Friday, May 3, 2024
Homeಬೆಂಗಳೂರುಅತ್ತೆಯನ್ನು ಕೊಂದ ಸೊಸೆ ಹಾಗೂ ಪ್ರಿಯಕರ ಸೇರಿ ಮೂವರ ಬಂಧನ

ಅತ್ತೆಯನ್ನು ಕೊಂದ ಸೊಸೆ ಹಾಗೂ ಪ್ರಿಯಕರ ಸೇರಿ ಮೂವರ ಬಂಧನ

ಬೆಂಗಳೂರು, ಅ.17- ಹಣಕಾಸು ಮತ್ತು ಸಾಂಸಾರಿಕ ವಿಚಾರದಲ್ಲಿ ತೊಂದರೆ ನೀಡುತ್ತಿದ್ದ ಅತ್ತೆಯನ್ನೇ ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದ ಪ್ರಕರಣವನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಭೇದಿಸಿ ಸೊಸೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಸೊಸೆ ರಶ್ಮೀ, ಪ್ರಿಯಕರ ಅಕ್ಷಯ್ ಮತ್ತು ಈತನ ಸ್ನೇಹಿತ ಪುರುಷೋತ್ತಮ್ ಬಂಧಿತ ಆರೋಪಿಗಳು.

ಮಂಜುನಾಥ ಎಂಬುವರ ಪತ್ನಿ ರಶ್ಮೀ ತನ್ನ ಕಟ್ಟಡದ 1ನೇ ಮಹಡಿಯಲ್ಲಿ ವಾಸವಿದ್ದ ಅಕ್ಷಯ್ ಎಂಬುವನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡು ಅತ್ತೆ ಲಕ್ಕಮ್ಮ (52) ಅವರನ್ನು ಕೊಲೆ ಮಾಡಲು ಸಂಚು ರೂಪಿಸಿ, ಅಕ್ಟೋಬರ್ 5ರಂದು ಮಧ್ಯಾಹ್ನ 2.30ರ ಸುಮಾರಿನಲ್ಲಿ ಊಟಕ್ಕೆ ರಾಗಿ ಮುದ್ದೆಯಲ್ಲಿ ನಿದ್ದೆ ಮಾತ್ರೆಗಳನ್ನು ಬೆರಸಿ ಲಕ್ಕಮ್ಮರವರಿಗೆ ನೀಡಿದ್ದಾರೆ.

ಊಟವಾದ ನಂತರ ಲಕ್ಕಮ್ಮವರು ಮನೆಯ ಹಾಲ್‍ನಲ್ಲಿ ಮಲಗಿದ್ದು, ಆಗ ಅಕ್ಷಯ್ ತನ್ನ ಸ್ನೇಹಿತನೊಂದಿಗೆ ಬಂದು ಲಕ್ಕಮ್ಮ ಅವರ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸಂಜೆ ರಶ್ಮೀ ಹೃದಯಾಘಾತದಿಂದ ಅತ್ತೆ ಲಕ್ಕಮ್ಮ ಮರಣ ಹೊಂದಿರುವುದಾಗಿ ಬಿಂಬಿಸಿದ್ದು, ಅದನ್ನು ನಂಬಿದ ಪತಿ ಮಂಜುನಾಥ ಅವರು ಸಂಬಂಧಿಕರಿಗೆ ವಿಷಯ ತಿಳಿಸಿ ನಂತರ ಶವವನ್ನು ತೆಗೆದುಕೊಂಡು ಹೋಗಿ ತಮ್ಮ ಊರಾದ ಕುಣಿಗಲ್ ತಾಲ್ಲೂಕಿನ ಮುದಿಗೆರೆ ಶೆಟ್ಟಿಪಾಳ್ಯದ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಿರುತ್ತಾರೆ.

ಎಟಿಎಂ ಯಂತ್ರ ಹಿಡಿದು ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಇದಾದ 9 ದಿನಗಳ ನಂತರ ತನ್ನ ತಾಯಿಯನ್ನು ಪತ್ನಿ ರಶ್ಮೀ, ಆಕೆಯ ಪ್ರಿಯಕರ ಅಕ್ಷಯ್ ಮತ್ತು ಅವನ ಸ್ನೇಹಿತ ಪುರುಷೊತ್ತಮ್ ರವರು ಸೇರಿ ಕೊಲೆ ಮಾಡಿದ್ದಾರೆಂದು ಅಕ್ಷಯ್‍ನ ಸ್ನೇಹಿತ ರಾಘವೇಂದ್ರನಿಂದ ಗೊತ್ತಾಗಿದೆ.ವಾಟ್ಸಾಪ್ ಚಾಟ್‍ಗಳನ್ನು ನೋಡಿ ಅನುಮಾನ ಬಂದ ಮೇರೆಗೆ ಮಂಜುನಾಥರವರು ತನ್ನ ತಾಯಿಯನ್ನು ಕೊಲೆ ಮಾಡಲಾಗಿದೆ. ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಲು ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತರಾದ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಕೆಂಗೇರಿ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಹೆಚ್.ಎಸ್. ಪರಮೇಶ್ವರ್ ಅವರ ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಿದ್ದರು.

ಸದರಿ ತಂಡದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಪುಟ್ಟ ಓಬಳರೆಡ್ಡಿ ಮತ್ತು ಶಶಿಧರ್ ಈ.ವಣ್ಣೂರ ಮತ್ತು ಸಿಬ್ಬಂದಿಯವರಾದ ರಾಜಣ್ಣ, ಮಹೇಶ, ಅಭಿಷೇಕ್, ರಮ್ಯ, ಆಶಾ ಮತ್ತು ಮಾಬು ಬೈರವಾಡಗಿ ಅವರು ಆರೋಪಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೇಶದೊಂದಿಗೆ ಪಾಲುದಾರರಾಗಲು ಹೂಡಿಕೆದಾರರಿಗೆ ಮೋದಿ ಕರೆ

ಲಕ್ಕಮ್ಮ ಅವರು ಹಣಕಾಸಿನ ವಿಚಾರದಲ್ಲಿ ಮತ್ತು ಸಾಂಸಾರಿಕ ವಿಚಾರದಲ್ಲಿ ತೊಂದರೆ ನೀಡುತ್ತಿದ್ದರಿಂದ ಸೊಸೆ ರಶ್ಮೀಯು ಆರೋಪಿ ಅಕ್ಷಯ್‍ನೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡು ಕೊಲೆಗೆ ಸಂಚು ರೂಪಿಸಿ, ಅವರ ಪೂರ್ವ ನಿಯೋಜಿತ ಸಂಚಿನಂತೆ ಊಟದಲ್ಲಿ ನಿದ್ದೆಮಾತ್ರೆಗಳನ್ನು ಹಾಕಿದ್ದು, ಆನಂತರ ಆರೋಪಿ ಅಕ್ಷಯ್‍ನು ತನ್ನ ಸ್ನೇಹಿತ ಆರೋಪಿ ಪುರುಷೋತ್ತಮ್‍ನೊಂದಿಗೆ ಸೇರಿ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿರುತ್ತದೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆಯನ್ನು ಮುಂದುವರೆಸಲಾಗಿದೆ.

RELATED ARTICLES

Latest News