Tuesday, October 8, 2024
Homeರಾಜ್ಯಶಾಸಕರ ಗುರುತಿಗೆ ಚಿನ್ನಮಿಶ್ರಿತ ಗಂಡಭೇರುಂಡ ಲಾಂಛನ

ಶಾಸಕರ ಗುರುತಿಗೆ ಚಿನ್ನಮಿಶ್ರಿತ ಗಂಡಭೇರುಂಡ ಲಾಂಛನ

ಬೆಂಗಳೂರು,ಫೆ.21- ಶಾಸಕರನ್ನು ಗುರುತಿಸಲು ಅನುಕೂಲವಾಗುವಂತೆ ವಿಧಾನಸಭೆ ಸಚಿವಾಲಯ ಚಿನ್ನ ಮಿಶ್ರಿತ ಗಂಡಭೇರುಂಡ ಲಾಂಛನವನ್ನು ವಿಧಾನಸಭೆ ಸದಸ್ಯರಿಗೆ ವಿತರಿಸಿದೆ. ಕಳೆದ 9 ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಹಲವಾರು ಮಂದಿ ಹೊಸ ಶಾಸಕರು ಆಯ್ಕೆಯಾಗಿದ್ದಾರೆ. ಹೊಸ ಮುಖಗಳನ್ನು ಗುರುತಿಸಲು ಕಷ್ಟವಾಗುತ್ತಿದೆ. ಈ ಹಿಂದೆ ಹಿರಿಯ ಅಪರಿಚಿತ ನಾಗರಿಕರೊಬ್ಬರು ವಿಧಾನಸಭೆ ಕಲಾಪ ನಡೆಯುತ್ತಿದ್ದಾಗ ಸಭಾಂಗಣದ ಒಳಗೆ ಬಂದು ಕುಳಿತುಕೊಂಡಿದ್ದರು. ಭದ್ರತಾ ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳಿಗೆ ಶಾಸಕರನ್ನು ಗುರುತಿಸುವಾಗ ಗೊಂದಲಗಳಾಗುತ್ತಿದ್ದವು. ಇದಕ್ಕೆ ಶಾಶ್ವತ ಪರಿಹಾರವೆಂಬಂತೆ ಗಂಡಭೇರುಂಡ ಲಾಂಛನದ ಫಲಕವನ್ನು ಜಾರಿಗೆ ತರಲಾಗಿದೆ.

ಭಾಗಶಃ ಪ್ರಮಾಣದ ಚಿನ್ನಮಿಶ್ರಿತ ಲೋಹದ ಗಂಡಭೇರುಂಡ ಲಾಂಛನದ ಮಧ್ಯೆ ಎಂಎಲ್‍ಎ ಎಂದು ಇಂಗ್ಲಿಷ್‍ನಲ್ಲಿ ಬರೆಯಲಾಗಿದೆ. ಹೈಡ್ರೀಮ್ಸ್ ಸಂಸ್ಥೆ ಈ ಲಾಂಛನವನ್ನು ವಿಧಾನಸಭೆಗೆ ಪೂರೈಸಿದೆ. ಲಾಂಛನ ಬಳಕೆ ಮಾಡುವ ಬಗ್ಗೆ ಶಾಸಕರಿಗೆ ಸೂಚನೆ ಕೂಡ ನೀಡಲಾಗಿದೆ. ಶಾಸಕರಿಗೆ ಮಾತ್ರ ಈ ರೀತಿಯ ಲಾಂಛನವನ್ನು ನೀಡಲಾಗಿದ್ದು, ಅದನ್ನು ಧರಿಸಿದವರನ್ನು ಗುರುತಿಸಲು ಸುಲಭವಾಗುತ್ತದೆ ಎಂದು ಹೇಳಲಾಗಿದೆ.

ಕಳೆದ 10 ವರ್ಷಗಳಲ್ಲಿ 13 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ : ಬೊಮ್ಮಾಯಿ

ವಿಧಾನಸಭೆಯಲ್ಲಿ ಇಂದು ಶಾಸಕರಿಗೆ ಲಾಂಛನವನ್ನು ವಿತರಿಸಲಾರಂಭಿಸಲಾಯಿತು. ಕಲಾಪದ ಆರಂಭದಲ್ಲೇ ವಿಧಾನಸಭಾಧ್ಯಕ್ಷರು ಎಲ್ಲರೂ ಲಾಂಛನವನ್ನು ಧರಿಸಿಯೇ ಕಲಾಪಕ್ಕೆ ಬರಬೇಕು. ಕ್ಷೇತ್ರದಲ್ಲಿ ಪ್ರವಾಸ ಮಾಡುವಾಗ ದೆಹಲಿಗೆ ತೆರಳಿದಾಗ ದೇಶ, ವಿದೇಶಗಳ ಪ್ರಯಾಣದ ವೇಳೆ ಈ ಲಾಂಛನ ಬಳಕೆ ಮಾಡುವುದರಿಂದ ಶಾಸಕರನ್ನು ಗುರುತಿಸಲು ಸುಲಭವಾಗುತ್ತದೆ ಎಂದರು. ಹೀಗಾಗಿ ನಾಳೆಯಿಂದ ಎಲ್ಲಾ ಶಾಸಕರು ಸದನಕ್ಕೆ ಲಾಂಛನ ಬಳಸಿ ಬರುವುದು ಸೂಕ್ತ ಎಂದು ಸಭಾಧ್ಯಕ್ಷರು ಹೇಳಿದರು.

RELATED ARTICLES

Latest News