಿದ್ದವು.

ಮಿಜೋರಾಂನಲ್ಲಿ ಬಿಜೆಪಿ ಜೊತೆ ಮೈತ್ರಿಯಿಲ್ಲ : ಝೋರಾಮ್‍ತಂಗ

ಬಾಗಿಲ ಡೋರ್‍ಲಾಕ್‍ನ್ನು ಮೀಟಿ ಒಳನುಗ್ಗಿರುವ ಚೋರರು ಸುಮಾರು 15 ಲಕ್ಷ ರೂ. ನಗದು, ಅಪರ ಪ್ರಮಾಣದ ಚಿನ್ನಾಭರಣ, ವಜ್ರದ ಆಭರಣಗಳು, ಬೆಲೆಬಾಳುವ ವಾಚ್‍ಗಳು ಹಾಗೂ ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿರುವುದು ಗೊತ್ತಾಗಿದೆ.

ತಕ್ಷಣ ಅವರು ಯಲಹಂಕ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಸ್ಥಳೀಯ ಸಿಸಿ ಟವಿಗಳನ್ನು ಪರಿಶೀಲಿಸಿ ಚೋರರ ಪತ್ತೆಗೆ ಬಲೆಬೀಸಲಾಗಿದೆ.

RELATED ARTICLES

Latest News