Sunday, April 28, 2024
Homeರಾಜ್ಯಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್.ಎ.ಹ್ಯಾರೀಸ್ ಹಾಗೂ ಪುತ್ರ ಮುಹಮ್ಮದ್ ಹ್ಯಾರೀಸ್ ಹೆಸರು

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್.ಎ.ಹ್ಯಾರೀಸ್ ಹಾಗೂ ಪುತ್ರ ಮುಹಮ್ಮದ್ ಹ್ಯಾರೀಸ್ ಹೆಸರು

ನವದೆಹಲಿ,ಮಾ.21-ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಕೇರಳ, ಕರ್ನಾಟಕ ಮತ್ತು ಗೋವಾದಾದ್ಯಂತ ವ್ಯಾಪಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕರ್ನಾಟಕ ಕಾಂಗ್ರೆಸ್ ಶಾಸಕ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹ್ಯಾರೀಸ್ ಹಾಗೂ ಪುತ್ರ, ಕರ್ನಾಟಕ ಯುವ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹ್ಯಾರೀಸ್ ನಲಪಾಡ್ ಹೆಸರು ತಳಕು ಹಾಕಿಕೊಂಡಿದೆ.

ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರೀಸ್ ಅವರ ಅಧಿಕೃತ ಪ್ರೋಟೋಕಾಲ್ ಸ್ಟಿಕ್ಕರ್ ಇರುವ ಕಾರನ್ನು ಬಳಸಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಂಚಿಸಿದ ಆರೋಪಿ ಕೊಚ್ಚಿ ನಿವಾಸಿ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಕರ್ನಾಟಕ ವಿಧಾನಸಭೆಯ ಪ್ರೋಟೋಕಾಲ್( ಶಿಷ್ಟಚಾರ) ವಿಭಾಗವು ಕಾಂಗ್ರೆಸ್ ಶಾಸಕರಿಗೆ ಸ್ಟಿಕ್ಕರ್ ನೀಡಿತ್ತು.

ಜಾರಿನಿರ್ದೇಶನಾಲಯದ ಪ್ರಕಾರ, ಹ್ಯಾರೀಸ್ ಅವರ ಮಗ ಮತ್ತು ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾರಿಸ್ ನಲಪಾಡ್ ಕಾರ್ ಖರೀದಿಸಿದ್ದಾರೆ. ಆದರೆ ಈ ಕಾರನ್ನು ಶಾಸಕರ ನಿಕಟ ಸಂಬಂಧಿ ಮತ್ತು ಅವರ ರಾಜಕೀಯ ಸಹಾಯಕ ನಫೀಹ್ ಮುಹಮ್ಮದ್ ನಾಸರ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.

ಕೇರಳದ ಚಿನ್ನದ ವ್ಯಾಪಾರಿಯ ಅಕ್ರಮ ಚಿನ್ನ ಸಾಗಣೆ ಮಾಡುತ್ತಿದ್ದ ಕಾರು ಮತ್ತು ಅದರಲ್ಲಿ ಬಳಸಲಾದ ಕರ್ನಾಟಕ ಸರ್ಕಾರದ ಸ್ಟಿಕ್ಕರ್ ಹ್ಯಾರೀಸ್ ಮತ್ತವರ ಪುತ್ರನಿಗೆ ಸಂಬಂಧಿಸಿದ್ದಾಗಿದೆ ಎಂದು ಇ.ಡಿ ತಿಳಿಸಿದೆ. ಕರ್ನಾಟಕ, ಕೊಚ್ಚಿ ವಲಯ ಕಚೇರಿ ಇತ್ತೀಚೆಗೆ ಕೇರಳದ ಉದ್ಯಮಿ ಮೊಹಮ್ಮದ್ ಹಫೀಜ್ ಮತ್ತು ಇತರರಿಗೆ ಸಂಬಂಧಿಸಿದಂತೆ ಮಾ.14ರಿಂದ ಮಾ.16ರವರೆಗೆ ಕೇರಳ, ಕರ್ನಾಟಕ ಮತ್ತು ಗೋವಾದಾದ್ಯಂತ ಒಂಬತ್ತು ಸ್ಥಳಗಳಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.

ದಾಳಿ ವೇಳೆ ಇಡಿ ಅಧಿಕಾರಿಗಳು 1,672.8 ಗ್ರಾಂ ಚಿನ್ನಾಭರಣಗಳು, 12.5 ಲಕ್ಷ ರೂ., ಏಳು ಮೊಬೈಲ್ ಫೋನ್‍ಗಳು ಮತ್ತು ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಆರೋಪಿಗಳಿಗೆ ಸೇರಿದ 4.4 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್/ನಿಶ್ಚಿತ ಠೇವಣಿಗಳನ್ನು ಸ್ಥಗಿತಗೊಳಿಸಲು ಇಡಿ ಆದೇಶ ಹೊರಡಿಸಿದೆ.

ಕೇರಳ ಪೊಲೀಸರು, ಗೋವಾ ಪೊಲೀಸರು ಮತ್ತು ಕರ್ನಾಟ ಸಹಕಾರದಿಂದ ತನಿಖೆ ನಡೆಸಲಾಗುತ್ತಿದೆ.ಹೆಚ್ಚುವರಿ ಹಣಕ್ಕಾಗಿ ಕಾನೂನುಬಾಹಿರ ಬೇಡಿಕೆಗಳನ್ನು ಈಡೇರಿಸಲು ಹಫೀಜ್ ಮತ್ತು ಅವನ ಸಹಚರರು ವಂಚನೆ, ಹಣ ದುರುಪಯೋಗ, ನಕಲಿ ಮತ್ತು ದಾಖಲೆಗಳ ತಯಾರಿಕೆ ಸೇರಿದಂತೆ ವಿವಿಧ ಅಪರಾಧಗಳಲ್ಲಿ ತೊಡಗಿದ್ದಾರೆ ಎಂದು ಇ.ಡಿ ಪ್ರಕಟಣೆ ತಿಳಿಸಿದೆ.

ಇ.ಡಿ ಹೇಳಿಕೆಯ ಪ್ರಕಾರ, ನಾಸರ್ ಪ್ರಮುಖ ಆರೋಪಿ ಮುಹಮ್ಮದ್ ಹಫೀಜ್‍ನ ಆಪ್ತ ಸ್ನೇಹಿತ. ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದೆ.ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002ರಡಿ ಇ.ಡಿ ಕೊಚ್ಚಿ ವಲಯದ ಅಧಿಕಾರಿಗಳು ಮಾ.14, 15 ಮತ್ತು 16ರಂದು ಕೊಚ್ಚಿ ನಿವಾಸಿ ಮುಹಮ್ಮದ್ ಹಫೀಜ್ ಮತ್ತು ಇತರರಿಗೆ ಸೇರಿದ ಕರ್ನಾಟಕ, ಕೇರಳ ಮತ್ತು ಗೋವಾದ ಒಂಬತ್ತು ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿತ್ತು.

ಹಣ ದುರುಪಯೋಗ, ನಕಲಿ ದಾಖಲೆಗಳ ಸೃಷ್ಟಿಸಿ ವಂಚನೆಗೆ ಸಂಬಂಸಿದಂತೆ ಐಪಿಸಿ ಸೆಕ್ಷನ್‍ಗಳಡಿ ಕರ್ನಾಟಕ, ಕೇರಳ ಮತ್ತು ಗೋವಾದಲ್ಲಿ ಪೊಲೀಸರು ದಾಖಲಿಸಿದ ಎಫ್‍ಐಆರ್‍ಗಳಲ್ಲಿ ಹಫೀಜ್ ಮತ್ತು ಅವನ ಸಹಚರರು ಹೆಸರಿದೆ. ಹಫೀಜ್ ತನ್ನ ಅತ್ತೆಯಂದಿರಿಂದ 108.73 ಕೋಟಿ ರೂ. ಮೌಲ್ಯದ ವರದಕ್ಷಿಣೆ ಪಡೆದಿದ್ದಾನೆ.

RELATED ARTICLES

Latest News