Tuesday, May 7, 2024
Homeಕ್ರೀಡಾ ಸುದ್ದಿಮಾಡೆಲ್ ಆತ್ಮಹತ್ಯೆ ; ಕ್ರಿಕೆಟಿಗ ಅಭಿಷೇಕ್‍ ಶರ್ಮಾಗೆ ಸಮನ್ಸ್

ಮಾಡೆಲ್ ಆತ್ಮಹತ್ಯೆ ; ಕ್ರಿಕೆಟಿಗ ಅಭಿಷೇಕ್‍ ಶರ್ಮಾಗೆ ಸಮನ್ಸ್

ಸೂರತ್, ಫೆ. 21- ತಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದ ಮಾಡೆಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸನ್‍ರೈಸರ್ಸ್ ಹೈದ್ರಾಬಾದ್ ತಂಡದ ಯುವ ಆಟಗಾರ ಅಭಿಷೇಕ್ ಶರ್ಮಾಗೆ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ. ರೂಪದರ್ಶಿ ತನಿಯಾ ಸಿಂಗ್ (28) ಅವರು ಇತ್ತೀಚೆಗೆ ಸೂರತ್‍ನ ವೆಸುರಸ್ತೆಯಲ್ಲಿರುವ ಹ್ಯಾಪಿ ಎಲೆಗೆನ್ಸಿ ಅಪಾರ್ಟ್‍ಮೆಂಟ್‍ನಲ್ಲಿರುವ ತಮ್ಮ ಮನೆಯಲ್ಲಿ ನಿಗೂಢವಾಗಿ ಆತ್ಮಹತ್ಯೆಗೆ ಶರಣಾಗಿದ್ದು ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಳೆದ ಎರಡೂವರೆ ವರ್ಷಗಳಿಂದ ಮಾಡೆಲ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ತನಿಯಾ ಸಿಂಗ್, ನಿನ್ನೆ (ಫೆಬ್ರವರಿ 20) ಆತ್ಮಹತ್ಯೆಗೆ ಶರಣಾಗಿದ್ದು ಅವರ ಕುಟುಂಬದ ಸದಸ್ಯರು ದಿಗ್ಭ್ರಾಮೆಯಲ್ಲಿ ಮುಳುಗಿದ್ದಾರೆ. ತನಿಯಾ ಅವರ ಮೊಬೈಲ್ ಅನ್ನು ಪರಿಶೀಲಿಸಿರುವ ಪೊಲೀಸರು ಆಕೆಯು ಕೊನೆಯ ಬಾರಿ ಯುವ ಕ್ರಿಕೆಟಿಗ ಅಭಿಷೇಕ್ ಶರ್ಮಾಗೆ ಕರೆ ಮಾಡಿದ್ದು, ಮಾಡೆಲ್ ಆತ್ಮಹತ್ಯೆ ಪ್ರಕರಣದಲ್ಲಿ ಸನ್‍ರೈಸರ್ಸ್ ಹೈದ್ರಾಬಾದ್‍ನ ಯುವ ಆಟಗಾರನಿಗೆ ಏನಾದರೂ ಸಂಬಂಧವಿದೆಯೇ ಎಂಬುದನ್ನು ಅರಿಯುವ ಸಲುವಾಗಿ ಶರ್ಮಗೆ ಸಮನ್ಸ್ ಅನ್ನು ಕಳುಹಿಸಿದ್ದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಹೊಸ ಮುಖಗಳ ಪ್ರಯೋಗಕ್ಕೆ ಬಿಜೆಪಿ ಬ್ರೇಕ್

ಐಪಿಎಲ್ ಟೂರ್ನಿಯಲ್ಲಿ ಸನ್‍ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿಯ ಭರವಸೆಯ ಆಟಗಾರರಾಗಿರುವ ಅಭಿಷೇಕ್ ಶರ್ಮಾ ಕಳೆದೆರಡು ಆವೃತ್ತಿಗಳಿಂದ ಕ್ರಮವಾಗಿ 426 ಹಾಗೂ 226 ರನ್ ಗಳಿಸಿದ್ದಾರೆ.

RELATED ARTICLES

Latest News